ಪರಸ್ತ್ರೀ ಜತೆ ಓಡಿಹೋದ ಪತಿ: ಠಾಣೆ ಮುಂದೆ ಕುಳಿತು ಕಣ್ಣೀರಿಟ್ಟ ಗ್ರಾಮ ಪಂಚಾಯಿತಿ ಸದಸ್ಯೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 19, 2025 | 3:50 PM

ಮಾರಿಹಾಳ ಗ್ರಾಮ ಪಂಚಾಯತಿ ಸದಸ್ಯೆ ಪತಿ 25 ದಿನಗಳ ಹಿಂದೆ ವಿವಾಹಿತ ಪರಸ್ತ್ರೀಯೊಂದಿಗೆ ಓಡಿಹೋಗಿದ್ದಾರೆ. ನ್ಯಾಯಕ್ಕಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಸ್ಪಂದಿಸುತ್ತಿಲ್ಲ ಎಂದು ಸದಸ್ಯೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತಿ ಮತ್ತು ಪರಸ್ತ್ರೀ ಪರಾರಿಯಾಗಿದ್ದು, ಎರಡು ಕುಟುಂಬಗಳು ಕಂಗಾಲಾಗಿವೆ. ನ್ಯಾಯ ಒದಗಿಸುವಂತೆ ಸದಸ್ಯೆ ಒತ್ತಾಯಿಸಿದ್ದಾರೆ.

ಪರಸ್ತ್ರೀ ಜತೆ ಓಡಿಹೋದ ಪತಿ: ಠಾಣೆ ಮುಂದೆ ಕುಳಿತು ಕಣ್ಣೀರಿಟ್ಟ ಗ್ರಾಮ ಪಂಚಾಯಿತಿ ಸದಸ್ಯೆ
ಪರಸ್ತ್ರೀ ಜತೆ ಓಡಿಹೋದ ಪತಿ: ಠಾಣೆ ಮುಂದೆ ಕುಳಿತು ಕಣ್ಣೀರಿಟ್ಟ ಗ್ರಾಮ ಪಂಚಾಯಿತಿ ಸದಸ್ಯೆ
Follow us on

ಬೆಳಗಾವಿ, ಜನವರಿ 19: ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮ ಪಂಚಾಯಿತಿ ಸದಸ್ಯೆ (Gram Panchayat Member) ಪತಿ ಪರಸ್ತ್ರೀ ಜೊತೆ ಓಡಿಹೋಗಿರುವಂತಹ ಘಟನೆ ನಡೆದಿದ್ದು, ಪತಿ ಹುಡುಕಿಕೊಡಿ ಎಂದು ಠಾಣೆ ಮುಂದೆ ಸದಸ್ಯೆ ಪ್ರತಿಭಟನೆ ಮಾಡಿದ್ದಾರೆ. ಪರಸ್ತ್ರೀ ಜತೆ ಬಸವರಾಜ ಸೀತಾಮನಿ ಓಡಿಹೋಗಿರುವ ಸದಸ್ಯೆ ವಾಣಿಶ್ರೀ ಪತಿ. ಮಾರಿಹಾಳ ಠಾಣೆಗೆ ದೂರು ನೀಡಲು ಬಂದರೆ ಪೊಲೀಸರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

25 ದಿನಗಳ ಹಿಂದೆ ವಿವಾಹಿತೆ ಮಾಸಾಬಿ ಜೊತೆ ಓಡಿಹೋಗಿರುವ ಆರೋಪ ಮಾಡಲಾಗಿದೆ. ನನ್ನ ಜೀವನ ಹಾಳುಮಾಡಿ ಬೇರೆಯವಳ ಜೊತೆ ಇರಲು ನಾನು ಬಿಡಲ್ಲ. ನನಗೆ ಪತಿ, ಮಕ್ಕಳು ಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯೆ ವಾಣಿಶ್ರೀ ಪಟ್ಟುಹಿಡಿದಿದ್ದಾರೆ.

ಆಕೆ ಗಂಡನನ್ನು ಬಿಟ್ಟು ನಿಂತಿದ್ದಾಳೆ ಎಂದು ನಾನು ಹಾಗೆಯೇ ನಿಲ್ಲಬೇಕಾ? ಮಾಸಾಬಿಗೆ ನನ್ನ ಪತಿ ಬಸವರಾಜ ಸೀತಾಮನಿ ಬಿಟ್ಟುಕೊಡುವುದಿಲ್ಲ. ನಿನ್ನೆ ನನಗೆ ಕರೆ ಮಾಡಿ ನಿನ್ನ ಗಂಡನನ್ನು ಬಿಡಲ್ಲವೆಂದು ಹೇಳಿದ್ದಾಳೆ. ಹಾಗಾಗಿ ಪೊಲೀಸರೇ ನ್ಯಾಯ ಕೊಡಿಸಬೇಕೆಂದು ವಾಣಿಶ್ರೀ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮೂಕ ಪ್ರಾಣಿ ಮೇಲೆ ಇದೆಂಥಾ ಕ್ರೌರ್ಯ: ನಾಯಿಯನ್ನ ಕೊಂದು ಆಟೋಗೆ ಕಟ್ಟಿ ಎಳೆದೊಯ್ದ ವ್ಯಕ್ತಿ

2 ದಿನಗಳ ಹಿಂದೆ ಹಿರೇಬಾಗೇವಾಡಿ ಠಾಣೆಗೆ ಹಾಜರಾಗಿದ್ದ ಮಾಸಾಬಿ, ತನ್ನ ಜೊತೆ ಬಂದಿದ್ದ ಬಸವರಾಜ ಸೀತಾಮನಿ ಬಿಟ್ಟು ಒಬ್ಬಳೇ ಬಂದಿದ್ದಳು. ಮಾಸಾಬಿ ಕರೆತಂದಿದ್ದ ಪೊಲೀಸರು ನನ್ನ ಪತಿ ಕರೆತಂದಿದ್ದಲ್ಲವೆಂದು ಪೊಲೀಸರ ವಿರುದ್ಧ ವಾಣಿಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಬಸವರಾಜ, ಮಾಸಾಬಿ ಪರಾರಿಯಾಗಿದ್ದರಿಂದ 2 ಕುಟುಂಬಗಳು ಕಂಗಾಲಾಗಿದ್ದು, ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ವಾಣಿಶ್ರೀ ಅಲೆಯುತ್ತಿದ್ದಾರೆ.

ಪ್ರೀತಿ ವಿಚಾರ ತಿಳಿದು ಬಾಲಕಿ ಸಹೋದರರಿಂದ ಲವರ್​ ಮೇಲೆ ಮಾರಣಾಂತಿಕ ಹಲ್ಲೆ

ಮತ್ತೊಂದು ಪ್ರಕರಣದಲ್ಲಿ ಪ್ರೀತಿ ವಿಚಾರ ತಿಳಿದು ಬಾಲಕಿ ಸಹೋದರರಿಂದ ಮೊಬೈಲ್​ ರಿಪೇರಿ ಅಂಗಡಿ ಯುವಕನಿಗೆ ಮಾರಣಾಂತಿಕ ಹಲ್ಲೆ ಮಾಡಿರುವಂತಹ ಘಟನೆ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ನಡೆದಿದೆ. ಸೌರಭ್ ದಾಧಾಗೋಳ ಮೇಲೆ ಹಲ್ಲೆ 8ಕ್ಕೂ ಹೆಚ್ಚು ಜನರಿಂದ ಹಲ್ಲೆ ಮಾಡಲಾಗಿದೆ.   ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದವನನ್ನು ಫೋನ್​​ ಮಾಡಿ ಕರೆಸಿ ಹಲ್ಲೆ ಮಾಡಲಾಗಿದೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

6 ವರ್ಷದಿಂದ ಬಾಲಕಿಯನ್ನು ಸೌರಭ್ ದಾಧಾಗೋಳ ಪ್ರೀತಿಸುತ್ತಿದ್ದ. ಮದುವೆ ಮಾಡಿಕೊಡುವಂತೆ ಬಾಲಕಿ ಕುಟುಂಬಕ್ಕೆ ಕೇಳಿದ್ದ. ಮದುವೆ ಮಾಡಿಕೊಡಲು ಬಾಲಕಿ ಕುಟುಂಬ ಸದಸ್ಯರು ನಿರಾಕರಿಸಿದ್ದರು. ಆದರೆ ಸೌರಭ್ ದಾಧಾಗೋಳ​​ ಬೇಕು ಅಂತಾ ಹುಡುಗಿ ಹಠ ಹಿಡಿದಿದ್ದಳು. ಈ ವಿಚಾರ ತಿಳಿದು ಸೌರಭ್ ದಾಧಾಗೋಳ​​​​ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಾಲೇಜು ಕಟ್ಟಡದಿಂದ ಜಿಗಿದು ಏರೋಸ್ಪೇಸ್ ವಿದ್ಯಾರ್ಥಿ ಆತ್ಮಹತ್ಯೆ

ಈ ಹಿಂದೆ ಒಂದು ಬಾರಿ ಮಾತುಕತೆ ಮಾಡಿದ್ದ ಎರಡು ಕುಟುಂಬಗಳು, ಆಗ ಮದುವೆ ಮಾಡಿಕೊಡುವುದಿಲ್ಲವೆಂದು ಬಾಲಕಿ ಮನೆಯವರು ಹೇಳಿದ್ದರು. ಇದೇ ಊರಲ್ಲೇ ಮಹಿಳೆ ಬೆತ್ತಲೆಗೊಳಿಸಿ ಹಲ್ಲೆಮಾಡಿದ್ದ ಘಟನೆ ನಡೆದಿತ್ತು. ಕಳೆದ ವರ್ಷ ಪ್ರೀತಿ ವಿಚಾರಕ್ಕೆ ಯುವಕನ ತಾಯಿ ಮೇಲೆ ಹಲ್ಲೆ ಆಗಿತ್ತು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.