ಅನ್ಯಕೋಮಿನ ಯುವತಿ ಪ್ರೀತಿಸಿದ್ದ ಯುವಕನ ಹತ್ಯೆ ಪ್ರಕರಣ; ರೈಲ್ವೆ ಪೊಲೀಸರಿಂದ ಬೆಳಗಾವಿ ಪೊಲೀಸರಿಗೆ ಕೇಸ್ ವರ್ಗಾವಣೆ

ಬೈಲಹೊಂಗಲ ಡಿವೈಎಸ್‌ಪಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ದು, ಪೊಲೀಸರು ಈಗಾಗಲೇ 30ಕ್ಕೂ ಹೆಚ್ಚು ಜನರನ್ನು ವಿಚಾರಣೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ ಖಾ‌ನಾಪುರ ಹೊರವಲಯದಲ್ಲಿ ಸೆ.28ರಂದು ರೈಲ್ವೆ ಹಳಿ ಮೇಲೆ ಅರ್ಬಾಜ್ ಮುಲ್ಲಾ (24) ಶವ ಪತ್ತೆಯಾಗಿತ್ತು. ಅನ್ಯಕೋಮಿನ ಯುವತಿ ಪ್ರೀತಿಸಿದ್ದಕ್ಕೆ ಅರ್ಬಾಜ್ ಹತ್ಯೆ ಆರೋಪ ಕೇಳಿ ಬಂದಿದೆ.

ಅನ್ಯಕೋಮಿನ ಯುವತಿ ಪ್ರೀತಿಸಿದ್ದ ಯುವಕನ ಹತ್ಯೆ ಪ್ರಕರಣ; ರೈಲ್ವೆ ಪೊಲೀಸರಿಂದ ಬೆಳಗಾವಿ ಪೊಲೀಸರಿಗೆ ಕೇಸ್ ವರ್ಗಾವಣೆ
ಅರ್ಬಾಜ್ ಮುಲ್ಲಾ
Edited By:

Updated on: Oct 05, 2021 | 7:58 AM

ಬೆಳಗಾವಿ: ಅನ್ಯಕೋಮಿನ ಯುವತಿ ಪ್ರೀತಿಸಿದ್ದ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ಈಗಾಗಲೇ ಸ್ಥಳೀಯರು ಒತ್ತಾಯಿಸಿದ್ದಾರೆ. ಹೀಗಾಗಿ ಈ ಪ್ರಕರಣದ ತೀವ್ರತೆ ಅರಿತ ಅಧಿಕಾರಿಗಳು, ರೈಲ್ವೆ ಪೊಲೀಸರಿಂದ ಬೆಳಗಾವಿ ಪೊಲೀಸರಿಗೆ ಕೇಸ್ ವರ್ಗಾವಣೆ ಮಾಡಿದ್ದಾರೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಪೊಲೀಸರ ವಿಶೇಷ ತಂಡ ರಚನೆ ಮಾಡಲಾಗಿದೆ.

ಬೈಲಹೊಂಗಲ ಡಿವೈಎಸ್‌ಪಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ದು, ಪೊಲೀಸರು ಈಗಾಗಲೇ 30ಕ್ಕೂ ಹೆಚ್ಚು ಜನರನ್ನು ವಿಚಾರಣೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ ಖಾ‌ನಾಪುರ ಹೊರವಲಯದಲ್ಲಿ ಸೆ.28ರಂದು ರೈಲ್ವೆ ಹಳಿ ಮೇಲೆ ಅರ್ಬಾಜ್ ಮುಲ್ಲಾ (24) ಶವ ಪತ್ತೆಯಾಗಿತ್ತು. ಅನ್ಯಕೋಮಿನ ಯುವತಿ ಪ್ರೀತಿಸಿದ್ದಕ್ಕೆ ಅರ್ಬಾಜ್ ಹತ್ಯೆ ಆರೋಪ ಕೇಳಿ ಬಂದಿದೆ.

ಯುವತಿ ತಂದೆ ಮಹಾರಾಜ ಬಿರ್ಜೆ ವಿರುದ್ಧ ಮೃತ ಅರ್ಬಾಜ್ ಮುಲ್ಲಾ ತಾಯಿ ಆರೋಪಿಸಿದ್ದಾರೆ. ಅರ್ಬಾಜ್ ತಾಯಿ ದೂರಿನ ಮೇರೆಗೆ ಎಫ್​ಐಆರ್​ ದಾಖಲಾಗಿದೆ. ಸದ್ಯ ಪೊಲೀಸರು ಆರು ಜನರನ್ನು ವಶಕ್ಕೆ ಪಡೆದು ರಹಸ್ಯ ಸ್ಥಳದಲ್ಲಿ ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಲವಾದ ಸಾಕ್ಷ್ಯಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಇದನ್ನೂ ಓದಿ:
ಅನ್ಯಕೋಮಿನ ಯುವತಿ ಪ್ರೀತಿಸಿದ್ದಕ್ಕೆ ಯುವಕನ ಕೊಲೆ ಪ್ರಕರಣ; ಆರೋಪಿಗಳ ಬಂಧನಕ್ಕೆ ಶಾಸಕಿ ಅಂಜಲಿ ನಿಂಬಾಳ್ಕರ್ ಒತ್ತಾಯ

ಅನ್ಯಕೋಮಿನ ಯುವತಿ ಪ್ರೀತಿಸಿದ್ದಕ್ಕೆ ಬೆಳಗಾವಿಯಲ್ಲಿ ಬಿತ್ತಾ ಹೆಣ? ಮುಂದುವರಿದ ತನಿಖೆ