AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಬಂದ್​ ನಡುವೆ ಅಹಿತಕರ ಘಟನೆ: ಉದ್ದೇಶ ಪೂರ್ವಕವಾಗಿ ರ‍್ಯಾಪಿಡೋ ಚಾಲಕನ ಮೇಲೆ ಹಲ್ಲೆ: 13 ಕೇಸ್​ ದಾಖಲು

ಪ್ರತಿಭಟನೆಗೆ ಸಹಕಾರ ನೀಡದ ಚಾಲಕರ ಮೇಲೆ ಮೊಟ್ಟೆ ಎಸೆದು, ಹಲ್ಲೆ ನಡೆಸಿ ಆಕ್ರೋಶ ವ್ಯಕ್ತಪಸಿಸಲಾಗಿದೆ. ನಗರದ 8 ಕಾನೂನು ಮತ್ತು ಸುವ್ಯವಸ್ಥೆೆ ವಿಭಾಗ ವಿವಿಧ ಪೊಲೀಸರು ದೌರ್ಜನ್ಯ ಎಸಗಿದವರ ಮೇಲೆ ಪ್ರಕರಣ ದಾಖಲಾಗಿವೆ. ಹಲ್ಲೆ ಮಾಡಿದ 13 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಈ ಪೈಕಿ 12 ಮಂದಿಯನ್ನು ಬಂಧಿಸಲಾಗಿದೆ.

ಬೆಂಗಳೂರು ಬಂದ್​ ನಡುವೆ ಅಹಿತಕರ ಘಟನೆ: ಉದ್ದೇಶ ಪೂರ್ವಕವಾಗಿ ರ‍್ಯಾಪಿಡೋ ಚಾಲಕನ ಮೇಲೆ ಹಲ್ಲೆ: 13 ಕೇಸ್​ ದಾಖಲು
ಪ್ರಾತಿನಿಧಿಕ ಚಿತ್ರ
Follow us
Prajwal Kumar NY
| Updated By: ಗಂಗಾಧರ​ ಬ. ಸಾಬೋಜಿ

Updated on: Sep 11, 2023 | 10:23 PM

ಬೆಂಗಳೂರು, ಸೆಪ್ಟೆಂಬರ್​​ 11: ಖಾಸಗಿ ಸಾರಿಗೆ ಒಕ್ಕೂಟ ಪ್ರತಿಭಟನೆ ವೇಳೆ ಹಲವೆಡೆ ಗಲಾಟೆಗಳು ನಡೆದಿದ್ದು, ಕೇಸ್​ ದಾಖಲಾಗಿವೆ. ಬೇಕಂತಲೇ ರ‍್ಯಾಪಿಡೋ ಬೈಕ್​ ಬುಕ್​​ ಮಾಡಿ, ಬಂದ ಸವಾರನ ಮೇಲೆ ಹಲ್ಲೆ (Assault) ಮಾಡಿದ್ದ ಮೂವರನ್ನು ಪೊಲೀಸರು ಬಂಧಿಸಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಪುನೀತ್​, ಮಣಿ, ಶರಣ್​ ಬಂಧಿತರು. ವಿಜಯ್ ​ಕುಮಾರ್​ ಹಲ್ಲೆಗೊಳಗಾದ ರ‍್ಯಾಪಿಡೋ ಬೈಕ್ ಸವಾರ. ಪ್ರತಿಭಟನೆ ವೇಳೆ ಆರೋಪಿಗಳು ರ‍್ಯಾಪಿಡೋ ಬೈಕ್​ ಬುಕ್​ ಮಾಡಿದ್ದರು. ಬಳಿಕ ಬೈಕ್ ಸವಾರ ವಿಜಯ್ ಕುಮಾರ್​ ಮುಖಕ್ಕೆ ಮೊಟ್ಟೆ ಹೊಡೆದು ಬೆದರಿಕೆ ಹಾಕಿದ್ದಾರೆ. ಹಾಗಾಗಿ ಬೆಂಗಳೂರಿನ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಭಟನೆಗೆ ಸಹಕಾರ ನೀಡದ ಚಾಲಕರ ಮೇಲೆ ಮೊಟ್ಟೆ ಎಸೆದು, ಹಲ್ಲೆ ನಡೆಸಿ ಆಕ್ರೋಶ ವ್ಯಕ್ತಪಸಿದ್ದು, ಮತ್ತೆ ಕೆಲವೆಡೆ ವಾಹನದ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಹಾಗಾಗಿ ನಗರ 8 ಕಾನೂನು ಮತ್ತು ಸುವ್ಯವಸ್ಥೆೆ ವಿಭಾಗ ವಿವಿಧ ಪೊಲೀಸರು ದೌರ್ಜನ್ಯ ಎಸಗಿದವರ ಮೇಲೆ ಪ್ರಕರಣ ದಾಖಲಾಗಿವೆ. ಹಲ್ಲೆ ಮಾಡಿದ 13 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಈ ಪೈಕಿ 12 ಮಂದಿಯನ್ನು ಬಂಧಿಸಲಾಗಿದೆ.

ಎಲ್ಲೆಲ್ಲಿ ಅಹಿತಕರ ಘಟನೆ ನಡೆದಿವೆ?

ಚಿಕ್ಕಜಾಲದಲ್ಲಿ ಇಂದು ನಸುಕಿನ 3 ಗಂಟೆ ಸುಮಾರಿಗೆ ಏರ್‌ಪೋರ್ಟ್ ಕಡೆಯಿಂದ ಬರುತ್ತಿದ್ದ ಎರಡು ಕ್ಯಾಬ್‌ಗಳನ್ನು ಅಡ್ಡಗಟ್ಟಿ, ಮೂವರು ಕಾರುಗಳ ಗಾಜು ಧ್ವಂಸ ಮಾಡಲಾಗಿದೆ. ಈ ಸಂಬಂಧ ಬೆಂಗಳೂರು ಆಟೋ ಚಾಲಕರ ಸಂಘ ಸದಸ್ಯರಾದ ವಿಜಯಕುಮಾರ್, ನಾಗರಾಜ್, ನಾರಾಯಣಗೌಡ ಎಂಬವರನ್ನು ಬಂಧಿಸಲಾಗಿದೆ.

ಮೊಟ್ಟೆ ಒಡೆದು ದೌರ್ಜನ್ಯ

  • ಗೊರಗುಂಟೆಪಾಳ್ಯ, ರಾಜ್‌ಕುಮಾರ್ ರಸ್ತೆೆಯಲ್ಲಿ ಬಂದ್ ನಡುವೆಯೂ ಕಾರ್ಯಾಚರಣೆ ನಡೆಸಿದ ಎರಡು ಆಟೋಗಳನ್ನು ಅಡ್ಡಗಟ್ಟಿ ಚಕ್ರದ ಗಾಳಿ ಬಿಟ್ಟು ಬೆದರಿಕೆ ಹಾಕಿದ್ದಾರೆ.
  • ಮೇಖ್ರಿ ವೃತ್ತದ ಬಳಿಕ ಕಾರ್ಯಾಚರಣೆ ನಡೆಸಿದ ಕಾರು ಚಾಲಕನಿಗೆ ಬೆದರಿಕೆ ಹಾಕಿ, ಕಾರಿನ ಹಿಂಬದಿ ಚಕ್ರ ಬಿಚ್ಚಿಕೊಂಡು ಪರಾರಿ ಆಗಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಬಂದ್: ಪ್ರತಿಭಟನಾಕಾರರಿಂದ ರಾಪಿಡೊ ಚಾಲಕರ ಮೇಲೆ ಹಲ್ಲೆ, ರಸ್ತೆಗಿಳಿದ ವಾಹನಗಳ ಟೈಯರ್ ಪಂಚರ್

  • ಮತ್ತೊಂದೆಡೆ ಹಳದಿ ಬೋರ್ಡ್ ಕಾರುಗಳು, ಸಣ್ಣ-ಪುಟ್ಟ ಗೂಡ್‌ಸ್‌ ವಾಹನಗಳು, ಆಟೋಗಳ ಮೇಲೆ ಮೊಟ್ಟೆ ಎಸೆದು, ಆಟೋಗಳ ಗಾಜು ಧ್ವಂಸಗೊಳಿಸಿದ್ದಾರೆ.
  • ಸಹಕಾರ ನಗರದಲ್ಲಿ ಕ್ಯಾಬ್‌ನ ಒಳಭಾಗ ಮತ್ತು ಚಾಲಕನಿಗೆ ಮೊಟ್ಟೆ ಒಡೆದು ದೌರ್ಜನ್ಯ ಎಸಗಿದ್ದಾರೆ.
  • ರ‍್ಯಾಪಿಡೋ ಚಾಲಕನ ಮೇಲೆ ಹಲ್ಲೆೆ ಮೌರ್ಯ ವೃತ್ತ ಮತ್ತು ಸುಜಾತಾ ಬಳಿ ಐದಾರು ಗೂಡ್‌ ವಾಹನ ಚಾಲಕರಿಗೆ ಥಳಿಸಲಾಗಿದೆ.
  • ಸಂಗೋಳ್ಳಿ ರಾಯಣ್ಣ ಮೇಲು ಸೇತುವೆ ಮೇಲೆ ರ್ಯಾಪಿಡೋ ಚಾಲಕನ ಮೇಲೆ ಹತ್ತಕ್ಕೂ ಹೆಚ್ಚು ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದಾರೆ.
  • ಮೌರ್ಯ ಸರ್ಕಲ್ ಬಳಿ ಬಾಡಿಗೆ ಹೋಗುತ್ತಿದ್ದ ಕಾರಿನ ಕೀ ಕಿತ್ತುಕೊಂಡು ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ.

ಬಂದ್ ಹಿನ್ನೆಲೆ ಅಹಿತಕರ ಘಟನೆ ಸಂಬಂಧ 12 ಮಂದಿ ಬಂಧನ

  • ಕೇಂದ್ರ ಮತ್ತು ಆಗ್ನೇಯ ವಿಭಾಗದಿಂದ ತಲಾ ಒಂದು ಪ್ರಕರಣಗಳು ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ.
  • ಉತ್ತರ ವಿಭಾಗದಲ್ಲಿ 2 ಕೇಸ್ ದಾಖಲಾಗಿದ್ದು, 6 ಮಂದಿ ಬಂಧಿಸಲಾಗಿದೆ.
  • ಈಶಾನ್ಯ ವಿಭಾಗದಲ್ಲಿ 2 ಪ್ರಕರಣ ದಾಖಲಿಸಿ 3 ಮಂದಿ ಬಂಧಿಸಲಾಗಿದೆ.
  • ಪಶ್ಚಿಮ ವಿಭಾಗದಲ್ಲಿ 7 ಕೇಸ್ ದಾಖಲಿಸಿಕೊಂಡು ಆರೋಪಿಗಳ ಶೋಧ ಕಾರ್ಯ ಮುಂದುವರಿದಿದೆ.

ಸಂಚಾರ ದಟ್ಟಣೆ

ಪ್ರತಿಭಟನೆ ಹಿನ್ನೆೆಲೆಯಲ್ಲಿ ನಗರದಲ್ಲಿ ಕೆಲವೆಡೆ ಸಂಚಾರ ದಟ್ಟಣೆ ಉಂಟಾಗಿತ್ತು. ಮೆಜೆಸ್ಟಿಕ್, ಮೇಖ್ರಿ ವೃತ್ತ, ಹೆಬ್ಬಾಳ, ಇಂದಿರಾನಗರ, ಸಂಗೋಳ್ಳಿ ರಾಯಣ್ಣ ಮೇಲು ಸೇತುವೆ ಸೇರಿ ಕೆಲ ಪ್ರಮುಖ ಪ್ರದೇಶಗಳಲ್ಲಿ ಪ್ರತಿಭಟನಾಕಾರರು ರಸ್ತೆೆಗಳಿದು ಹೋರಾಟ ನಡೆಸಿದ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿತ್ತು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್