ಸಚಿವ ಪ್ರಭು ಚೌಹಾಣ್ ಸ್ವಕ್ಷೇತ್ರದಲ್ಲೇ ನೀರಿಗಾಗಿ ಜನರ ಹಾಹಾಕಾರ; ಅಳಲು ತೋಡಿಕೊಂಡ ಗ್ರಾಮಸ್ಥರು
ರಾಜ್ಯದ ಪಶು ಸಂಗೋಪನೆ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಸ್ವಕ್ಷೇತ್ರದ ಗ್ರಾಮವೊಂದರಲ್ಲಿ ನೀರಿಗಾಗಿ ಜನರು ಪರಿತಪಿಸುವ ಸ್ಥಿತಿ ಇದೆ. ಈ ಕುರಿತು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕೌಠಾ ಗ್ರಾಮದಲ್ಲಿ ಜನರಿಗೆ ನೀರಿಗೆ ಹಾಹಾಕಾರ ಉಂಟಾಗಿದೆ. ಪಶುಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಕ್ಷೇತ್ರದಲ್ಲೇ ಜನರು ಪರದಾಟ ನಡೆಸುವ ಸ್ಥಿತಿ ಬಂದೊದಗಿದೆ. ಔರಾದ್ನ ಶಾಸಕರಾಗಿರುವ ಪ್ರಭು ಚೌಹಾಣ್ ಕ್ಷೇತ್ರದಲ್ಲಿ ಜನರು ವಾರಕ್ಕೊಮ್ಮೆ ಬರುವ ನೀರಿಗಾಗಿ ಕಾಯಬೇಕಾಗಿದೆ. ಒಂದು ವೇಳೆ ನೀರು ಬರದಿದ್ದರೆ ಪಕ್ಕದ ಊರಿಗೆ ಹೋಗಿ ನೀರು ತರಬೇಕಾದ ಪರಿಸ್ಥಿತಿ ಇದೆ. ಕೂಗಳತೆ ದೂರದಲ್ಲಿ ಮಾಂಜ್ರಾ ನದಿ ಹರಿಯುತ್ತಿದ್ದರು ನೀರಿನ ಸಮಸ್ಯೆ ಇರುವ ಬಗ್ಗೆ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ವಿಜಯನಗರ ಜಿಲ್ಲೆಯ ಶೃಂಗಾರತೋಟದಲ್ಲಿ ಶವ ಸಂಸ್ಕಾರಕ್ಕೆ ಸ್ಥಳವಿಲ್ಲದೇ ಜನರ ಪರದಾಟ: ಶವಸಂಸ್ಕಾರಕ್ಕೆ ಸ್ಥಳ ನಿಗದಿಯಾಗದೇ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಶೃಂಗಾರತೋಟ ಗ್ರಾಮದಲ್ಲಿ ಜನರು ಪರದಾಡುತ್ತಿದ್ದಾರೆ. ಗ್ರಾಮದಲ್ಲಿ 31 ವರ್ಷದ ಮಹಿಳೆ ಸಾವಿಗೀಡಾಗಿದ್ದರು. ಆದರೆ ಶವ ಸಂಸ್ಕಾರಕ್ಕೆ ನಿಗದಿತ ಸ್ಥಳವಿಲ್ಲದೇ, ಶವ ಹೊತ್ತು ಹಳ್ಳದ ಸಮೀಪ ಜನರು ಸುತ್ತಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದುವರೆಗೆ ದಲಿತರು ಹಾಗೂ ಇತರ ಸಮುದಾಯದವರು ಹಳ್ಳದ ದಂಡೆಯ ಮೇಲೆ ಶವಸಂಸ್ಕಾರ ಮಾಡುತ್ತಿದ್ದರು. ಆದರೆ ಮಳೆ ಬಂದ ಹಿನ್ನೆಲೆಯಲ್ಲಿ ಹಳ್ಳ ತುಂಬಿ ಹರಿಯುತ್ತಿದ್ದು, ಶವ ಸಂಸ್ಕಾರ ಮಾಡಲು ಸ್ಥಳವೇ ಇಲ್ಲದಂತಾಗಿದೆ. ಕೊನೆಗೆ ಹರಿಯುತ್ತಿರುವ ಹಳ್ಳದ ದಂಡೆಯ ಮೇಲೆ ಸ್ಥಳೀಯರು ಸಂಸ್ಕಾರ ಮಾಡಿದ್ದಾರೆ. ಶವ ಸಂಸ್ಕಾರಕ್ಕೆ ಸೂಕ್ತ ಸ್ಥಳ ನಿಗದಿಯಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:
ಅನ್ಯಕೋಮಿನ ಯುವತಿ ಪ್ರೀತಿಸಿದ್ದಕ್ಕೆ ಯುವಕನ ಕೊಲೆ ಪ್ರಕರಣ; ಆರೋಪಿಗಳ ಬಂಧನಕ್ಕೆ ಶಾಸಕಿ ಅಂಜಲಿ ನಿಂಬಾಳ್ಕರ್ ಒತ್ತಾಯ
ಶಾರುಖ್ ಪತ್ನಿ ಗೌರಿ ಖಾನ್ಗೂ ಅಂಟಿತ್ತು ಗಾಂಜಾ ಕಳಂಕ; ಏರ್ಪೋರ್ಟ್ನಲ್ಲಿ ನಡೆದ ಆ ಘಟನೆ ನಿಜವೇ?
ಬಲ್ಲಾಳಸಮುದ್ರ ಗ್ರಾಮದಲ್ಲಿ ಮತಾಂತರದ ಆರೋಪ; ಕ್ರೈಸ್ತ ಪ್ರಾರ್ಥನಾ ಮಂದಿರದ ಬಳಿ 2 ಗುಂಪಿನ ಮಧ್ಯೆ ವಾಗ್ವಾದ