ಇನ್ನೊಂದು ವರ್ಷದಲ್ಲಿ ಮಥುರಾ, ಕಾಶಿ ದೇಗುಲದ ಪಕ್ಕದಲ್ಲಿರುವ ಮಸೀದಿ ಧ್ವಂಸವಾಗುತ್ತದೆ: ಕೆಎಸ್ ಈಶ್ವರಪ್ಪ
ರಾಮ ಹುಟ್ಟಿದ ಜಾಗದಲ್ಲಿ ದೇವಸ್ಥಾನ ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿತ್ತು. ಈಗ ಅದನ್ನು ಕೆಡವಿ ರಾಮ ಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಇನ್ನೊಂದು ವರ್ಷದಲ್ಲಿ ಮಥರಾ ಹಾಗೂ ಕಾಶಿ ದೇವಸ್ಥಾನದ ಪಕ್ಕದಲ್ಲಿರುವ ಮಸೀದಿ ಧ್ವಂಸಗೊಳ್ಳುತ್ತದೆ ಎಂದು ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ವಿಶ್ವದಲ್ಲಿ ಮುಸ್ಲಿಮರಿಗೆ ತಾಕತ್ತಿದ್ದರೆ ದೇಗುಲ ಕೆಡವಿ ಮಸೀದಿ ಕಟ್ಟಲಿ ನೋಡೋಣ ಎಂದು ಸವಾಲು ಹಾಕಿದರು.
ಬೆಳಗಾವಿ, ಜ.7: ರಾಮ ಹುಟ್ಟಿದ ಜಾಗದಲ್ಲಿ ದೇವಸ್ಥಾನ ಕೆಡವಿ ಮಸೀದಿ ನಿರ್ಮಾಣ ಮಾಡಿ ಬಾಬರ್ ಮಸೀದಿ ಅಂತಾನೆ. ಸದ್ಯ ವಿಶ್ವದಲ್ಲಿ ಮುಸ್ಲಿಮರಿಗೆ ತಾಕತ್ತಿದ್ದರೆ ದೇಗುಲ ಕೆಡವಿ ಮಸೀದಿ ಕಟ್ಟಲಿ ನೋಡೋಣ ಎಂದು ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ (KS Eeshwarappa) ಸವಾಲು ಹಾಕಿದ್ದಾರೆ. ಅಲ್ಲದೆ, ನಾನು ಯಾಕೆ ಹೀಗೆ ಹೇಳುತ್ತಿದ್ದೇನೆ ಎಂದರೆ, ಅಂದು ಹಿಂದೂ ಸಂಘಟನೆಗಳು ಇರಲಿಲ್ಲ. ಆದರೆ ಈಗ ಅಂದಿನ ಸ್ಥಿತಿ ಇಲ್ಲ. ಇನ್ನೊಂದು ವರ್ಷದಲ್ಲಿ ಮಥರಾ ಹಾಗೂ ಕಾಶಿ ದೇವಸ್ಥಾನದ ಪಕ್ಕದಲ್ಲಿರುವ ಮಸೀದಿ ಧ್ವಂಸಗೊಳ್ಳುತ್ತದೆ ಎಂದಿದ್ದಾರೆ.
ಬೆಳಗಾವಿಯ ಉಚ್ಚಗಾವಿಯಲ್ಲಿ ನಡೆದ ಹಿಂದೂ ಸ್ನೇಹ ಸಮ್ಮೇಳನದಲ್ಲಿ ಮಾಡಿದ ಅವರು, ಅರ್ಧ ವಿಶ್ವನಾಥನ ದೇವಸ್ಥಾನ, ಇನ್ನು ಅರ್ಧ ಭಾಗದಲ್ಲಿ ಮಸೀದಿ ಹೇಗೆ ನಿರ್ಮಾಣವಾಯಿತು? ಮಂದಿರದಲ್ಲಿ ಹಿಂದೂಗಳ ಜೀವವಿದೆ ಎಂದು ಮುಸ್ಲಿಂ ದೊರೆಗಳಿಗೆ ಗೊತ್ತಿತ್ತು. ಮಂದಿರ ಹೊಡೆದಾಕಿದರೆ ಭಾರತ ನಮ್ಮದಾಗುತ್ತೆಂದು ಮುಸ್ಲಿಂ ದೊರೆಗಳು ಭಾವಿಸಿದ್ದರು. ಹಾಗಾಗಿಯೇ ಕಾಶಿ ವಿಶ್ವನಾಥ, ಶ್ರೀಕೃಷ್ಣನ ದೇವಸ್ಥಾನ ಹೊಡೆದು ಹಾಕಿದರು ಎಂದರು.
ರಾಮ ಮಂದಿರವಲ್ಲೇ ಕಟ್ಟುತ್ತೇವೆ ಎಂದು ಹೇಳುತ್ತಿದ್ದೆವು. ಅದರಂತೆ ಅಯೋಧ್ಯೆಯಲ್ಲಿ ಇಂದು ಶ್ರೀರಾಮಮಂದಿರ ನಿರ್ಮಾಣವಾಗುತ್ತಿದೆ. ಇನ್ನೆರಡು ದೇವಸ್ಥಾನಕ್ಕೆ ಕೋರ್ಟ್ ಆದೇಶಿಸಿದೆ. ಇನ್ನೊಂದು ವರ್ಷದಲ್ಲಿ ಮಥುರಾ, ಕಾಶಿ ದೇಗುಲದ ಪಕ್ಕದಲ್ಲಿರುವ ಮಸೀದಿ ಧ್ವಂಸವಾಗುತ್ತದೆ. ಆ ಜಾಗದಲ್ಲಿ ದೇವಸ್ಥಾನ ಪೂರ್ಣವಾಗುತ್ತದೆ, ಯಾವುದೇ ಅನುಮಾನ ಬೇಡ ಎಂದರು.
ಹಿಂದೂ, ಮುಸ್ಲಿಂ ಅಣ್ಣತಮ್ಮರ ರೀತಿಯಲ್ಲಿ ಇರಬೇಕು ಎಂಬುದು ನಮ್ಮ ಆಸೆ. ಹೀಗಾಗಿ ಎಲ್ಲೆಲ್ಲಿ ದೇವಸ್ಥಾನ ಕೆಡವಿ ಮಸೀದಿ ಕಟ್ಟಿದ್ದೀರೋ ಅದನ್ನು ಕಿತ್ತು ಬಿಸಾಕಿ. ಇಲ್ಲವಾದರೆ ರಾಮಭಕ್ತರೆಲ್ಲರೂ ನಿಮ್ಮೆಲ್ಲಾ ಮಸೀದಿಗಳನ್ನು ಕಿತ್ತುಹಾಕುತ್ತಾರೆ. ಅಲ್ಲಿ ಮಂದಿರ ಕಟ್ಟೇ ಕಟ್ಟುತ್ತೇವೆ ಎಂದು ದೇಶದಲ್ಲಿ ಇರುವ ಮುಸಲ್ಮಾನರಿಗೆ ಹೇಳಲು ಇಷ್ಟ ಪಡುತ್ತೇನೆ ಎಂದರು.
ವರದಿ: ಪ್ರತಾಪ್, ಟಿವಿ9 ಬೆಳಗಾವಿ
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ