ಬೆಳಗಾವಿ ತಾಲೂಕಿನ 28 ಗ್ರಾಮಗಳ ರೈತರಿಗೆ BUDA ನೋಟಿಸ್: ರೈತರಿಗೆ ಭೂಮಿ ಕಳೆದುಕೊಳ್ಳುವ ಭೀತಿ
ಕಣಬರಗಿ ಈಗಾಗಲೇ ಬುಡಾ ಯೋಜನೆ ವ್ಯಾಪ್ತಿಗೆ ಸೇರ್ಪಡೆ ಆಗಿದೆ. ಪರಿಹಾರ ಸಂಬಂಧ ಹೈಕೋರ್ಟ್ನಲ್ಲಿ ಕೇಸ್ ಇರುವುದರಿಂದ ರೈತರು ಹೈರಾಣಗೊಂಡಿದ್ದಾರೆ. ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಕ್ಷೇತ್ರದ ಕಲಕಾಂಬ, ಮುಚ್ಚಂಡಿ, ಕಡೊಲಿ ಗ್ರಾಮಗಳು ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದ ಸಾಂಬ್ರಾ, ಮುತಗಾ, ಬಾಳೇಕುಂದ್ರಿ, ಶಿಂಧೋಳಿ, ಕೊಂಡಸಕೊಪ್ಪ ಗ್ರಾಮಗಳು ಸೇರಿವೆ.
ಬೆಳಗಾವಿ: ಜಿಲ್ಲಾ ವ್ಯಾಪ್ತಿಯಲ್ಲಿರುವ ಬರುವ 28 ಗ್ರಾಮಗಳನ್ನು ಬೆಳಗಾವಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ (Belagavi BUDA Notice) ಸೇರ್ಪಡೆ ಮಾಡಲಾಗಿದೆ. ಹಾಗಾಗಿ ಬೆಳಗಾವಿ ತಾಲೂಕಿನ 28 ಗ್ರಾಮಗಳ ರೈತರಿಗೆ ಬುಡಾದಿಂದ ನೋಟಿಸ್ ಜಾರಿಯಾಗಿದೆ. ಇದರಿಂದಾಗಿ ಹೊಸ ಬಡಾವಣೆ, ಹೊಸ ಕೈಗಾರಿಕೆಗಳಿಗಾಗಿ ರೈತರು ಭೂಮಿ (Agriculture Land) ಕಳೆದುಕೊಳ್ಳುವ ಭೀತಿ ಎದುರಾಗಿದೆ. ಕಲಕಾಂಬ, ಮುಚ್ಚಂಡಿ, ಕಡೊಲಿ ಗ್ರಾಮದ ರೈತರಿಗೆ (Farmers) ನೋಟಿಸ್ ಜಾರಿ ಮಾಡಲಾಗಿದೆ.
ಕಣಬರಗಿ ಈಗಾಗಲೇ ಬುಡಾ ಯೋಜನೆ ವ್ಯಾಪ್ತಿಗೆ ಸೇರ್ಪಡೆ ಆಗಿದೆ. ಪರಿಹಾರ ಸಂಬಂಧ ರೈತರು ಹಾಗೂ ಬುಡಾ ನಡುವೆ ಸಂಘರ್ಷ ನಡೆಯುತ್ತಿದೆ. ಹೈಕೋರ್ಟ್ನಲ್ಲಿ ಕೇಸ್ ಇರುವುದರಿಂದ ರೈತರು ಹೈರಾಣಗೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಕ್ಷೇತ್ರದ ಕಲಕಾಂಬ, ಮುಚ್ಚಂಡಿ, ಕಡೊಲಿ ಗ್ರಾಮಗಳು ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದ ಸಾಂಬ್ರಾ, ಮುತಗಾ, ಬಾಳೇಕುಂದ್ರಿ, ಶಿಂಧೋಳಿ, ಕೊಂಡಸಕೊಪ್ಪ ಗ್ರಾಮಗಳು ಸೇರಿವೆ.
Also read: BUDA Scam: ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ಅಕ್ರಮ; ಸರ್ಕಾರಕ್ಕೆ ಕೋಟ್ಯಂತರ ನಷ್ಟ
ದಾಖಲಾರ್ಹ ಸಂಗತಿಯೆಂದರೆ ಕೃಷಿ ಭೂಮಿಯನ್ನು ಕೃಷಿಯೇತರ ಬಳಕೆಗೆ ಅನುಮತಿ ಕಡ್ಡಾಯವಾಗಿದೆ. ಗ್ರಾಮದ 250 ಮೀಟರ್ ವಿಸ್ತೀರ್ಣ ಹೊರತುಪಡಿಸಿ ಉಳಿದ ಭೂಮಿ ಏನೇ ಮಾಡಿದರೂ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಇದೇ ಹಾದಿಯಲ್ಲಿ ಈಗ ಬರೋಬ್ಬರಿ 28 ಗ್ರಾಮಗಳಲ್ಲಿ ರೈತರು ಭೂಮಿ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಕೂಡಲೇ ನೋಟಿಸ್ ವಾಪಸ್ ಪಡೆಯುವಂತೆ ರೈತರಿಂದ ಎಚ್ಚರಿಕೆ ಹೊರಬಿದ್ದಿದೆ. ಇಲ್ಲದಿದ್ರೆ ಬುಡಾ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.
ಬೆಳಗಾವಿ ಜಿಲ್ಲಾ ವರದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ