ಬೆಳಗಾವಿ ಸೆ.12: ಚೆನ್ನಮ್ಮನ ನಾಡು ಬೆಳಗಾವಿ (Belagavi) ಮಹಾನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗುತ್ತಿದೆ. ಈ ಸಮಸ್ಯೆ ನಿವಾರಣೆಗೆ ನಗರದಲ್ಲಿನ ಹೃದಯ ಭಾಗವಾದ ಬಾಪಟ್ ಗಲ್ಲಿಯಲ್ಲಿ ಮಲ್ಟಿ ಲೆವಲ್ ಕಾರ್ ಪಾರ್ಕಿಂಗ್ (Multi level Car Parking) ಕಟ್ಟಡ ನಿರ್ಮಾಣ ಕಾಮಗಾರಿಗೆ ಸೋಮವಾರ ಬೆಳಗಾವಿ ಕ್ಷೇತ್ರದ ಶಾಸಕ ಆಸಿಫ್ (ರಾಜು) ಸೇಟ್ (Asif Raju Sait) ಅವರು ಶಂಕು ಸ್ಥಾಪನೆ ನೆರವೇರಿಸಿದರು.
ಮಹಾನಗರ ಪಾಲಿಕೆ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಈ ಮಲ್ಟಿ ಲೇವಲ್ ಪಾರ್ಕಿಂಗ್ ನಿರ್ಮಾಣ ಮಾಡಲಾಗುತ್ತಿದ್ದು, ಇದು ಆರು ಮಹಡಿಗಳನ್ನು ಹೊಂದಿರಲಿದೆ. ಈ ಕಟ್ಟಡದಲ್ಲಿ 120 ಕಾರುಗಳನ್ನು ಪಾರ್ಕ್ ಮಾಡಬಹುದಾಗಿದೆ. ಬಾಪಟ್ ಗಲ್ಲಿಯಲ್ಲಿ ಈ ಹಿಂದೆ ಹಲವು ಬಾರಿ ಮಲ್ಟಿ ಲೇವಲ್ ಪಾರ್ಕಿಂಗ್ ಕಟ್ಟಡ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಲಾಗಿತ್ತು. ಇದೀಗ ಶಂಕುಸ್ಥಾಪನೆ ನೆರವೇರಿದೆ.
ಇದನ್ನೂ ಓದಿ: IndiGo flight: ಬೆಳಗಾವಿ, ದೆಹಲಿ ನಡುವೆ ಅಕ್ಟೋಬರ್ 5ರಿಂದ ಆರಂಭವಾಗಲಿದೆ ಇಂಡಿಗೋ ವಿಮಾನ ಹಾರಾಟ
6.5 ಕೋಟಿ ರೂ. ವೆಚ್ಚದಲ್ಲಿ ಐದು ಅಂತಸ್ತಿನ ಕಟ್ಟಡವನ್ನು ಪಿಪಿಪಿ ಮತ್ತು ಬಿವಿಜಿ ಕಂಪನಿಯ ಸಹಭಾಗಿತ್ವದಲ್ಲಿ ಈ ಕಟ್ಟಡ ನಿರ್ಮಿಸಲಾಗುತ್ತಿದೆ. ಒಂದು ಅಂತಸ್ತಿನಲ್ಲಿ 30 ಕಾರುಗಳನ್ನು ಪಾರ್ಕ್ ಮಾಡಬಹುದಾಗಿದೆ. ಐದು ಅಂತಸ್ತುಗಳಲ್ಲಿ ಒಟ್ಟು 120 ಕಾರುಗಳನ್ನು ಪಾರ್ಕಿಂಗ್ ಮಾಡಬಹುದು. 2006 ರಲ್ಲಿ ರಾಜ್ಯ ಸರ್ಕಾರದ ನೂರು ಕೋಟಿ ರೂ. ವಿಶೇಷ ಅನುದಾನದಲ್ಲಿ ಇದನ್ನು ನಿರ್ಮಿಸಲು ಟೆಂಡರ್ ಕರೆಯಲಾಗಿತ್ತು. ಆದರೆ ಜಿಎಸ್ಟಿ ಜಾರಿಯಾಗಿದ್ದರಿಂದ ಗುತ್ತಿಗೆದಾರ ಕಾಮಗಾರಿ ಆರಂಭಿಸಲು ಹಿಂದೇಟು ಹಾಕಿದ್ದನು ಹೀಗಾಗಿ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ