AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಒಂದೇ ರಾತ್ರಿ 30ಕ್ಕೂ ಹೆಚ್ಚು ಬೈಕ್​ಗಳ ಬ್ಯಾಟರಿ ಕದ್ದ ಕಳ್ಳರು; ಸಿಸಿಟಿವಿ ಇದ್ದರೂ ಮನೆ ಮುಂದೆ ವಾಹನ ನಿಲ್ಲಿಸುವಾಗ ಎಚ್ಚರ

ಒಮ್ಮೆ ಅಳವಡಿಸಿದ ಸಿಸಿಟಿವಿ ಕ್ಯಾಮೆರಾಗಳತ್ತ ಮತ್ತೆ ತಿರುಗಿ ನೋಡದ ಬಿಬಿಎಂಪಿ ಅವುಗಳನ್ನು ಸರಿಪಡಿಸಿಸುವ ಮನಸ್ಸನ್ನೂ ಮಾಡಿಲ್ಲ. ಬಿಬಿಎಂಪಿಯ ಈ ನಿರ್ಲಕ್ಷ್ಯತನವನ್ನು ಅರಿತ ಕಳ್ಳರು ಇದೀಗ ನಿರ್ಭೀತಿಯಿಂದ ಸಿಸಿಟಿವಿ ಎದುರಿನಲ್ಲೇ ಇದ್ದ ಬೈಕ್​ಗಳ ಬ್ಯಾಟರಿ ಕದ್ದೊಯ್ದಿದ್ದಾರೆ.

ಬೆಂಗಳೂರು: ಒಂದೇ ರಾತ್ರಿ 30ಕ್ಕೂ ಹೆಚ್ಚು ಬೈಕ್​ಗಳ ಬ್ಯಾಟರಿ ಕದ್ದ ಕಳ್ಳರು; ಸಿಸಿಟಿವಿ ಇದ್ದರೂ ಮನೆ ಮುಂದೆ ವಾಹನ ನಿಲ್ಲಿಸುವಾಗ ಎಚ್ಚರ
ಬೈಕ್​ ಬ್ಯಾಟರಿ ಕದ್ದ ಕಳ್ಳರು
TV9 Web
| Updated By: Skanda|

Updated on: Sep 09, 2021 | 9:27 AM

Share

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಕಳ್ಳರ ಉಪಟಳ ಹೆಚ್ಚಾಗಿದ್ದು, ಪೊಲೀಸರು ಎಷ್ಟೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರೂ ಅದರ ಪ್ರಯೋಜನ ಮಾತ್ರ ಕಾಣಿಸುತ್ತಿಲ್ಲ. ಮನೆ ಮುಂದೆ ನಿಲ್ಲಿಸುವ ವಾಹನಗಳ ಮೇಲೆ ಕಣ್ಣಿಟ್ಟಿರುವ ಚೋರರ ಗುಂಪು ನಿನ್ನೆ ರಾತ್ರಿಯೊಂದರಲ್ಲೇ ಕೆ.ಎಚ್.ಪಿ ಕಾಲೋನಿಯಲ್ಲಿ 30 ಬೈಕ್​ಗಳ ಬ್ಯಾಟರಿ ಕಳ್ಳತನ ಮಾಡಿದೆ. ಏರಿಯಾದಲ್ಲಿ ಸಿಸಿ ಕ್ಯಾಮೆರಾ ಇದ್ದರೂ ಈ ಕೃತ್ಯ ನಡೆದಿರುವುದನ್ನು ನೋಡಿದರೆ ಬಿಬಿಎಂಪಿ ಕೂಡಾ ಬರೀ ಆರಂಭ ಶೂರತ್ವಕ್ಕೆ ಹೆಸರುವಾಸಿ ಎನ್ನುವುದು ಮತ್ತೆ ಸಾಬೀತಾದಂತೆ ಆಗಿದೆ.

ಸುಮಾರು ಒಂದೂವರೆ ಕೋಟಿ ಖರ್ಚು ಮಾಡಿ ಈ ಹಿಂದೆ ಬಿಬಿಎಂಪಿ ವತಿಯಿಂದ ಸಿಸಿಟಿವಿ ಅಳವಡಿಸಲಾಗಿದೆಯಾದರೂ ಅವು ಈಗ ಕೆಲಸವನ್ನೇ ಮಾಡುತ್ತಿಲ್ಲ. ಒಮ್ಮೆ ಅಳವಡಿಸಿದ ಸಿಸಿಟಿವಿ ಕ್ಯಾಮೆರಾಗಳತ್ತ ಮತ್ತೆ ತಿರುಗಿ ನೋಡದ ಬಿಬಿಎಂಪಿ ಅವುಗಳನ್ನು ಸರಿಪಡಿಸಿಸುವ ಮನಸ್ಸನ್ನೂ ಮಾಡಿಲ್ಲ. ಬಿಬಿಎಂಪಿಯ ಈ ನಿರ್ಲಕ್ಷ್ಯತನವನ್ನು ಅರಿತ ಕಳ್ಳರು ಇದೀಗ ನಿರ್ಭೀತಿಯಿಂದ ಸಿಸಿಟಿವಿ ಎದುರಿನಲ್ಲೇ ಇದ್ದ ಬೈಕ್​ಗಳ ಬ್ಯಾಟರಿ ಕದ್ದೊಯ್ದಿದ್ದಾರೆ.

ಒಂದೇ ರಾತ್ರಿಯಲ್ಲಿ ಕೆ.ಎಚ್.ಪಿ ಕಾಲೋನಿಯಲ್ಲಿ ಸುಮಾರು ಮೂವತ್ತು ಬೈಕ್ ಬ್ಯಾಟರಿಗಳನ್ನು ಕದಿಯಲಾಗಿದ್ದು, ಅದೇ ಏರಿಯಾದಲ್ಲಿ ಏಳೆಂಟು ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ವಿಪರ್ಯಾಸವೆಂದರೆ ಆ ಕ್ಯಾಮೆರಾಗಳ ಎದುರಿನಲ್ಲೇ ಇದ್ದ ಬೈಕ್​ಗಳ ಬ್ಯಾಟರಿ ಕೂಡಾ ನಾಪತ್ತೆಯಾಗಿದ್ದು, ರಾತ್ರಿ ಬೆಳಗಾಗುವುದರೊಳಗೆ ಕೈಚಳಕ ತೋರಿದ ಕಳ್ಳರು ಸರಣಿ ಕಳ್ಳತನ ನಡೆಸಿ ಪರಾರಿಯಾಗಿದ್ದಾರೆ.

ಬಿಬಿಎಂಪಿ ಸಿಸಿಟಿವಿ ಕುರಿತಾಗಿ ಈ ಬಗೆಯ ನಿರ್ಲಕ್ಯ ತೋರಿಸಿರುವುದೇ ಈ ಘಟನೆಗೆ ಕಾರಣ ಎಂದು ಆಕ್ರೋಶ ಹೊರಹಾಕಿರುವ ಸಾರ್ವಜನಿಕರು ತಕ್ಷಣವೇ ಆರೋಪಿಗಳನ್ನು ಬಂಧಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಕಳ್ಳರ ಚೈಳಕಕ್ಕೆ ಈಗಾಗಲೇ ರೋಸಿ ಹೋದ ಏರಿಯಾ ಮಂದಿ ಬಿಬಿಎಂಪಿ ಹಾಗೂ ಪೊಲೀಸರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಮಾಗಡಿ ರಸ್ತೆ ಪೊಲೀಸರು ಒಂದೇ ರಾತ್ರಿಯಲ್ಲಿ ಮೂವತ್ತು ಬೈಕ್​ಗಳ ಬ್ಯಾಟರಿ ಕದ್ದು ಪರಾರಿಯಾದ ಆರೋಪಿಗಳಿಗಾಗಿ ಶೋಧ ಕಾರ್ಯ ಶುರುಮಾಡಿದ್ದಾರೆ.

ಇದನ್ನೂ ಓದಿ: ತುಮಕೂರು: ತರಕಾರಿ ಮಾರಿ ಮನೆಗೆ ಹೋಗುತ್ತಿದ್ದ ರೈತನನ್ನು ಅಡ್ಡಗಟ್ಟಿ 15 ಸಾವಿರ ರೂ. ಹಣ ಹಾಗೂ 2 ಮೊಬೈಲ್​ ದೋಚಿದ ಕಳ್ಳರು 

ಮಂಡ್ಯ: ಕಾಡು ಹಂದಿ ಶಿಕಾರಿಗೆಂದು ಬೇರೆ ಊರಿನಿಂದ ಬಂದು ಯುವಕನಿಗೆ ಗುಂಡು ಹೊಡೆದ ಬೇಟೆಗಾರರು

(More than 30 bike batteries stolen in a night parked in front of non working CCTV of BBMP in Bengaluru)