ಬೆಳಗಾವಿ, ಸೆ.12: ಚಲಿಸುತ್ತಿದ್ದ ರೈಲಿನಲ್ಲಿ ಅನುಮಾನಾಸ್ಪದವಾಗಿ ಪ್ರಯಾಣಿಕರು ಪ್ರಜ್ಞೆ ತಪ್ಪಿದ ಆಘಾತಕಾರಿ ಘಟನೆ ನಡೆದಿದೆ(Consciousness). ಗೋವಾದಿಂದ ದೆಹಲಿಗೆ ತೆರಳುತ್ತಿದ್ದ ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲಿನಲ್ಲಿ(Nizamuddin Express Train) ಪ್ರಯಾಣಿಸುತ್ತಿದ್ದ 8 ಜನರು ಪ್ರಜ್ಞೆ ತಪ್ಪಿ ಅಸ್ವಸ್ಥಗೊಂಡಿದ್ದು ಬೆಳಗಾವಿ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಂದು ಪ್ರಜ್ಞೆತಪ್ಪಿದ್ದ 8 ಪ್ರಯಾಣಿಕರನ್ನು ಬಿಮ್ಸ್ ಆಸ್ಪತ್ರೆಗೆ(BIMS Hospital) ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಗಂಭೀರವಾಗಿ ಅಸ್ವಸ್ಥಗೊಂಡ ನಾಲ್ವರು ಪ್ರಯಾಣಿಕರಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಗೋವಾದಿಂದ ದೆಹಲಿಗೆ ಹೋಗುವ ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 8 ಮಂದಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಅಸ್ವಸ್ಥಗೊಂಡಿದ್ದಾರೆ. ಇದರಿಂದ ಗಾಬರಿಗೊಂಡ ಸಹ ಪ್ರಯಾಣಿಕರು ಬೆಳಗಾವಿ ರೈಲು ನಿಲ್ದಾಣ ಬರುತ್ತಿದ್ದಂತೆ ಈ ಘಟನೆಯನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ಬಳಿಕ ಕೂಡಲೇ ಪ್ರಜ್ಞೆ ತಪ್ಪಿದ 8 ಜನ ಪ್ರಯಾಣಿಕರನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಗಂಭೀರವಾಗಿ ಅಸ್ವಸ್ಥತಗೊಂಡ ನಾಲ್ವರು ಪ್ರಯಾಣಿಕರಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಸಹ ಪ್ರಯಾಣಿಕರು ನೀಡಿದ ಆಹಾರ ಸೇವಿಸಿ ಪ್ರಜ್ಞೆ ತಪ್ಪಿದ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪ್ರಕರಣ ಬಗ್ಗೆ ಬೆಳಗಾವಿ ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಬಂದ್ ನಡುವೆ ಅಹಿತಕರ ಘಟನೆ: ಉದ್ದೇಶ ಪೂರ್ವಕವಾಗಿ ರ‍್ಯಾಪಿಡೋ ಚಾಲಕನ ಮೇಲೆ ಹಲ್ಲೆ: 13 ಕೇಸ್ ದಾಖಲು
ಮೈಸೂರಿನ ಬೋಗಾದಿ ಬಡಾವಣೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಉರುಳಿ ಬಿದ್ದಿದ್ದು, ಇಬ್ಬರಿಗೆ ಗಾಯಗಳಾಗಿವೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು 3 ವಿದ್ಯುತ್ ಕಂಬಗಳು ಜಖಂ ಆಗಿವೆ. ವಿಚಾರ ತಿಳಿದು ತಕ್ಷಣ ಸ್ಥಳಕ್ಕೆ 108 ಆ್ಯಂಬುಲೆನ್ಸ್ ಸಿಬ್ಬಂದಿ ಧಾವಿಸಿದ್ದು ಕಾರಿನಲ್ಲಿ ಸಿಲುಕಿದ್ದ ರಾಘವನ್ ಹಾಗೂ ನಿಶ್ಚಲ್ ಸಾಯಿ ರಕ್ಷಣೆ ಮಾಡಲಾಗಿದೆ. ಗಾಯಾಳುಗಳಿಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೃಷ್ಣರಾಜ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:43 am, Tue, 12 September 23