ನೆರೆ ಸಂತ್ರಸ್ತರ ಕರೆ ಬಂದರೆ ಫೋನ್ ಎಸೆಯಬೇಕಂತ ಅನಿಸುತ್ತೆ; ಅಥಣಿ ಶಾಸಕ ಮಹೇಶ್ ಕುಮಟ್ಟಳ್ಳಿಯ ಅಸಡ್ಡೆ ಮಾತುಗಳು ಫುಲ್ ವೈರಲ್

| Updated By: sandhya thejappa

Updated on: Jul 31, 2021 | 11:57 AM

ದುಕಿಗೆ ಆದಾರವಾಗಿದ್ದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗ್ಗಿದ್ದರಿಂದ ಮುಂದಿನ ಜೀವನ ಹೇಗೆ ಅಂತ ರೈತರು ಕಣ್ಣೀರು ಹಾಕುತ್ತಿದ್ದಾರೆ. ಈ ನಡುವೆ ಅಥಣಿ ಶಾಸಕ ನೆರೆ ಸಂತ್ರಸ್ತರ ಬಗ್ಗೆ ಅಸಡ್ಡೆ ಮಾತುಗಳನ್ನಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನೆರೆ ಸಂತ್ರಸ್ತರ ಕರೆ ಬಂದರೆ ಫೋನ್ ಎಸೆಯಬೇಕಂತ ಅನಿಸುತ್ತೆ; ಅಥಣಿ ಶಾಸಕ ಮಹೇಶ್ ಕುಮಟ್ಟಳ್ಳಿಯ ಅಸಡ್ಡೆ ಮಾತುಗಳು ಫುಲ್ ವೈರಲ್
ಬೆಂಬಲಿಗರ ಮುಂದೆ ಅಸಡ್ಡೆ ಮಾತುಗಳನ್ನಾಡಿದ ಶಾಸಕ ಮಹೇಶ್ ಕುಮಟ್ಟಳ್ಳಿ
Follow us on

ಬೆಳಗಾವಿ: ಜಿಲ್ಲೆಯಲ್ಲಿ ಸುಮಾರು 10 ದಿನಕ್ಕೂ ಹೆಚ್ಚು ಕಾಲ ಸುರಿದ ಭಾರೀ ಮಳೆಯಿಂದ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಏಕಾಏಕಿ ನದಿ ನೀರು ಮನೆಗಳಿಗೆ ನುಗ್ಗಿ ನೆರೆ ಸಂತ್ರಸ್ತರು ಪರದಾಡುವಂತಾಗಿತ್ತು. ಪ್ರವಾಹದ ಭೀತಿ ಹೆಚ್ಚಾದಂತೆ ಜನರನ್ನು ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿತ್ತು. ಆದರೆ ರೈತರು ಬೆಳೆದ ಬೆಳೆ ಪ್ರವಾಹಕ್ಕೆ ಸಿಕ್ಕಿ ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಬದುಕಿಗೆ ಆದಾರವಾಗಿದ್ದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗ್ಗಿದ್ದರಿಂದ ಮುಂದಿನ ಜೀವನ ಹೇಗೆ ಅಂತ ರೈತರು ಕಣ್ಣೀರು ಹಾಕುತ್ತಿದ್ದಾರೆ. ಈ ನಡುವೆ ಅಥಣಿ ಶಾಸಕ ನೆರೆ ಸಂತ್ರಸ್ತರ ಬಗ್ಗೆ ಅಸಡ್ಡೆ ಮಾತುಗಳನ್ನಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನೆರೆ ಬಂದು ಬೇರೆ ಬೇರೆ ಕಡೆ ಸಾಕಷ್ಟು ಸಮಸ್ಯೆಯಾಗಿದೆ. ನೆರೆ ಸಂತ್ರಸ್ತರಿಂದ ಕರೆ ಬಂದರೆ ಫೋನ್ ಬಿಸಾಡಬೇಕೆನಿಸುತ್ತೆ. ಬೆಡ್ಶೀಟ್ ಹಾಕಿಕೊಂಡು ಮಲಗಿಬಿಡೋಣ ಅನಿಸುತ್ತದೆ ಅಂತ ಮಾತನಾಡಿರುವ ಅಥಣಿ ಕ್ಷೇತ್ರದ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ವಿಡಿಯೋ ವೈರಲ್ ಆಗಿದೆ.

ಜುಲೈ 27ರಂದು ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಮಹೇಶ್ ಕುಮಟ್ಟಳ್ಳಿ ಬೆಂಬಲಿಗರ ಮುಂದೆ ಅಸಡ್ಡೆ ಮಾತುಗಳನ್ನಾಡಿದ್ದಾರೆ. ಪ್ರವಾಹ ಸಂತ್ರಸ್ತರು ಕುಡಿಯಲು ನೀರು ಕೇಳಿದಾಗ, ನನಗು ಒಂದು ಕ್ವಾಟರ್ ಕೊಡು ಅಂತ ಸಚಿವ ಸ್ಥಾನದ ಆಕಾಂಕ್ಷಿ ಆಗಿರುವ ಶಾಸಕ ಮಹೇಶ್ ಕುಮಟ್ಟಳ್ಳಿ ಉಡಾಫೆ ಉತ್ತರವನ್ನು ನೀಡಿದ್ದಾರೆ.

ಇದನ್ನೂ ಓದಿ

ಆನೇಕಲ್​​​ನಲ್ಲಿ ಒತ್ತುವರಿ ಸರ್ಕಾರಿ ಜಾಗ ತೆರವು ಕಾರ್ಯ; ಒಂದು ಗಂಟೆಯೊಳಗೆ ಜಾಗ ಖಾಲಿ ಮಾಡಲು ಸೂಚನೆ

ಕನ್ನಡ ಶಾಲೆಗಾಗಿ ಮತ್ತೊಂದು ಮಹತ್ವದ ಕಾರ್ಯ ಕೈಗೊಂಡ ಕಿಚ್ಚ ಸುದೀಪ್​ ಚಾರಿಟೇಬಲ್​ ಟ್ರಸ್ಟ್​

(MLA Mahesh Kumathalli has spoken indifferently about the neighboring victims and its video viral on social media)