ಗಣೇಶನ ಹೆಸರು ನಿಮ್ಮದಾಗಿದ್ದರೆ ವಂಡರ್​ಲಾ ಅಮ್ಯೂಸ್​​ಮೆಂಟ್​ ಪಾರ್ಕ್​ಗೆ ಉಚಿತ ಪ್ರವೇಶ ಪಡೆಯಬಹುದು

TV9 Digital Desk

| Edited By: ಸಾಧು ಶ್ರೀನಾಥ್​

Updated on:Sep 09, 2021 | 10:04 AM

wonderla amusement park- bidadi: ಅಂದಹಾಗೆ ಮೊದಲು ಬರುವ 100 ಮಂದಿಗೆ ವಂಡರ್​ಲಾ ಅಮ್ಯೂಸ್​​ಮೆಂಟ್​ ಪಾರ್ಕ್​ಗೆ ಉಚಿತ ಪ್ರವೇಶ ಲಭಿಸಲಿದೆ. ಆ ನೂರು ಮಂದಿಯು ತಮ್ಮ ಹೆಸರು ನಮೂದಾಗಿರುವಂತಹ ಸೂಕ್ತ ಗುರುತಿನ ಚೀಟಿಯನ್ನು ಪ್ರವೇಶದ ವೇಳೆ ತೋರಿಸಬೇಕು.

ಗಣೇಶನ ಹೆಸರು ನಿಮ್ಮದಾಗಿದ್ದರೆ ವಂಡರ್​ಲಾ ಅಮ್ಯೂಸ್​​ಮೆಂಟ್​ ಪಾರ್ಕ್​ಗೆ ಉಚಿತ ಪ್ರವೇಶ ಪಡೆಯಬಹುದು
ವಂಡರ್​ಲಾ (ಸಂಗ್ರಹ ಚಿತ್ರ)

ರಾಮನಗರ: ರಾಮನಗರ ಜಿಲ್ಲೆಯ ಬಿಡದಿ ಬಳಿಯಿರುವ ಪ್ರಸಿದ್ಧ ವಂಡರ್​ಲಾ ಅಮ್ಯೂಸ್​​ಮೆಂಟ್​ ಪಾರ್ಕ್​ ಈ ಬಾರಿ ಗಣೇಶನ ಹಬ್ಬದ ಅಂಗವಾಗಿ (Ganesha Chaturthi 2021) ವಿಶೇಷ ಕೊಡುಗೆಯೊಂದನ್ನು ನೀಡಲು ಮುಂದಾಗಿದೆ. ವಿಘ್ನನಿವಾರಕ ಗಣಪನ 108 ಹೆಸರುಗಳ ಪೈಕಿ ಯಾವುದೇ ಒಂದು ಹೆಸರು ನಿಮ್ಮದಾಗಿದ್ದರೆ ನೀವು ನಾಳೆ ಶುಕ್ರವಾರ ಗಣೇಶನ ಹಬ್ಬದಂದು ರಾಜಧಾನಿ ಬೆಂಗಳೂರಿಗೆ ಅಂಟಿಕೊಂಡಂತೆ ಇರುವ ರಾಮನಗರ ಜಿಲ್ಲೆಯ ಬಿಡದಿ ಬಳಿಯಿರುವ ಪ್ರಸಿದ್ಧ ವಂಡರ್​ಲಾ ಅಮ್ಯೂಸ್​​ಮೆಂಟ್​ ಪಾರ್ಕ್​ಗೆ ಉಚಿತ ಪ್ರವೇಶ ಪಡೆಯಬಹುದು. ವಂಡರ್​ಲಾ ಅಮ್ಯೂಸ್​​ಮೆಂಟ್​ ಪಾರ್ಕ್​ ಸಂಸ್ಥೆಯು ಈ ಉಚಿತ ಪ್ರವೇಶ ಅವಕಾಶವನ್ನು ಘೋಷಿಸಿದೆ.

ಫಸ್ಟ್​ ಕಮ್​ ಫಸ್ಟ್​ ಸರ್ವ್​: ಅಂದಹಾಗೆ ಮೊದಲು ಬರುವ 100 ಮಂದಿಗೆ ವಂಡರ್​ಲಾ ಅಮ್ಯೂಸ್​​ಮೆಂಟ್​ ಪಾರ್ಕ್​ಗೆ (wonderla amusement park- bidadi) ಉಚಿತ ಪ್ರವೇಶ ಲಭಿಸಲಿದೆ (free entry). ಆ ನೂರು ಮಂದಿಯು ತಮ್ಮ ಹೆಸರು (ganesha name) ನಮೂದಾಗಿರುವಂತಹ ಸೂಕ್ತ ಗುರುತಿನ ಚೀಟಿಯನ್ನು ಪ್ರವೇಶದ ವೇಳೆ ತೋರಿಸಬೇಕು.

ಹೆಚ್ಚಿನ ವಿವರಗಳಿಗೆ ವಂಡರ್​ಲಾ ಅಮ್ಯೂಸ್​​ಮೆಂಟ್​ ಪಾರ್ಕ್ ದೂರವಾಣಿ ಸಂಖ್ಯೆ 080-37230333 ಮತ್ತು 080-35073966 ಮೂಲಕ ಸಂಪರ್ಕಿಸಬಹುದು ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

Also Read: ಶುಕ್ರವಾರ ಗಣೇಶ ಚತುರ್ಥಿ: ಸಕಲ ದೇವಗಣದಲ್ಲಿ ಶ್ರೇಷ್ಠನೂ, ಪ್ರಥಮ ಪೂಜ್ಯನೂ ಆದ ವಿಘ್ನನಿವಾರಕನ ಸೃಷ್ಟಿ ರಹಸ್ಯ ಇಲ್ಲಿದೆ

Also Read: Ganesha Chaturthi 2021: ಗಣೇಶ ಹಬ್ಬದ ದಿನ ವಿನಾಯಕನಿಗೆ ಈ ಐದು ವಸ್ತು ಸಮರ್ಪಿಸಿ, ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಿ

(persons with ganesha name can get free entry to wonderla amusement park at bidadi on ganesh chaturthi)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada