ಅನ್ಯಕೋಮಿನ ಯುವತಿ ಪ್ರೀತಿಸಿದ್ದಕ್ಕೆ ಬೆಳಗಾವಿಯಲ್ಲಿ ಬಿತ್ತಾ ಹೆಣ? ಮುಂದುವರಿದ ತನಿಖೆ

TV9 Digital Desk

| Edited By: sandhya thejappa

Updated on: Oct 02, 2021 | 4:37 PM

24 ವರ್ಷದ ಅರ್ಬಾಜ್ ಮುಲ್ಲಾ ಕಾರ್ ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದ. ಮೂಲತಃ ಖಾನಾಪುರ ಪಟ್ಟಣದವರಾದರೂ ತಾಯಿ ಶಿಕ್ಷಕಿಯಾಗಿದ್ದ ಕಾರಣ ಬೆಳಗಾವಿ ನಗರಕ್ಕೆ ಬಂದು ನೆಲೆಸಿದ್ದರು.

ಅನ್ಯಕೋಮಿನ ಯುವತಿ ಪ್ರೀತಿಸಿದ್ದಕ್ಕೆ ಬೆಳಗಾವಿಯಲ್ಲಿ ಬಿತ್ತಾ ಹೆಣ? ಮುಂದುವರಿದ ತನಿಖೆ
ಅರ್ಬಾಜ್ ಮುಲ್ಲಾ
Follow us

ಬೆಳಗಾವಿ: ಅನ್ಯಕೋಮಿನ ಯುವತಿಯನ್ನು ಪ್ರೀತಿಸಿದಕ್ಕೆ ಯುವಕನೊಬ್ಬ ಕೊಲೆಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಖಾನಾಪುರ ಪಟ್ಟಣದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ರೈಲ್ವೆ ಹಳಿ ಮೇಲೆ ಯುವಕನ ಶವ ಎಸೆದಿದ್ದಾರೆ. ಅರ್ಬಾಜ್ ಮುಲ್ಲಾ ಎಂಬಾತ ಯುವತಿಯ ಮನೆಯವರ ವಿರೋಧದ ನಡುವೆ ಪ್ರೀತಿಸುತ್ತಿದ್ದ. ಯುವತಿ ಕುಟುಂಬಸ್ಥರು ಅರ್ಬಾಜ್​ಗೆ ಹಲವು ಬಾರಿ ವಾರ್ನ್ ಮಾಡಿದ್ದರಂತೆ. ಆದರೂ ಅರ್ಬಾಜ್ ಮದುವೆಯಾಗಲು ತಯಾರಿ ನಡೆಸಿದ್ದ. ಹೀಗಾಗಿ ಯುವಕ ಕೊಲೆಯಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

24 ವರ್ಷದ ಅರ್ಬಾಜ್ ಮುಲ್ಲಾ ಕಾರ್ ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದ. ಮೂಲತಃ ಖಾನಾಪುರ ಪಟ್ಟಣದವರಾದರೂ ತಾಯಿ ಶಿಕ್ಷಕಿಯಾಗಿದ್ದ ಕಾರಣ ಬೆಳಗಾವಿ ನಗರಕ್ಕೆ ಬಂದು ನೆಲೆಸಿದ್ದರು. ಅರ್ಬಾಜ್ ಮುಲ್ಲಾ ಅನ್ಯಕೋಮಿನ ಯುವತಿಯನ್ನು ಪ್ರೀಸುತ್ತಿದ್ದ. ಮುದುವೆಗೂ ಸಿದ್ಧತೆ ನಡೆಸಿಕೊಳ್ಳುತ್ತಿದ್ದ. ಹೀಗಾಗಿ ಯುವಕನನ್ನು ಹತ್ಯೆಗೈದಿದ್ದಾರೆ ಎಂಬ ಅನುಮಾನ ಮೂಡಿದೆ. ಈ ಘಟನೆ ಸೆ.28ರಂದು ಮಧ್ಯರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಎರಡು ವರ್ಷದ ಪ್ರೀತಿ ಅರ್ಬಾಜ್ ತನ್ನದೇ ಕಾಲೋನಿಯಲ್ಲಿರುವ ಅನ್ಯಕೋಮಿನ ಯುವತಿಯನ್ನ ಪ್ರೀತಿಸುತ್ತಿದ್ದ. ಒಂದೇ ಕಾಲೋನಿ ಆಗಿದ್ದಕ್ಕೆ ಆಗಾಗಾ ಯುವತಿ ಇವರ ಮನೆಗೆ ಬರೋದು ಹೋಗುವುದು ಮಾಡುತ್ತಿದ್ದಳು. ಕಳೆದ ಎರಡು ವರ್ಷದಿಂದ ಪ್ರೀತಿಸುತ್ತಿದ್ದ ವಿಚಾರ ಅರ್ಬಾಜ್ ತಾಯಿಗೆ ಗೊತ್ತಾಗುತ್ತದೆ. ತಕ್ಷಣ ಯುವತಿಯ ತಾಯಿಗೆ ಅರ್ಬಾಜ್ ತಾಯಿ ನಾಜೀಮಾ ಮೊಹಮ್ಮದ್ ಇದೆಲ್ಲಾ ಸರಿ ಅನಿಸುವುದಿಲ್ಲ ಮಗಳನ್ನ ಮನೆ ಕಡೆ ಕಳುಹಿಸಬೇಡಿ ಅಂತಾ ಹೇಳಿದ್ದಾರೆ.

ಯುವತಿಯ ತಾಯಿ ಈ ವಿಚಾರವನ್ನ ಅರ್ಬಾಜ್ ಮುಂದೆ ಹೇಳುತ್ತಾರೆ. ಇದರಿಂದ ಅರ್ಬಾಜ್ ತಾಯಿ ಜತೆಗೆ ಜಗಳವಾಡಿಕೊಂಡು ಹಲ್ಲೆ ಮಾಡಿರುತ್ತಾನೆ. ಬಳಿಕ ಪ್ರೀತಿ ವಿಚಾರ ಕೆಲ ಸಂಘಟನೆಗಳಿಗೆ ಗೊತ್ತಾಗಿ ಅರ್ಬಾಜ್ಗೆ ಧಮಕಿ ಹಾಕಲಾರಂಭಿಸುತ್ತಾರಂತೆ. ಸೆ.26ರಂದು ಪುಂಡಲೀಕ ಮಹಾರಜ ಎಂಬುವವರ ಮಧ್ಯಸ್ಥಿಕೆಯಲ್ಲಿ ಅಂದು ಅರ್ಬಾಜ್ ತಾಯಿ ಮುಂದೆ ಮಗ ತಂಟೆಗೆ ಬರಲ್ಲಾ ಅಂತಾ ಪೋಟೋ ಸೇರಿದಂತೆ ಎಲ್ಲವನ್ನೂ ಡಿಲಿಟ್ ಮಾಡಿ ಸೀಮ್ ಕೂಡ ಮುರಿದು ಹಾಕಿರುತ್ತಾರೆ. ಇದಾದ ಎರಡೇ ದಿನದಲ್ಲಿ ಯುವಕ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಬೆಳಗಾವಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ತನಿಖೆ ಮುಂದುರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 30ಕ್ಕೂ ಅಧಿಕ ಜನರನ್ನು ವಿಚಾರಣೆ ಮಾಡುತ್ತಿದ್ದಾರೆ. ಯುವತಿ ಸೇರಿ ಯುವತಿಯ ಕುಟುಂಬಸ್ಥರನ್ನ ವಶಕ್ಕೆ ಪಡೆದು ಬೆಳಗಾವಿ ರೈಲ್ವೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ

ಉಪಚುನಾವಣೆಯಲ್ಲಿ ಜೆಡಿಎಸ್​ನಿಂದ ಮುಸ್ಲಿಂ ಅಭ್ಯರ್ಥಿ ವಿಚಾರ; ಸಿದ್ದರಾಮಯ್ಯ, ಕುಮಾರಸ್ವಾಮಿ ವಾಕ್ಸಮರ

ಅಪರೂಪದ ಕಾರಿನ ಜೊತೆ ನಟ ಜಗ್ಗೇಶ್​; ಅಪ್ಪನ ನೆನಪು ತರಿಸಿತು ಈ ವಾಹನ

ತಾಜಾ ಸುದ್ದಿ

Related Stories

Click on your DTH Provider to Add TV9 Kannada