Phone In Program: ಬೆಳಗಾವಿಯಲ್ಲಿ 13ನೇ ಫೋನ್ ಇನ್ ಕಾರ್ಯಕ್ರಮ, ಒಂದು ಕರೆ ಮೂಲಕ ಸಮಸ್ಯೆ ಪರಿಹಾರ

| Updated By: ಆಯೇಷಾ ಬಾನು

Updated on: Jun 09, 2023 | 3:34 PM

ಶನಿವಾರ ನಡೆಯಲಿರುವ 13ನೇ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ತಂಡ, ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ನಡೆಯುತ್ತಿದೆ.

Phone In Program: ಬೆಳಗಾವಿಯಲ್ಲಿ 13ನೇ ಫೋನ್ ಇನ್ ಕಾರ್ಯಕ್ರಮ, ಒಂದು ಕರೆ ಮೂಲಕ ಸಮಸ್ಯೆ ಪರಿಹಾರ
ಬೆಳಗಾವಿಯಲ್ಲಿ 13ನೇ ಫೋನ್ ಇನ್ ಕಾರ್ಯಕ್ರಮ
Follow us on

ಬೆಳಗಾವಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ(Dr sanjeeva patil) ನೇತೃತ್ವದಲ್ಲಿ ನಡೆಯುತ್ತಿರುವ ಫೋನ್ ಇನ್ ಕಾರ್ಯಕ್ರಮ(Phone In Program) ಜಿಲ್ಲೆಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ ಜನಸ್ನೇಹಿ ಆಡಳಿತಕ್ಕೆ ಹೆಸರುವಾಸಿಯಾಗಿದೆ. ನಾಳೆ ನಡೆಯಲಿರುಗ 13ನೇ ಫೋನ್ ಇನ್ ಕಾರ್ಯಕ್ರಮ ಇತಿಹಾಸ ಬರೆಯಲಿದೆ. ಕರೆ ಸ್ವೀಕರಿಸಿ ಆ ಕ್ಷಣವೇ ಸಮಸ್ಯೆ ಬಗೆಹರಿಸಲಾಗುತ್ತೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಡೆಸುತ್ತಿರುವ ಫೋನ್ ಇನ್ ಕಾರ್ಯಕ್ರಮ ಯಶಸ್ವಿಯಾಗಿದೆ. ಅಲ್ಲದೆ ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆ ಮಾಡುತ್ತಿರುವ ಈ ಫೋನ್ ಇನ್ ಕಾರ್ಯಕ್ರಮದಿಂದ ಜಿಲ್ಲೆಯ ಸಾಕಷ್ಟು ಸಮಸ್ಯೆ ಒಂದು‌ ಫೋನ್ ಕರೆಯಿಂದ ಬಗೆ ಹರಿದಿದೆ. ನಾಳೆ ನಡೆಯಲಿರುವ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ನಡೆಯುತ್ತಿರುವುದು ಇತಿಹಾಸ ಸೃಷ್ಟಿಸಲಿದೆ.

ಬೆಳಗಾವಿಯ ಜಿಲ್ಲೆಯಲ್ಲಿ ಅಕ್ರಮ ಸರಾಯಿ, ಮರಳು ಸಾಗಾಟ, ಶಾಲಾ ಆವರಣದಲ್ಲಿ ತಂಬಾಕು, ಮಟ್ಕಾ, ಕೌಂಟುಂಬಿಕ ಸಮಸ್ಯೆ, ಕಳ್ಳತನ ಪ್ರಕರಣ, ಸಂಚಾರ ಸಮಸ್ಯೆಯ ಕುರಿತು ಸಾರ್ವಜನಿಕರು ಎಸ್ಪಿ ಅವರಿಗೆ ಕರೆ ಮಾಡಿ ದೂರಿದ ಹಿನ್ನೆಲೆಯಲ್ಲಿ ತತ್ವರಿತ ರೀತಿಯಲ್ಲಿ ಸ್ಪಂದಿಸಿ ಅದಕ್ಕೆ ಕಡಿವಾಣ ಹಾಕುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಸೈಬರಾಬಾದ್​ನಲ್ಲಿ ಹ್ಯಾಕರ್‌ಗಳ ಹುಚ್ಚುತನ: ಪೊಲೀಸ್ ಠಾಣೆಯ ಫೇಸ್‌ಬುಕ್ ಪೇಜ್ ನಲ್ಲಿ ಅಶ್ಲೀಲ ವಿಡಿಯೋಗಳು ತುಂಬಿತುಳುಕುತ್ತಿವೆ!

ನಾಳೆ ಶನಿವಾರ ನಡೆಯಲಿರುವ 13ನೇ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ತಂಡ, ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ನಡೆಯುತ್ತಿದೆ. ಸಾರ್ವಜನಿಕರು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ 0831 2405226ಗೆ ಸಂಪರ್ಕಿಸಿ ಕರೆ ಮಾಡಬಹುದು.

ಬೆಳಗಾವಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ