ದೆಹಲಿಯ ನೂತನ ಲೆಫ್ಟಿನೆಂಟ್ ಗವರ್ನರ್ ಪ್ರಮಾಣವಚನ ಸಮಾರಂಭದಿಂದ ಮಾಜಿ ಸಚಿವ ಹರ್ಷವರ್ಧನ್ ಹೊರ ನಡೆದಿದ್ದೇಕೆ?

ಲೆಫ್ಟಿನೆಂಟ್ ಗವರ್ನರ್ ಅವರ ಅಧಿಕೃತ ನಿವಾಸ ರಾಜ್ ನಿವಾಸದಲ್ಲಿ ಪ್ರಮಾಣ ವಚನ ಸ್ವೀಕಾರ ನಡೆಯಿತು. "ಏನಾಯ್ತು ಸಾರ್?" ಎಂದು ವ್ಯಕ್ತಿಯೊಬ್ಬರು ಕೇಳುತ್ತಿರುವುದು ವಿಡಿಯೊದಲ್ಲಿ ಕೇಳಿಸುತ್ತದೆ. ಅದಕ್ಕೆ ಹರ್ಷವರ್ಧನ್ ಅವರು ಸಂಸತ್ತಿನ ಸದಸ್ಯರಿಗೆ ಆಸನಗಳನ್ನು ಮೀಸಲು ಇರಿಸಿರಲಿಲ್ಲ...

ದೆಹಲಿಯ ನೂತನ ಲೆಫ್ಟಿನೆಂಟ್ ಗವರ್ನರ್ ಪ್ರಮಾಣವಚನ ಸಮಾರಂಭದಿಂದ ಮಾಜಿ ಸಚಿವ ಹರ್ಷವರ್ಧನ್ ಹೊರ ನಡೆದಿದ್ದೇಕೆ?
ಸಮಾರಂಭದಿಂದ ಹೊರಹೋಗುತ್ತಿರುವ ಮಾಜಿ ಸಚಿವ ಹರ್ಷವರ್ಧನ್
TV9kannada Web Team

| Edited By: Rashmi Kallakatta

May 26, 2022 | 4:38 PM

ದೆಹಲಿ: ದೆಹಲಿಯ  ನೂತನ ಲೆಫ್ಟಿನೆಂಟ್ ಗವರ್ನರ್ (lieutenant governor) ವಿನಯ್ ಕುಮಾರ್ ಸಕ್ಸೇನಾ (Vinai Kumar Saxena) ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕೇಂದ್ರದ ಮಾಜಿ ಸಚಿವ ಡಾ.ಹರ್ಷವರ್ಧನ್ (Dr. Harshvardhan) ಅವರು ಸಂಸದರಿಗೆ ಸ್ಥಾನಗಳನ್ನು ಮೀಸಲಿಟ್ಟಿಲ್ಲ ಎಂದು ದೂರಿ ಕಾರ್ಯಕ್ರಮದಿಂದ ಹೊರನಡೆದಿರುವ ಘಟನೆ ನಡೆದಿದೆ. “ದೇಶದ ಗೋದಿ ಮೀಡಿಯಾಗಳಿಗೆ ಈ ವಿಡಿಯೊವನ್ನು ಅಪ್‌ಲೋಡ್ ಮಾಡಲು ಧೈರ್ಯವಿದೆಯೇ? ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಬಿಜೆಪಿ ಸಂಸದ ಡಾ ಹರ್ಷವರ್ಧನ್ ಅವರಿಗೆ ಕುಳಿತುಕೊಳ್ಳಲು ಸೀಟು ಸಿಗದಿದ್ದಕ್ಕಾಗಿ ಅವರು ತೀವ್ರ ಕೋಪಗೊಂಡಿರುವಂತೆ ತೋರುತ್ತಿದೆ. ಬಿಜೆಪಿಯ ಮಾಜಿ ಸಚಿವರು ಮತ್ತು ಹಿರಿಯ ನಾಯಕರಿಗೆ ಆದ ಅವಸ್ಥೆ ಇದು ಎಂದು ಎಂದು ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಉಸ್ತುವಾರಿ ರೋಹನ್ ಗುಪ್ತಾ ಟ್ವೀಟ್ ಮಾಡಿದ್ದಾರೆ. ಗುಪ್ತಾ ಅವರು ಮಾಜಿ ಕೇಂದ್ರ ಆರೋಗ್ಯ ಸಚಿವರು ಸ್ಥಳದಿಂದ ನಿರ್ಗಮಿಸುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.  ಲೆಫ್ಟಿನೆಂಟ್ ಗವರ್ನರ್ ಅವರ ಅಧಿಕೃತ ನಿವಾಸ ರಾಜ್ ನಿವಾಸದಲ್ಲಿ ಪ್ರಮಾಣ ವಚನ ಸ್ವೀಕಾರ ನಡೆಯಿತು. “ಏನಾಯ್ತು ಸಾರ್?” ಎಂದು ವ್ಯಕ್ತಿಯೊಬ್ಬರು ಕೇಳುತ್ತಿರುವುದು ವಿಡಿಯೊದಲ್ಲಿ ಕೇಳಿಸುತ್ತದೆ. ಅದಕ್ಕೆ ಹರ್ಷವರ್ಧನ್ ಅವರು ಸಂಸತ್ತಿನ ಸದಸ್ಯರಿಗೆ ಆಸನಗಳನ್ನು ಮೀಸಲು ಇರಿಸಿರಲಿಲ್ಲ ಎಂದು ಹಿಂದಿಯಲ್ಲಿ ಹೇಳುತ್ತಿರುವುದು ಕೇಳಿಸುತ್ತದೆ.

ಈ ವಿಡಿಯೊ ಟ್ವಿಟರ್​​ನಲ್ಲಿ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಶೇರ್ ಆಗಿದೆ. ವಿನಯ್ ಕುಮಾರ್ ಸಕ್ಸೇನಾ ಅವರನ್ನು ಸೋಮವಾರ ದೆಹಲಿಯ 22 ನೇ ಲೆಫ್ಟಿನೆಂಟ್ ಜನರಲ್ ಆಗಿ ನೇಮಿಸಲಾಯಿತು.

ದೆಹಲಿಯ ಚಾಂದಿನಿ ಚೌಕ್ ಕ್ಷೇತ್ರದ ಸಂಸದರಾಗಿರುವ ಡಾ ಹರ್ಷವರ್ಧನ್ ಕಳೆದ ವರ್ಷ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಅವರ ನಂತರ ಹಾಲಿ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅಧಿಕಾರ ವಹಿಸಿಕೊಂಡರು.

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada