Belagavi News: ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ವೃದ್ಧ ಚಿಕಿತ್ಸೆ ಫಲಿಸದೇ ಸಾವು: ಸೂಕ್ತ ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 03, 2022 | 8:02 AM

ಒಂದು ವಾರದ ಹಿಂದೆ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 40ಜನ ಅಸ್ವಸ್ಥಗೊಂಡಿದ್ದರು. ರಾಮದುರ್ಗ ತಾಲೂಕು ಆಸ್ಪತ್ರೆಯಲ್ಲಿ ಎಲ್ಲರಿಗೂ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ವೃದ್ದ ಬಸಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

Belagavi News: ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ವೃದ್ಧ ಚಿಕಿತ್ಸೆ ಫಲಿಸದೇ ಸಾವು: ಸೂಕ್ತ ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ
ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ವೃದ್ಧ
Follow us on

ಬೆಳಗಾವಿ: ಕಲುಷಿತ ನೀರು (contaminated water) ಸೇವಿಸಿ ಅಸ್ವಸ್ಥಗೊಂಡಿದ್ದ ವೃದ್ದ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಬೆನ್ನೂರ ಗ್ರಾಮದಲ್ಲಿ ನಡೆದಿದೆ. ಬಸಪ್ಪ ಖಾನಾಪುರ(85)ಮೃತಪಟ್ಟ ವೃದ್ದ. ಒಂದು ವಾರದ ಹಿಂದೆ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 40ಜನ ಅಸ್ವಸ್ಥಗೊಂಡಿದ್ದರು. ರಾಮದುರ್ಗ ತಾಲೂಕು ಆಸ್ಪತ್ರೆಯಲ್ಲಿ ಎಲ್ಲರಿಗೂ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇಂದು ಚಿಕಿತ್ಸೆ ಫಲಿಸದೇ ವೃದ್ದ ಬಸಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸ್ಥಳೀಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು, ಮೃತನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದರು.

ಇದನ್ನೂ ಓದಿ: Karnataka Rains Live: ಕರ್ನಾಟಕದಲ್ಲಿ ಮುಂದುವರೆದ ಮಳೆ ಅಬ್ಬರ: 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ

ಲಿಂಗಸುಗೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ

ರಾಯಚೂರು: ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಕುಡಿಯೋ ನೀರಿಗೆ ಜನರು ಪರದಾಡುವಂತ್ತಾಗಿದೆ. ಪುರಸಭೆ ನಿರ್ಲಕ್ಷದಿಂದಾಗಿ ಕುಡಿಯೋ ನೀರಿನ ಮೀಸಲು ಕೆರೆ ಖಾಲಿಯಾಗಿದೆ. ಸುಮಾರು 50 ಎಕರೆ ಪ್ರದೇಶದ ಕುಡಿಯೊ ನೀರಿನ ಮೀಸಲು‌ ಕೆರೆ ಖಾಲಿಯಾಗಿದ್ದು, 10 ದಿನಗಳಿಂದ ಕುಡಿಯುವ ನೀರಲ್ಲದೇ ಲಿಂಗಸುಗೂರು ಪಟ್ಟಣದ ಜನ ಕಂಗಾಲಾಗಿದ್ದಾರೆ. ಕೆರೆ ಖಾಲಿಯಾದ ಹಿನ್ನೆಲೆ ಪುರಸಭೆಯಿಂದ ಬೋರ್ ವೆಲ್​ನ ಉಪ್ಪು ನೀರು ಸಪ್ಲೈ ಮಾಡಲಾಗುತ್ತಿದೆ. ಉಪ್ಪು ನೀರು ಸೇವನೆಯಿಂದ ಆರೋಗ್ಯ ಸಮಸ್ಯೆ ಉಲ್ಬಣವಾಗುತ್ತಿದ್ದು, ಮಕ್ಕಳು, ವೃದ್ಧರಿಗೆ ವಾಂತಿ, ಭೇದಿ ಸಮಸ್ಯೆ ಉಂಟಾಗಿದೆ.

ದಿನಪೂರ್ತಿ ದುಡಿದ ಹಣವನ್ನು ಚಿಕಿತ್ಸೆಗೆ ಖರ್ಚು ಮಾಡೋ ಸ್ಥಿತಿ ಎದುರಾಗಿದೆ ಎಂದು ಜನ ಕಣ್ಣೀರು ಹಾಕುವಂತ್ತಾಗಿದೆ. ಬೋರ್ ವೆಲ್ ನೀರು ಬಳಕೆಗೆ ಮಾತ್ರ ಯೋಗ್ಯವಾಗಿದ್ದು, ಕುಡಿಯಲು ಯೋಗ್ಯವಲ್ಲ. ಕೆರೆ ನೀರು ಖಾಲಿಯಾಗೋ ಮಾಹಿತಿ ಇದ್ದರೂ, ಪುರಸಭೆಯಿಂದ ದಿವ್ಯ ನಿರ್ಲಕ್ಷದ ಆರೋಪ ಮಾಡಲಾಗಿದೆ. ಪುರಸಭೆಯದ ಟ್ಯಾಂಕರ್ ಮೂಲಕ ಶುದ್ಧ ಕುಡಿಯೋ ನೀರು ಕೊಡದೇ ಬೇಜವಾಬ್ದಾರಿತನ ತೋರಿಸುತ್ತಿದೆ. ಕೃಷ್ಣಾ ನದಿಯ ನಾರಾಯಣಪುರ ಕಾಲುವೆ ಮೂಲಕ ಕೆರೆಗೆ ನೀರು ಸಂಗ್ರಹಣೆ ಮಾಡಲಾಗುತ್ತದೆ.

ಕುಡಿಯೋ ನೀರಿಗಾಗಿ ಜನರ ಪರದಾಟ

ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ಹಳೆ ಹೆಬ್ಬಾಳ ಗ್ರಾಮದಲ್ಲಿ ಕುಡಿಯೋ ನೀರಿಗಾಗಿ ಜನರು ಪರದಾಡುವಂತ್ತಾಗಿದೆ. ಬೆಣ್ಣೆ ತೋರಾ ನದಿಯ ಗಲೀಜು ನೀರನ್ನೆ ಕುಡಿಯಬೇಕಾದ ಸ್ಥಿತಿ ಉಂಟಾಗಿದ್ದು, ತುಂಬಿ ಹರಿಯುತ್ತಿರೋ ಬೆಣ್ಣೆ ತೋರಾ ನದಿಯಲ್ಲಿ ಪಂಪಸೆಟ್​ಗಳು ಮುಳುಗಿವೆ. ಗ್ರಾಮಕ್ಕೆ ನೀರು ಸರಬರಾಜು ಮಾಡುವ ಪಂಪಸೆಟ್​ಗಳು ನೀರಲ್ಲಿ ಜಲಾವೃತವಾಗಿವೆ. ಕಳೆದ ಮೂರು ದಿನಗಳಿಂದ ಕುಡಿಯೋ ನೀರಿಗಾಗಿ ಗ್ರಾಮದ ಜನರು ಪರದಾಡುವಂತ್ತಾಗಿದ್ದು, ಪರ್ಯಾಯ ನೀರಿನ ವ್ಯವಸ್ಥೆ ಕಲ್ಪಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published On - 8:01 am, Wed, 3 August 22