ವಿಜಯಪುರ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರ ಪುತ್ರ ಬಿ.ವೈ. ವಿಜಯೇಂದ್ರನ್ನು ಮಾಧ್ಯಮಗಳು ಹಿರೋ ಮಾಡುತ್ತಿವೆ ಎಂದು ಮಾಧ್ಯಮದ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಜಯಪುರ ನಗರದ ಖಾಸಗಿ ಹೋಟೆಲ್‌ನಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ ಕಾರಿ ಆಕ್ರೋಶ ಹೊರ ಹಾಕಿದ್ದಾರೆ.
ಕೆಲ ಟಿವಿ ಮಾಧ್ಯಮಗಳು ಬಿ.ವೈ. ವಿಜಯೇಂದ್ರನ್ನು ಹಿರೋ ಮಾಡೋದಕ್ಕೆ ಯತ್ನಾಳನ್ನು ತುಳಿಯುತ್ತಿದ್ದೀರಿ. ಯತ್ನಾಳರನ್ನಾ ಯಾವಾಗ ಹೊರ ಹಾಕುತ್ತೀರಿ ಎಂದು ನಳಿನ್ ಕುಮಾರ್ ಕಟೀಲ್ ಅವರಿಗೆ ಗಂಟು ಬಿದಿದ್ದೀರಿ ಎಂದು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡದೇ ಶಾಸಕ ಯತ್ನಾಳ್ ಹೊರಟ್ರು. ನಗರದ ಬಸವ ರೆಸಿಡೆನ್ಸಿ ಹೊಟೇಲ್ ಗೆ ಸಚಿವರಾದ ಭೈರತಿ ಬಸವರಾಜ ಹಾಗೂ ಎಂಟಿಬಿ ನಾಗರಾಜ ಭೇಟಿಗೆ ಬಂದಿದ್ದ ಯತ್ನಾಳ್ ಮಾಧ್ಯಮದವರು ಪ್ರತಿಕ್ರಿಯೆ ಪಡೆಯಲು ತೆರಳಿದ್ದ ವೇಳೆ ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ವಿಜಯೇಂದ್ರಗೆ ಕೈ ತಪ್ಪಿದ ಟಿಕೆಟ್ ವಿಧಾನಪರಿಷತ್ ಚುನಾವಣೆಯಲ್ಲಿ ವಿಜಯೇಂದ್ರಗೆ ಟಿಕೆಟ್ ಕೈತಪ್ಪಿತ್ತು. ಅತ್ತ ಅಭಿಮಾನಿಗಳು ಮುಂದಿನ ಸಿಎಂ ಎಂಬಲ್ಲಿವರೆಗೂ ವಿಜಯೇಂದ್ರ ಪರ ಘೋಷಣೆಯನ್ನು ಮುಟ್ಟಿಸಿದ್ದಾರೆ. ಇದರ ನಡುವೆ ವಿಜಯೇಂದ್ರ ಅವರಿಗೆ ಟಿಕೆಟ್ ಕೈತಪ್ಪಿರುವುದಕ್ಕೆ ಮಾಜಿ ಶಾಸಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾನೇನೂ ಬಿಎಸ್‌ವೈ ಪರ ಬ್ಯಾಟಿಂಗ್ ಮಾಡ್ತಾ ಇಲ್ಲ ಎನ್ನುತ್ತಲೇ, ವ್ಯವಸ್ಥಿತವಾಗಿ ಬಿಜೆಪಿಯಲ್ಲಿ ಯಡಿಯೂರಪ್ಪರನ್ನು ಮೂಲೆಗುಂಪು ಮಾಡ್ತಿದ್ದಾರೆಂದು ದೂರಿದ್ದಾರೆ. ಇದನ್ನೂ ಓದಿ: ದೆಹಲಿಯ ನೂತನ ಲೆಫ್ಟಿನೆಂಟ್ ಗವರ್ನರ್ ಪ್ರಮಾಣವಚನ ಸಮಾರಂಭದಿಂದ ಮಾಜಿ ಸಚಿವ ಹರ್ಷವರ್ಧನ್ ಹೊರ ನಡೆದಿದ್ದೇಕೆ?
ಆದ್ರೆ ಖುದ್ದು ವಿಜಯೇಂದ್ರ ಇಂತದ್ದೇನೂ ಆಗಿಲ್ಲ ಎಂಬ ನಿಲುವಿಗೆ ಬಂದಿದ್ದಾರೆ. ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಪಕ್ಷವನ್ನು ಎರಡು ಸ್ಥಾನದಿಂದ ಅಧಿಕಾರಕ್ಕೆ ತಂದವರು ಯಡಿಯೂರಪ್ಪ. ಯಾರಿಗೆ ಯಾವಾಗ ಯಾವ ಸ್ಥಾನ ಕೊಡಬೇಕು ಎನ್ನುವುದು ನಮ್ಮ ಹೈಕಮಾಂಡ್‌ಗೆ ಗೊತ್ತಿದೆ ಎಂದಿದ್ದಾರೆ. ಇದರ ನಡುವೆ ಮಾಜಿ ಸಿಎಂ ಯಡಿಯೂರಪ್ಪ ಕೂಡ ಮೌನ ಮುರಿದಿದ್ದಾರೆ. ವಿಜಯೇಂದ್ರಗೆ ಈಗಲ್ಲದಿದ್ದರೂ ಮುಂದೆ ಬಿಜೆಪಿ ಹೈಕಮಾಂಡ್ ಉತ್ತಮ ಅವಕಾಶ ಮಾಡಿಕೊಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಬಿಎಸ್‌ವೈ, ತಮ್ಮ ಗುರಿಯೇನಿದ್ದರೂ ಮುಂದೆ ಪಕ್ಷವನ್ನು ಅಧಿಕಾರಕ್ಕೆ ತರುವುದು ಎಂದಿದ್ದಾರೆ. ಹೀಗೆ ವಿಜಯೇಂದ್ರಗೆ ಕೈತಪ್ಪಿ ಹೋದ ಟಿಕೆಟ್ ಈಗ ದೊಡ್ಡ ಚರ್ಚೆಯಾಗುತ್ತಿದೆ. ಬಹಿರಂಗವಾಗಿ ಬಿಎಸ್‌ವೈ ಮತ್ತು ಅವರ ಪುತ್ರ ಹೈಕಮಾಂಡ್ ನಿರ್ಣಯಕ್ಕೆ ಬದ್ಧ ಎನ್ನುವ ಮಾತು ಹೇಳುತ್ತಿದ್ದಾರೆ.