ಮಳಲಿ ಮಸೀದಿ ಒಂದೇ ಅಲ್ಲ; ದೇಶದಲ್ಲಿ 36 ಸಾವಿರ ದೇವಸ್ಥಾನಗಳನ್ನ ಕೆಡವಿ ಮಸೀದಿ ಕಟ್ಟಲಾಗಿದೆ ಅದನ್ನು ಮತ್ತೆ ದೇವಸ್ಥಾನ ಮಾಡುತ್ತೇವೆ -ಮಾಜಿ ಸಚಿವ ಈಶ್ವರಪ್ಪ

ತೆಲಸಂಗ ಗ್ರಾಮದ ವಿಠಲರಾಯ ಜಾತ್ರೆಗೆ ಆಗಮಿಸಿದ್ದ ಈಶ್ವರಪ್ಪ, ಹಿಂದು ದೇವಸ್ಥಾನ ಪುಡಿ ಮಾಡಿ ಮಸೀದಿ ಕಟ್ಟಿದ್ದಾರೆ. ದೇವಸ್ಥಾನ ಪುಡಿ ಮಾಡಿ ಕಟ್ಟಿದ ಒಂದೇ ಒಂದು ಮಸೀದಿಯನ್ನು ನಾವು ಬಿಡಲ್ಲ. ಮಳಲಿ ಮಸೀದಿ ಒಂದೆ ಅಲ್ಲ, 36 ಸಾವಿರ ದೇವಸ್ಥಾನಗಳನ್ನ ಕೆಡವಿ ಮಸೀದಿ ಕಟ್ಟಿಸಿದ್ದಾರೆ. ಮಸೀದಿ ಕಟ್ಟಲು ನಮ್ಮದು ಯಾವುದೇ ಅಭ್ಯಂತರ ಇಲ್ಲ. ಹಿಂದು ದೇವಸ್ಥಾನ ಕೆಡವಿ ಕಟ್ಟಿರೋದನ್ನ ನಾವು ಬಿಡಲ್ಲ ಉಳಿಸಿಕೊಳ್ಳುತ್ತೇವೆ.

ಮಳಲಿ ಮಸೀದಿ ಒಂದೇ ಅಲ್ಲ; ದೇಶದಲ್ಲಿ 36 ಸಾವಿರ ದೇವಸ್ಥಾನಗಳನ್ನ ಕೆಡವಿ ಮಸೀದಿ ಕಟ್ಟಲಾಗಿದೆ ಅದನ್ನು ಮತ್ತೆ ದೇವಸ್ಥಾನ ಮಾಡುತ್ತೇವೆ -ಮಾಜಿ ಸಚಿವ ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ
Follow us
TV9 Web
| Updated By: ಆಯೇಷಾ ಬಾನು

Updated on:May 26, 2022 | 6:21 PM

ಚಿಕ್ಕೋಡಿ: ಮಳಲಿ ಮಸೀದಿ ಒಂದೇ ಅಲ್ಲ, ದೇಶದಲ್ಲಿ 36 ಸಾವಿರ ದೇವಸ್ಥಾನಗಳನ್ನ ಕೆಡವಿ ಮಸೀದಿ ಕಟ್ಟಲಾಗಿದೆ. ಆ 36 ಸಾವಿರ ದೇವಸ್ಥಾನವನ್ನು ಕಟ್ಟುತ್ತೇವೆ ಎಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಮಾಜಿ ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ತೆಲಸಂಗ ಗ್ರಾಮದ ವಿಠಲರಾಯ ಜಾತ್ರೆಗೆ ಆಗಮಿಸಿದ್ದ ಈಶ್ವರಪ್ಪ, ಹಿಂದು ದೇವಸ್ಥಾನ ಪುಡಿ ಮಾಡಿ ಮಸೀದಿ ಕಟ್ಟಿದ್ದಾರೆ. ದೇವಸ್ಥಾನ ಪುಡಿ ಮಾಡಿ ಕಟ್ಟಿದ ಒಂದೇ ಒಂದು ಮಸೀದಿಯನ್ನು ನಾವು ಬಿಡಲ್ಲ. ಮಳಲಿ ಮಸೀದಿ ಒಂದೆ ಅಲ್ಲ, 36 ಸಾವಿರ ದೇವಸ್ಥಾನಗಳನ್ನ ಕೆಡವಿ ಮಸೀದಿ ಕಟ್ಟಿಸಿದ್ದಾರೆ. ಮಸೀದಿ ಕಟ್ಟಲು ನಮ್ಮದು ಯಾವುದೇ ಅಭ್ಯಂತರ ಇಲ್ಲ. ಹಿಂದು ದೇವಸ್ಥಾನ ಕೆಡವಿ ಕಟ್ಟಿರೋದನ್ನ ನಾವು ಬಿಡಲ್ಲ ಉಳಿಸಿಕೊಳ್ಳುತ್ತೇವೆ. ಈಗಾಗಲೇ ಸರ್ಕಾರದಿಂದ ಸರ್ವೆ ನಡೆಯುತ್ತಿದೆ. ಅಯೋಧ್ಯೆ ಬಗ್ಗೆ ಹೀಗೆ ಹೇಳುತ್ತಿದ್ದರು, ಈಗ ಅಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಈಗಾಗಲೇ ಕಾಶಿಯಲ್ಲೂ ಸರ್ವೆ ನಡೆಯುತ್ತಿದೆ. ಕಾನೂನು ಬದ್ಧವಾಗಿ ಕೋರ್ಟ್ ಆರ್ಡರ್ ಪಡೆದು ಎಲ್ಲವನ್ನೂ ಮಾಡುತ್ತೇವೆ. ಲಕ್ಷ್ಮಣ ಸವದಿ ನನ್ನ ಆತ್ಮೀಯ ಸ್ನೇಹಿತ. ಅವರು ಉಪ ಮುಖ್ಯಮಂತ್ರಿ ಆಗಲೆಂದು ಮನಸ್ಸಿನ ಭಾವನೆ ವ್ಯಕ್ತ ಪಡಿಸಿದ್ದೇನೆ. ಅವರು ಉಪಮುಖ್ಯಮಂತ್ರಿ ಆಗಲಿ ಎಂಬುದು ನನ್ನ ಆಸೆ. ಭಗವಂತ ಬಯಸಿದಾಗ ನಾನು ಮತ್ತೆ ಮಂತ್ರಿಯಾಗೋದು. ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಕೆ.ಎಸ್. ಈಶ್ವರಪ್ಪ ತಿಳಿಸಿದ್ರು. ಇದನ್ನೂ ಓದಿ: Viral News: ಹೆಂಡತಿ ಮಾರಾಟಕ್ಕಿದ್ದಾಳೆ ಎಂದು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ ಗಂಡ; ಪತ್ನಿ ಮಾಡಿದ್ದೇನು?

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಇನ್ನು ಧಾರವಾಡದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದು, ರಾಜ್ಯದ ನಾಲ್ಕು ವಿಧಾನ‌ ಪರಿಷತ್‌ ಚುನಾವಣೆ ಇದೆ. ಹನುಮಂತ ನಿರಾಣಿ, ಹೊರಟ್ಟಿ, ಅರುಣ ಶಹಪುರ್ ಹಾಗೂ ಮೈಸೂರಲ್ಲಿ ಅಭ್ಯರ್ಥಿ ಮಾಡಿದ್ದೇವೆ. ಎಲ್ಲ ಕಡೆ ವಾತಾವರಣ ಚೆನ್ನಾಗಿದೆ. ಧಾರವಾಡದಲ್ಲಿ ಪ್ರಮುಖರ ಸಭೆ ನಡೆಸಲು ಬಂದಿದ್ದೇನೆ. ಇಲ್ಲಿವರೆಗೆ ಏನು ಕಾರ್ಯ ನಡೆದಿವೆ ಎಂದು‌ ನೋಡಲು ಬಂದಿದ್ದೇನೆ. ಮೋದಿ‌ ಸರ್ಕಾರಕ್ಕೆ 8 ವರ್ಷ ಹಿನ್ನೆಲೆ ಮೋದಿ ಅವರಿಂದಲೇ ಜಗತ್ತು ನಮ್ಮತ್ತ ನೋಡುವಂತೆ ಆಗಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರಧಾನಿ ಮೋದಿ ಮೈಸೂರಿಗೆ ಬರ್ತಾರೆ. ಈ ಸಂಬಂಧ ಪತ್ರ ವ್ಯವಹಾರ ಆಗಿದೆ ಎಂದರು. ಇದನ್ನೂ ಓದಿ: ಬಿ.ವೈ. ವಿಜಯೇಂದ್ರನ್ನು ಮಾಧ್ಯಮಗಳು ಹಿರೋ ಮಾಡುತ್ತಿವೆ; ಅವರನ್ನ ಹಿರೋ ಮಾಡೋದಕ್ಕೆ ನನ್ನನ್ನು ತುಳಿಯುತ್ತಿದ್ದೀರಿ-ಬಸನಗೌಡ ಪಾಟೀಲ್ ಯತ್ನಾಳ್

ಮಸೀದಿ ಹಾಗೂ ಮಂದಿರ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಇದೊಂದು ಸಾರ್ವಜನಿಕ ವಿಚಾರ. ಮಸೀದಿ ಮಂದಿರಗಳ‌ ಚರ್ಚೆ ಯುಪಿಯಿಂದ ಆರಂಭವಾಗಿದ್ದು. ಈಗ ನ್ಯಾಯಾಲಯ ಹಂತದಲ್ಲಿ ಇವೆ. ಅದರ ಆದೇಶದಂತೆ ತನಿಖೆ ನಡೆಯಲಿದೆ. ಪರಿಷತ್ ಚುನಾವಣೆ ವಿಧಾನಸಭೆ ಚುನಾವಣೆ ದಿಕ್ಸೂಚಿ ಅಲ್ಲ. ಟಿಕೆಟ್ ತಪ್ಪಿದವರಿಗೆ ಅಸಮಾಧಾನ ಇಲ್ಲ. ಮುಂದಿನ ದಿನಗಳಲ್ಲಿ ಅವರಿಗೂ ಬೇರೆ ಅವಕಾಶ ಕೊಡಲಿದ್ದೇವೆ ಎಂದರು.

Published On - 6:21 pm, Thu, 26 May 22

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM