ಬೆಳಗಾವಿ: ಜಿಲ್ಲೆಯ ಸಾರಥಿ ನಗರದಲ್ಲಿ ಅನಧಿಕೃತವಾಗಿ ಮಸೀದಿ ನಿರ್ಮಾಣ ಆರೋಪ ಮಾಡಿದ್ದು, ಒಂದು ವಾರದಲ್ಲಿ ಆ ಅಕ್ರಮ ಮಸೀದಿ (mosque) ನೆಲಸಮ ಮಾಡಬೇಕು. ಇಲ್ಲದಿದ್ರೆ ನಾನೇ ಬರ್ತೇನೆ ಎಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಿಗೆ ಶ್ರೀರಾಮಸೇನೆ (Sri ram sene) ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಎಚ್ಚರಿಕೆ ನೀಡಿದರು. ಬೆಳಗಾವಿ ಹಿಂದೂ ವಿರಾಟ ಸಮಾವೇಶದಲ್ಲಿ ಮಾತನಾಡಿ, ಮಸೀದಿ ಕೆಡವುದಾದ್ರೆ ಕೆಡವಿ, ಇಲ್ಲದಿದ್ರೆ ದೀರ್ಘ ರಜೆ ಮೇಲೆ ಹೋಗಿ. ಇಲ್ಲದಿದ್ರೆ ನನ್ನ ತಾಕತ್ ಏನು ಅಂತಾ ತೋರಿಸುತ್ತೇನೆಂದು ಎಂದು ಹೇಳಿದರು.
ದೇಶ, ಧರ್ಮ, ಸಂಸ್ಕೃತಿ, ಹಿಂದೂ ಉಳಿಯಬೇಕಂದ್ರೆ ಬಿಜೆಪಿ ಬೇಕು. ಒಂದು ಪಕ್ಷಕ್ಕಾಗಿ ಅಲ್ಲ. ಹಿಂದೂ ಧರ್ಮಕ್ಕೋಸ್ಕರ. ಈ ದೇಶ ಹಾಳು ಮಾಡಿ ಭಯೋತ್ಪಾದನಾ ನಿರ್ಮಾಣ ಮಾಡಿ ಭ್ರಷ್ಟಾಚಾರ ಮಾಡಿದ್ದು ಕಾಂಗ್ರೆಸ್ ಪಕ್ಷ. ಬಾಬರ್ ಸಮಾಧಿ ಮಾದರಿಯಲ್ಲಿ ಕಾಂಗ್ರೆಸ್ ಸಮಾಧಿ ಮಾಡಬೇಕಿದೆ. ಅದಕ್ಕೆ ಹಿಂದೂ ಸಮಾಜ ಒಗ್ಗಟ್ಟಾಗಬೇಕಿದೆ. ಕರ್ನಾಟಕ ಬಿಜೆಪಿಯವರು ಸ್ವಲ್ಪ ಗೊಂದಲ ಮಾಡ್ತಿದ್ದಾರೆ.
ಇದನ್ನೂ ಓದಿ: ಶಾರುಖ್, ಅಮೀರ್, ಸಲ್ಮಾನ್ ಖಾನ್ ದೇಶದ್ರೋಹಿಗಳು; ಪಠಾಣ್ ಸಿನಿಮಾ ಬಹಿಷ್ಕರಿಸಬೇಕು -ಪ್ರಮೋದ್ ಮುತಾಲಿಕ್
ಎಲ್ಲೋ ದಾರಿ ತಪ್ಪಿದವರನ್ನು ನಾವು ಸರಿ ಮಾಡೋಣ. ಗೋಹತ್ಯೆ ನಿಷೇಧ ಮಾಡಿದ್ದು ನಮ್ಮ ಕರ್ನಾಟಕ ಬಿಜೆಪಿಯವರು. ಕ್ರಿಶ್ಚಿಯನ್ ಮತಾಂತರ ನಿಷೇಧ ಕಾಯ್ದೆ ತಂದಿದ್ದು ಬಿಜೆಪಿ. ಮುಸ್ಲಿಂರಿಗೋಸ್ಕರ ಜೊಲ್ಲು ಸುರಿಸುವವರು ಕಾಂಗ್ರೆಸ್ನಲ್ಲಿ ಇದ್ದಾರೆ ಎಂದು ಕಿಡಿಕಾರಿದರು.
ಇಂದು ನಾವು ಜಾಗೃತರಾಗಬೇಕಿದೆ. ಅದು ಆರ್‌ಎಸ್ಎಸ್, ಬಜರಂಗದಳ, ಶ್ರೀರಾಮಸೇನೆ ಇರಬಹುದು. ಯಾವುದೇ ಹಿಂದೂ ಸಂಘಟನೆ ಇದ್ದರೂ ತನು ಮನ ಧನದಿಂದ ಬಲಗೊಳಿಸಿ. ದೇವಸ್ಥಾನಗಳಿಗೆ, ಮಠಾಧಿಪತಿಗಳಿಗೆ ದುಡ್ಡು ಹಾಕೋದು ನಿಲ್ಲಿಸಿ. ಹಿಂದೂಪರ ಕಾರ್ಯಕರ್ತರಿಗೆ ಸಹಾಯ ಮಾಡಿ. ಸ್ವದೇಶಿ ವಸ್ತುಗಳನ್ನೇ ಖರೀದಿ ಮಾಡಿ, ಮಾಲ್‌ಗಳಿಗೆ ಹೋಗಬೇಡಿ. ಚೀನಾ ವಸ್ತು ಖರೀದಿ ಮಾಡಬೇಡಿ. ವಿದೇಶಿ ವಸ್ತು ಬಹಿಷ್ಕರಿಸಿ ಸ್ವದೇಶಿ ವಸ್ತು ಖರೀದಿಸಿ. ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ, ಸಂಗೊಳ್ಳಿ ರಾಯಣ್ಣ ಕೀ ಜೈ ಅನ್ನಿ. ಶಸ್ತ್ರಪೂಜೆ ಆಗಬೇಕು ಮನೆಯಲ್ಲಿ ಶಸ್ತ್ರ ಇಡಬೇಕು. ದೇಶದ ಉಳಿವುಗೋಸ್ಕರ, ನಮ್ಮ ಹೆಣ್ಣು ಮಕ್ಕಳು ತಂದೆ ತಾಯಿ ಉಳಿಯಲು ಶಸ್ತ್ರ ಪೂಜೆ ಆಗಬೇಕು.
ಆಯುಧ ಪೂಜೆ ಅಂದ್ರೆ ಟ್ರ್ಯಾಕ್ಟರ್ ಸೇರಿ ವಾಹನಗಳು ಅಲ್ಲ. ತಲ್ವಾರ್, ಮಚ್ಚು, ಚಾಕು, ಕುಡಗೋಲು ಅದನ್ನ ಇಟ್ಟು ಪೂಜೆ ಮಾಡಿ. ಲವ್ ಜಿಹಾದ್ ಮಾಡೋರು, ಹಲಾಲ್, ಹಿಜಾಬ್ ಮೂಲಕ ಸಂವಿಧಾನ ಧಿಕ್ಕರಿಸುವರ ಜೊತೆ ವ್ಯಾಪಾರ ಬೇಡ. ಪೊಲೀಸ್ ಠಾಣೆ ಸುಟ್ಟು ಹಾಕೋರು, ಸೈನಿಕರ ಮೇಲೆ ಕಲ್ಲೆಸೆಯುವರ ಜೊತೆ ವ್ಯಾಪಾರ ನಿಲ್ಲಿಸಿ. ಇಸ್ಲಾಂರ ಜೊತೆ ವ್ಯಾಪಾರ ಮಾಡಿದ್ರೆ ಗೋಹತ್ಯೆ, ಲವ್ ಜಿಹಾದ್ಗೆ ಸಪೋರ್ಟ್ ಮಾಡಿದ ಹಾಗೆ, ಇದನ್ನ ಸಂಕಲ್ಪ ಮಾಡಿ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:03 pm, Sun, 8 January 23