ಬೆಳಗಾವಿ, ಅಕ್ಟೋಬರ್ 23: ಉತ್ತರ ಕನ್ನಡ (Uttar Kannada) ಜಿಲ್ಲೆಯ ಕ್ಯಾಸಲ್ ರಾಕ್ (Castle Rock) ಮತ್ತು ಬೆಳಗಾವಿ (Belagavi) ಜಿಲ್ಲೆಯ ಲೋಂಡಾ (Londa) ರೈಲು ನಿಲ್ದಾಣಗಳ ನಡುವೆ ಎಂಜಿನಿಯರಿಂಗ್ ಕಾಮಗಾರಿ ನಡೆಯಲಿದೆ. ಹೀಗಾಗಿ ಈ ಎರಡು ನಿಲ್ದಾಣಗಳ ನಡುವೆ ರೈಲು (Train) ಸಂಚಾರ ಒಂದು ತಿಂಗಳು ರದ್ದಾಗಲಿದೆ.
ಕ್ಯಾಸಲ್ ರಾಕ್ ಮತ್ತು ಲೋಂಡಾ ನಿಲ್ದಾಣಗಳ ನಡುವೆ ಎಂಜಿನಿಯರಿಂಗ್ ಕಾಮಗಾರಿ ಸಲುವಾಗಿ ಲೋಂಡಾ ಮತ್ತು ಕ್ಯಾಸಲ್ ರಾಕ್ ನಿಲ್ದಾಣಗಳ ನಡುವೆ ರೈಲು ಸಂಖ್ಯೆ 17333/17334 ಭಾಗಶಃ ರದ್ದಾಗಲಿವೆ ಎಂದು ನೈಋತ್ಯ ರೈಲ್ವೆ ವಲಯ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ: ದೀಪಾವಳಿ ಹಬ್ಬ: ಹುಬ್ಬಳ್ಳಿ-ಮಂಗಳೂರು ನಡುವೆ ವಿಶೇಷ ರೈಲು ಸಂಚಾರ
Kindly note the extension of Partial Cancellation of Train Services.
ರೈಲುಗಳ ಸಂಚಾರ ಭಾಗಶಃ ರದ್ದು ಮುಂದುವರಿಕೆಯನ್ನು ಗಮನಿಸಿ #SWRupdates pic.twitter.com/vLSFnvEnBJ— South Western Railway (@SWRRLY) October 22, 2024
ರಾಯದುರ್ಗ ಮತ್ತು ಕದಿರಿದೇವರಪಲ್ಲಿ ನಿಲ್ದಾಣಗಳ ನಡುವೆ ಯಾರ್ಡ್ ಮಾರ್ಪಾಡು ಮತ್ತು ಅಗತ್ಯ ಸುರಕ್ಷತಾ ಸಂಬಂಧಿತ ಕಾಮಗಾರಿಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಗುಂತಕಲ್ ಮತ್ತು ಕದಿರಿದೇವರ ನಿಲ್ದಾಣಗಳ ನಡುವೆ ರೈಲು ಸಂಖ್ಯೆ 07589/07590 ಭಾಗಶಃ ರದ್ದಾಗಲಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ