ಈ ತಿಂಗಳು 10 ಕೆಜಿ ಅಕ್ಕಿ ಸಿಗುವುದು ಡೌಟು: ಸತೀಶ್​ ಜಾರಕಿಹೊಳಿ

|

Updated on: Jun 20, 2023 | 3:03 PM

ಕೇಂದ್ರದಲ್ಲಿ ಏಳು ಲಕ್ಷ ಟನ್ ಅಕ್ಕಿ ದಾಸ್ತಾನು ಇದೆ. ನಾವು ಎರಡು ಲಕ್ಷ ಟನ್ ಅಕ್ಕಿಗೆ ಡಿಮ್ಯಾಂಡ್ ಮಾಡಿದ್ದೇವೆ. ನಿಮಗೆ ಕೊಡಲು ಆಗಲ್ಲಾ ಅಂತಾ ಆದೇಶ ಮಾಡಿದ್ದಾರೆ. ಖಾಸಗಿ ಅವರಿಗೆ ಕೊಡುತ್ತೇವೆ ಅಂತಾ ಹೇಳಿ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಈ ತಿಂಗಳು 10 ಕೆಜಿ ಅಕ್ಕಿ ಸಿಗುವುದು ಡೌಟು: ಸತೀಶ್​ ಜಾರಕಿಹೊಳಿ
ಸಚಿವ ಸತೀಶ್​ ಜಾರಕಿಹೊಳಿ
Follow us on

ಬೆಳಗಾವಿ: ಈ ತಿಂಗಳು 10 ಕೆಜಿ ಅಕ್ಕಿ ಸಿಗುವುದು ಡೌಟು ಮುಂದಿನ ತಿಂಗಳು ಕೊಡುತ್ತೇವೆ. ಜನರಿಗೆ ಸಂದೇಶ ಕೊಡಲು ಇಂದು (ಜೂ.10) ಪ್ರತಿಭಟನೆ ಮಾಡುತ್ತಿದ್ದೇವೆ. ಕೇಂದ್ರದಲ್ಲಿ ಏಳು ಲಕ್ಷ ಟನ್ ಅಕ್ಕಿ (Rice) ದಾಸ್ತಾನು ಇದೆ. ನಾವು ಎರಡು ಲಕ್ಷ ಟನ್ ಅಕ್ಕಿಗೆ ಡಿಮ್ಯಾಂಡ್ ಮಾಡಿದ್ದೇವೆ. ನಿಮಗೆ ಕೊಡಲು ಆಗಲ್ಲಾ ಅಂತಾ ಆದೇಶ ಮಾಡಿದ್ದಾರೆ. ಖಾಸಗಿ ಅವರಿಗೆ ಕೊಡುತ್ತೇವೆ ಅಂತಾ ಹೇಳಿ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪ್ರವಾಹ ಬಂದಾಗಲೂ ಪರಿಹಾರದ ವಿಚಾರದಲ್ಲಿ ಅನ್ಯಾಯ ಆಗಿದೆ. ಕೇಂದ್ರ ಸರ್ಕಾರದ ದ್ವಂದ್ವ ನೀತಿಯನ್ನ ಜನರಿಗೆ ತಿಳಿಸಲು ಪ್ರತಿಭಟನೆ ಮಾಡುತ್ತಿದ್ದೇವೆ. ಪಡಿತರದಲ್ಲಿ ಜೋಳ ಮತ್ತು ಗೋಧಿ ಕೊಡುವ ವಿಚಾರವಾಗಿ ಮಾತನಾಡಿದ ಅವರು ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆಸಿದ್ದೇವೆ, ಜೋಳ ಕೊಡಲು ಸಾಧ್ಯವಿಲ್ಲ. ಬೇರೆ ರಾಜ್ಯಗಳಿಂದ ಹೆಚ್ಚುವರಿ ಅಕ್ಕಿ ಪಡೆಯಲು ಪ್ರಯತ್ನ ನಡೆದಿದೆ ಎಂದರು.

ಇದನ್ನೂ ಓದಿ: ಕಾಂಗ್ರೆಸ್ ಕೈಯಲ್ಲಿ ಅಕ್ಕಿ ಕೊಡಲು ಆಗುತ್ತಿಲ್ಲ ಸುಳ್ಳು ಹೇಳುತ್ತಿದೆ: ಸಚಿವ ಪ್ರಹ್ಲಾದ್​ ಜೋಶಿ ವಾಗ್ದಾಳಿ

ಗ್ಯಾರಂಟಿ ಯೋಜನೆಯಿಂದ ಬಿಜೆಪಿಗೆ ಭಯ ಹುಟ್ಟಿದೆಯಾ ಎಂಬ ವಿಚಾರವಾಗಿ ಮಾತನಾಡಿದ ಅವರು ಲೋಕಸಭಾ ಚುನಾವಣೆವರೆಗೂ ಪರಿಣಾಮ ಯಾವ ಇರುತ್ತೆ ಅಂತ ಕಾದುನೋಡಬೇಕು. ಲೋಕಸಭೆ ಚುನಾವಣೆವರೆಗೂ ಅಷ್ಟೇ ಅಲ್ಲಾ ಐದು ವರ್ಷದವರೆಗೂ ಗ್ಯಾರಂಟಿ ಮುಂದುವರೆಯಲಿದೆ. ಕೇಂದ್ರ ಸರ್ಕಾರ ಕೇಳಿ ಘೋಷಣೆ ಮಾಡುವ ಅವಶ್ಯಕತೆ ಇಲ್ಲಾ. ಅವರ ಬಳಿ ದಾಸ್ತಾನು ಅಕ್ಕಿ ಕೊಡಿ ಅಂತಾ ಕೇಳುತ್ತಿದ್ದೇವೆ. ಉಚಿತವಾಗಿ ಕೇಳುತ್ತಿಲ್ಲ ದುಡ್ಡು ಕೊಡುತ್ತೇವೆ ಕೊಡಿ ಅಂತ ಕೇಳುತ್ತಿದ್ದೇವೆ ಆದರೂ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಅನ್ನ ಭಾಗ್ಯದ ಯೋಜನೆ ಅಡಿ 10 ಕೆಜಿ ಅಕ್ಕಿ ನೀಡುವ ವಿಚಾರವಾಗಿ ಆಢಳಿತಾರೂಢ ಕಾಂಗ್ರೆಸ್ ​ಹಾಗೂ ವಿಪಕ್ಷ ಬಿಜೆಪಿ ನಡುವೆ ವಾಗ್ಯುದ್ಧ ಶುರುವಾಗಿದೆ. ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ಅಕ್ಕಿ ನೀಡುತ್ತಿಲ್ಲವೆಂದು ಕಾಂಗ್ರೆಸ್​ ಆರೋಪಿಸುತ್ತಿದೆ. ಇತ್ತ ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರ ಈಗಾಗಲೆ 5 ಕೇಜಿ ಅಕ್ಕಿ ನೀಡುತ್ತಿದೆ ಎಂದು ಕಾಂಗ್ರೆಸ್​ ನಾಯಕರು ಒಪ್ಪಿಕೊಳ್ಳಲಿ ಎಂದು ವಾಗ್ದಾಳಿ ಮಾಡುತ್ತಿದ್ದಾರೆ.