Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬತ್ತುತ್ತಿರುವ ಬೆಳಗಾವಿ ಜಿಲ್ಲೆಯ 7 ನದಿಗಳು: ಹುಬ್ಬಳ್ಳಿ-ಧಾರವಾಡ, ಕುಂದಾನಗರಿಯಲ್ಲಿ ನೀರಿಗೆ ಹಾಹಾಕಾರ..!?

ಜೂನ್ ತಿಂಗಳು ಆರಂಭವಾಗಿ 19 ದಿನ ಕಳೆದರೂ ಗಡಿನಾಡು ಬೆಳಗಾವಿಗೆ ಮುಂಗಾರಿನ ಸುಳಿವೇ ಇಲ್ಲ. ಮಳೆ ಬರಲಿ ಎಂದು ಜನ ಕತ್ತೆ ಮದುವೆ ಹಾಗೂ ದೇವರಿಗೆ ಹರಿಕೆಗಳನ್ನು ತೀರಿಸಿದರೂ ವರುಣರಾಯ ಧರಗೆ ಇಳಿದಿಲ್ಲ. ಇದರಿಂದ ಬೆಳಗಾವಿ ಜಿಲ್ಲೆಯ ಏಳಕ್ಕೆ ಏಳೂ ನದಿಗಳು ಬತ್ತುತ್ತಿದ್ದು, ಬರಗಾಲದ ಕರಿ ಛಾಯೆ ಭೀತಿ ಎದುರಾಗಿದೆ.

ಬತ್ತುತ್ತಿರುವ ಬೆಳಗಾವಿ ಜಿಲ್ಲೆಯ 7 ನದಿಗಳು: ಹುಬ್ಬಳ್ಳಿ-ಧಾರವಾಡ, ಕುಂದಾನಗರಿಯಲ್ಲಿ ನೀರಿಗೆ ಹಾಹಾಕಾರ..!?
ಬರಿದಾದ ಕೃಷ್ಣಾ ನದಿ
Follow us
ವಿವೇಕ ಬಿರಾದಾರ
|

Updated on: Jun 19, 2023 | 10:22 AM

ಬೆಳಗಾವಿ: ಜೂನ್ ತಿಂಗಳು ಆರಂಭವಾಗಿ 19 ದಿನ ಕಳೆದರೂ ಗಡಿನಾಡು ಬೆಳಗಾವಿಗೆ (Belagavi) ಮುಂಗಾರಿನ (Mansoon) ಸುಳಿವೇ ಇಲ್ಲ. ಮಳೆ ಬರಲಿ ಎಂದು ಜನ ಕತ್ತೆ ಮದುವೆ ಹಾಗೂ ದೇವರಿಗೆ ಹರಿಕೆಗಳನ್ನು ತೀರಿಸಿದರೂ ವರುಣರಾಯ ಧರಗೆ ಇಳಿದಿಲ್ಲ. ಇದರಿಂದ ಬೆಳಗಾವಿ ಜಿಲ್ಲೆಯ ಏಳಕ್ಕೆ ಏಳೂ ನದಿಗಳು ಬತ್ತುತ್ತಿದ್ದು, ಬರಗಾಲದ ಕರಿ ಛಾಯೆ ಭೀತಿ ಎದುರಾಗಿದೆ. ಜಿಲ್ಲೆಯ ಕೃಷ್ಣಾ (Krishna), ಮಲಪ್ರಭಾ (Malaprabha), ಘಟಪ್ರಭಾ, ವೇದಗಂಗಾ, ದೂಧಗಂಗಾ, ಮಾರ್ಕಂಡೇಯ, ಹಿರಣ್ಯಕೇಶಿ ನದಿಗಳ ಒಡಲು ಖಾಲಿಯಾಗುತ್ತಿದ್ದು, ಅನ್ನದಾತರು ಕಂಗೆಟ್ಟಿದ್ದಾರೆ. ಇದೀಗ ಕೃಷಿಕರು ಟ್ಯಾಂಕರ್ ಮೂಲಕ ಭತ್ತದ ಗದ್ದೆಗಳಿಗೆ ನೀರುಣಿಸುತ್ತಿದ್ದಾರೆ.

ಬೆಳಗಾವಿ ನಗರಕ್ಕೆ ನೀರು ಪೂರೈಸುತ್ತಿದ್ದ ರಕ್ಕಸಕೊಪ್ಪ, ಹಿಡಕಲ್ ಜಲಾಶಯದಲ್ಲೂ ನೀರಿನ ಮಟ್ಟ ಗಣನೀಯ ಇಳಿಕೆಯಾಗಿದ್ದು, ಹತ್ತು ದಿನಗಳಿಗೊಮ್ಮೆ ಬೆಳಗಾವಿ ನಗರ ಪ್ರದೇಶದಲ್ಲಿ ನೀರು ಪೂರೈಸಲಾಗುತ್ತಿದೆ. ಮಹಾರಾಷ್ಟ್ರಕ್ಕೆ ನೀರು ಬಿಡುವಂತೆ ಮನವಿ ಮಾಡಬೇಕಂದರೇ ಅಲ್ಲಿಯ ಕೋಯ್ನಾ ಡ್ಯಾಂ ಸಹ ಖಾಲಿಯಾಗಿದೆ.

ರಕ್ಕಸಕೊಪ್ಪ ಜಲಾಶಯದಲ್ಲಿ ಕೇವಲ 16 ಅಡಿ ಆಳದಷ್ಟು ನೀರು ಬಾಕಿ ಇದ್ದು, ಬೆಳಗಾವಿ ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಇದು ಬೆಳಗಾವಿ ನಗರದ ಕೆಲವು ಶಾಲಾ-ಕಾಲೇಜುಗಳ ಮೇಲೆಯೂ ಪರಿಣಾಮ ಬೀರಿದ್ದು, ಮಕ್ಕಳಿಗೆ ನೀರು ಕೊಡಲು ಆಗದೇ ಗಂಭೀರ ಸ್ಥಿತಿಗೆ ತಲುಪುತ್ತಿವೆ. ನೀರಿನ ಅಭಾವದಿಂದ ಶಾಲೆಗಳಿಗೆ ರಜೆ ನೀಡಲು ಆಡಳಿತ ಮಂಡಳಿಗಳು ನಿರ್ಧರಿಸಿವೆ.

ಇದನ್ನೂ ಓದಿ: Phone In Program: ಬೆಳಗಾವಿಯಲ್ಲಿ 13ನೇ ಫೋನ್ ಇನ್ ಕಾರ್ಯಕ್ರಮ, ಒಂದು ಕರೆ ಮೂಲಕ ಸಮಸ್ಯೆ ಪರಿಹಾರ

ಬೆಳಗಾವಿ ಕ್ಯಾಂಪ್ ಪ್ರದೇಶದ ಸೆಂಟ್ ಫಾಲ್ ಶಾಲೆ ಆಡಳಿತ ಮಂಡಳಿ ಆನ್ ಲೈನ್ ತರಗತಿ ನಡೆಸಲ ನಿರ್ಧರಿಸಿದ್ದು, ಪೋಷಕರಿಗೆ ಮೆಸೆಜ್ ಹಾಕಿದೆ. ಆದರೆ ಪೋಷಕರೇ ಎರಡು ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಿದ್ದಾರೆ.

ಅವಳಿನಗರಕ್ಕೂ ತಟ್ಟಲಿದೆ ನೀರಿನ ಹಾಹಾಕಾರ

ಇನ್ನು ಬೆಳಗಾವಿ ಜಿಲ್ಲೆಯ ಮಲಪ್ರಭಾ, ಘಟಪ್ರಭಾ ಜಲಾಶಯದಿಂದ ಅವಳಿ ನಗರ ಹುಬ್ಬಳ್ಳಿ-ಧಾರವಾಡಕ್ಕೆ ನೀರು ಪೂರೈಕೆಯಾಗುತ್ತದೆ. ಇದೀಗ ಜೀವಜಲಗಳು ಬತ್ತುತ್ತಿದ್ದು, ಕೇಲವೆ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡದ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

51 ಟಿಎಂಟಿಸಿ ಸಾಮರ್ಥ್ಯವಿರುವ ಘಟಪ್ರಭಾ ಜಲಾಶಯದಲ್ಲಿ ಕೇವಲ 4.150 ಟಿಎಂಸಿ ನೀರು ಇದ್ದು, ಬಳಸಲು 2.130 ಟಿಎಂಸಿ ನೀರು ಮಾತ್ರ ಯೋಗ್ಯವಾಗಿದೆ. ಮಲಪ್ರಭಾ ಜಲಾಶಯ 37.731 ಟಿಎಂಸಿ ನೀರು ಸಂಗ್ರಹಣೆ ಸಾಮರ್ಥ್ಯ ಹೊಂದಿದೆ. ಸದ್ಯ 7.326 ಟಿಎಂಸಿ ನೀರು ಇದ್ದು, ಬಳಸಲು 3.941 ಟಿಎಂಸಿ ನೀರು ಮಾತ್ರ ಯೋಗ್ಯವಾಗಿ ಉಳಿದಿದೆ.

ಜೂನ್ 15ರವರೆಗೆ ಕಾದು‌ ನೋಡಿ, ಮಳೆ ಬಾರದಿದ್ದರೇ ಮೋಡ ಬಿತ್ತನೆ ಮಾಡುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಇತ್ತೀಚೆಗೆ ಬೆಳಗಾವಿ ಭೇಟಿ ವೇಳೆ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿಕೆ ನೀಡಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ