Koyna Dam: ಬರಿದಾದ ಕಷ್ಣೆಯ ಒಡಲು: ಉತ್ತರ ಕರ್ನಾಟಕದ 6 ಜಿಲ್ಲೆಗಳಲ್ಲಿ ಉದ್ಭವಿಸಲಿದೆ ನೀರನ ಹಾಹಾಕಾರ..!

|

Updated on: Jun 19, 2023 | 3:04 PM

ಮಹಾರಾಷ್ಟ್ರದ ಸಾತಾರಾ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಕೊಯ್ನಾ ಡ್ಯಾಂ ಖಾಲಿಯಾಗುತ್ತಿದೆ. ಇದರಿಂದ ಉತ್ತರ ಕರ್ನಾಟಕದ 6 ಜಿಲ್ಲೆಗಳು ನೀರಿಲ್ಲದೆ ಪರದಾಡುವಂತ ಪರೀಸ್ಥತಿ ಎದುರಾಗಲಿದೆ.

Koyna Dam: ಬರಿದಾದ ಕಷ್ಣೆಯ ಒಡಲು: ಉತ್ತರ ಕರ್ನಾಟಕದ 6 ಜಿಲ್ಲೆಗಳಲ್ಲಿ ಉದ್ಭವಿಸಲಿದೆ ನೀರನ ಹಾಹಾಕಾರ..!
ಕೊಯ್ನಾ ಡ್ಯಾಂ
Follow us on

ಬೆಳಗಾವಿ: ಮುಂಗಾರು ವಿಳಂಬ ಹಿನ್ನೆಲೆ ಬರದ ಛಾಯೆ ಆವರಿಸಲಿದೆಯಾ ಎಂಬ ಆತಂಕ ಉತ್ತರ ಕರ್ನಾಟಕದ (North Karnataka) ಜನರಲ್ಲಿ ಶರುವಾಗಿದೆ. ಹೌದು ಉತ್ತರ ಕರ್ನಾಟಕದ 6 ಜಿಲ್ಲೆಗಳಿಗೆ‌ ನೀರುಣಿಸುತ್ತಿದ್ದ ಕೊಯ್ನಾ ಡ್ಯಾಂ (Koyna Dam) ಖಾಲಿಯಾಗುತ್ತಿದೆ. ಮಹಾರಾಷ್ಟ್ರದ (Maharashtra) ಸಾತಾರಾ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕೊಯ್ನಾ ಜಲಾಶಯದಲ್ಲಿ ನೀರು ಡೆಡ್ ಸ್ಟೋರೆಜ್ ಹಂತ ತಲುಪಿದೆ. ಸದ್ಯ ಕೊಯ್ನಾ ಜಲಾಶಯದಲ್ಲಿ ಕೇವಲ 11.74 ಟಿಎಂಸಿ ನೀರು ಮಾತ್ರ ಬಾಕಿ ಇದೆ.

ಇನ್ನು ಕೊಯ್ನಾ ಜಲಾಶಯ ಬರಿದಾಗುತ್ತಿದ್ದು, ಜಲಾಶಯ ಪಾತ್ರದಲ್ಲಿ ಮುಳುಗಡೆಯಾಗಿದ್ದ ಪುರಾತನ ಗ್ರಾಮಗಳು ಗೋಚರವಾಗುತ್ತಿವೆ. ಮುಳುಗಡೆಯಾದ ಗ್ರಾಮಗಳಲ್ಲಿನ ಪುರಾತನ ಕಾಲದ ಬ್ರಿಡ್ಜ್, ದೇವಸ್ಥಾನ, ಇತರ ಅವಶೇಷಗಳು ಪತ್ತೆಯಾಗಿವೆ.

ಇದನ್ನೂ ಓದಿ: ಬತ್ತುತ್ತಿರುವ ಬೆಳಗಾವಿ ಜಿಲ್ಲೆಯ 7 ನದಿಗಳು: ಹುಬ್ಬಳ್ಳಿ-ಧಾರವಾಡ, ಕುಂದಾನಗರಿಯಲ್ಲಿ ನೀರಿಗೆ ಹಾಹಾಕಾರ..!?

ಈ ಹಿಂದೆ ಕರ್ನಾಟಕಕ್ಕೆ ನೀರು ಬಿಡಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದರು. ಇದಕ್ಕೆ ಮಹಾರಾಷ್ಟ್ರ ಸರ್ಕಾರ ನೀರಿಲ್ಲ ಎಂಬ ಕಾರಣ ನೀಡಿ ಕೊನೆಗೆ ಮಹಾರಾಷ್ಟ್ರದ ರಾಜಾಪುರ ಬ್ಯಾರೆಜ್‌ನಿಂದ 1500 ಕ್ಯೂಸೆಕ್ ನೀರು ಬಿಟ್ಟಿತ್ತು. ಸದ್ಯ ಮಹಾರಾಷ್ಟ್ರದಲ್ಲೂ ಸಹ ನೀರಿನ ಅಭಾವ ಉಂಟಾಗಿದೆ. ಇತ್ತ ಉತ್ತರ ಕರ್ನಾಟಕದ ಜೀವನದಿ ಕೃಷ್ಣಾನದಿ ಬತ್ತಿಹೋಗುತ್ತಿದೆ. ಇದರಿಂದ ಕೃಷ್ಣಾ ನದಿಯ ಉಪನದಿಗಳಾದ ಘಟಪ್ರಭಾ, ದೂಧಗಂಗಾ ವೇದಗಂಗಾ, ಪಂಚಗಂಗಾ ನದಿಗಳು ಖಾಲಿ‌ಯಾಗಿವೆ.

ಕೃಷ್ಣಾ ನದಿ ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು, ಸೇರಿ 6 ಜಿಲ್ಲೆಗಳಿಗೆ ಜೀವನದಿಯಾಗಿದೆ. ಇದರಿಂದ ಕೃಷಿ ಚಟುವಟಿಕೆ ಸೇರಿ ಕುಡಿಯುವ ‌ನೀರಿಗೂ ಜಿಲ್ಲೆಗಳಲ್ಲಿ ಹಾಹಾಕರ ಉಂಟಾಗಿದೆ. 2019ರಲ್ಲೂ ಸಹ ಕೃಷ್ಣೆಯ ಒಡಲು ಬರಿದಾಗಿತ್ತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ