ಡಿಜಿಟಲ್ ವ್ಯವಹಾರ ಇರಲಿ ಎಚ್ಚರ: ಪಕ್ಕಾ ಲೆಕ್ಕ ಇಟ್ರೂ ಪೆಟ್ರೋಲ್ ಬಂಕ್​ ಮಾಲೀಕ ಲಾಸ್​ನಲ್ಲೇ ಇದ್ದ! ಆ ಮೇಲೆ ಏನಾಯ್ತು?

ಆರೋಪಿ ತನ್ನ ಖದೀಮತನದಿಂದ ಹಣ ಹಾಕುತ್ತಿದ್ದಂತೆ 1 ಬೈಕ್ ಹಾಗೂ ಮನೆ ಕಟ್ಟಲು ಕೂಡ ಆರಂಭಿಸಿದ್ನಂತೆ! ಇದೀಗ ಆರೋಪಿಯಿಂದ 28 ಲಕ್ಷ ಹಣ ವಸೂಲಿ ಮಾಡಿದ್ದು, ಇನ್ನುಳಿದ ಹಣವನ್ನೂ ರಿಕವರಿ ಮಾಡಿಕೊಡೋದಾಗಿ ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ಹೇಳಿದ್ದಾರೆ.

ಡಿಜಿಟಲ್ ವ್ಯವಹಾರ ಇರಲಿ ಎಚ್ಚರ: ಪಕ್ಕಾ ಲೆಕ್ಕ ಇಟ್ರೂ ಪೆಟ್ರೋಲ್ ಬಂಕ್​ ಮಾಲೀಕ ಲಾಸ್​ನಲ್ಲೇ ಇದ್ದ! ಆ ಮೇಲೆ ಏನಾಯ್ತು?
ಡಿಜಿಟಲ್ ವ್ಯವಹಾರ ಇರಲಿ ಎಚ್ಚರ: ಪಕ್ಕಾ ಲೆಕ್ಕ ಇಟ್ರೂ ಪೆಟ್ರೋಲ್ ಬಂಕ್​ ಮಾಲೀಕ ಲಾಸ್​ನಲ್ಲೇ ಇದ್ದ! ಆ ಮೇಲೆ ಏನಾಯ್ತು?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 25, 2022 | 6:45 AM

ದಿನೇ ದಿನೇ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿತ್ತು, ನಿತ್ಯ ಲಕ್ಷಾಂತರ ರೂಪಾಯಿ ಮಾಲೀಕನ ಅಕೌಂಟ್​ಗೆ ಜಮೆ ಕೂಡ ಆಗ್ತಿತ್ತು. ಇತ್ತ ಲೆಕ್ಕಕ್ಕೆ ಲೆಕ್ಕವೂ ಇರ್ತಿತ್ತು. ಆದ್ರೆ ಪಂಪ್​ನ ಮಾಲೀಕ ಮಾತ್ರ ಲಾಸ್ ಅನುಭವಿಸುತ್ತಿದ್ದ. ಬಳಿಕ ಖಾಕಿ ಮೊರೆ ಹೋದಾಗ ಎಲ್ಲರೂ ದಂಗಾಗುವ ವಿಷಯ ಗೊತ್ತಾಗಿತ್ತು. ಒಳ್ಳೆ ಬ್ಯುಸಿನೆಸ್ ಇತ್ತು.. ಫಟಾಫಟ್ ಅಂತ ಅಕೌಂಟ್​ಗೆ ಕಾಸು ಬರ್ತಿತ್ತು (belagavi). ಆದ್ರೆ ಪಕ್ಕಾ ಲೆಕ್ಕ ಇಟ್ರೂ ಮಾಲೀಕ ಮಾತ್ರ ಲಾಸ್​ನಲ್ಲೇ ಇದ್ದ. ಏನ್ ಮಾಡೋದಪ್ಪಾ ಅಂತಾ ತಲೆ ಕೆಡಿಸ್ಕೊಂಡು ಪೊಲೀಸ್ರ ಮೊರೆ ಹೋಗಿದ್ದ.. ಫೀಲ್ಡ್ ಇಳಿದ ಖಾಕಿ ಟೀಂ, ಕಳ್ಳ ಯಾರು ಆತ ಮಾಡ್ತಿದ್ದಿದ್ದೇನು ಅಂತ ಕೇಳಿ ಶಾಕ್ ಆಗಿದ್ರು (Phonepe fraud).

ಸಿಬ್ಬಂದಿಯಿಂದ್ಲೇ ಫೋನ್​ ಪೇ ಮೂಲಕ ಮೋಸ..! ಒಂದೂವರೆ ವರ್ಷದಲ್ಲಿ ₹ 44 ಲಕ್ಷ ದೋಖಾ..! ಈ ಖತರ್ನಾಕ್ ಖದೀಮನ ಹೆಸ್ರು ರೋಹಿತ್ ರಾಜು. ಬೆಳಗಾವಿ ನಗರದ ನಿವಾಸಿ. ಈತ ಬೆಳಗಾವಿಯ ಮಚ್ಚೆಯಲ್ಲಿರುವ ಸೋಮನಾಥ ಪೆಟ್ರೋಲ್ ಪಂಪ್ನಲ್ಲಿ ಕ್ಲರ್ಕ್ ಕಂ ಮ್ಯಾನೇಜರ್ ಆಗಿ 2 ವರ್ಷದಿಂದ ಕೆಲಸ ಮಾಡ್ಕೊಂಡಿದ್ದ. ಆದ್ರೆ ಬದುಕು ಕಟ್ಟಿಕೊಟ್ಟಿದ್ದ ಮಾಲೀಕನಿಗೇ ಮೋಸ ಮಾಡಿ ಉಂಡ ಮನೆಗೆ ಎರಡು ಬಗೆದಿದ್ದಾನೆ.

ಸೋಮನಾಥ ಪೆಟ್ರೋಲ್ ಬಂಕ್ ಮಾಲೀಕ ಸುನೀಲ್ ಶಿಂಧೆ 5 ವರ್ಷದ ಹಿಂದೆ ಬಂಕ್ ಪ್ರಾರಂಭಿಸಿದ್ರು. ಪೆಟ್ರೋಲ್ ರೇಟ್ ಜಾಸ್ತಿಯಾಗಿತ್ತು. ಗ್ರಾಹಕರೂ ಬರ್ತಿದ್ರು. ಆದ್ರೂ ಕೂಡ ಲಾಸ್​ನಲ್ಲಿದ್ದ ಸುನೀಲ್ ಯಾಕೆ ಹೀಗಾಗ್ತಿದೆ ಅಂತ ಬೇಸತ್ತು ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ರು. ಆಗಲೇ ನೋಡಿ ಅಸಲಿ ಕಹಾನಿ ಬಯಲಾಗಿದ್ದು.

ಕೆಲ ಗ್ರಾಹಕರು ಡಿಜಿಟಲ್ ಪೇಮೆಂಟ್ ಮಾಡ್ತಿದ್ರು. ಕೆಲವೊಮ್ಮೆ ನೂರು ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು ಮಿಸ್ ಆಗಿ ಸಾವಿರ ರೂಪಾಯಿ ಫೋನ್ ಪೇ ಮಾಡ್ತಾರೆ. ಆಗ ಉಪಯೋಗವಾಗ್ಲಿ ಅಂತ ವ್ಯಾಪಾರಸ್ಥರಿಗೆ ಮಾತ್ರ ಫೋನ್ ಪೇ ಆ್ಯಪ್​ನವರು ರೀಫಂಡ್ ಆ್ಯಪ್ಷನ್ ಕೊಟ್ಟಿರ್ತಾರೆ. ಅದನ್ನೇ ಬಳಸಿಕೊಂಡು ರೋಹಿತ್ ಮೋಸ ಮಾಡ್ತಿದ್ದ! ನಿತ್ಯವೂ ತನ್ನ ಖಾತೆಯಿಂದ 8-10 ಸಾವಿರ ಫೋನ್ ಪೇ ಮಾಡಿ ಲೆಕ್ಕ ಕೊಡ್ತಿದ್ದ. ಬಳಿಕ ರಾತ್ರಿ ಮನೆಗೆ ವಾಪಸ್ ಆಗೋವಾಗ ಹಣ ರೀಫಂಡ್ ಮಾಡ್ಕೋತಿದ್ದ.

ಇದೇ ರೀತಿ ಒಂದೂವರೆ ವರ್ಷದಲ್ಲಿ 44 ಲಕ್ಷ ಹಣವನ್ನು ದೋಚಿದ್ದಾನೆ. ಕಂಗಾಲಾದ ಮಾಲೀಕ ಬೆಳಗಾವಿಯ ಸಿಇಎನ್ ಪೊಲೀಸ್ ಠಾಣೆ ಮೇಟ್ಟಿಲೇರಿದ್ರು. ಈ ವೇಳೆ ಬ್ಯಾಂಕ್​ನ ವಹಿವಾಟು ನೋಡಿದಾಗ ಒಂದು ನಂಬರ್​ಗೆ ನಿತ್ಯ ಹಣ ರಿಫಂಡ್ ಆಗಿರುವುದು ಗೊತ್ತಾಗಿದೆ.

ವಿಷ್ಯ ಗೊತ್ತಾಗ್ತಿದ್ದಂತೆ ರೋಹಿತ್​ನನ್ನ ಬಂಧಿಸಿ ವಿಚಾರಿಸಿದಾಗ ತಾನೇ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಹಣ ಬರ್ತಿದ್ದಂತೆ, 1 ಬೈಕ್ ಹಾಗೂ ಮನೆ ಕಟ್ಟಲು ಕೂಡ ಆರಂಭಿಸಿದ್ನಂತೆ! ಇದೀಗ ಆರೋಪಿಯಿಂದ 28 ಲಕ್ಷ ಹಣ ವಸೂಲಿ ಮಾಡಿದ್ದು, ಇನ್ನುಳಿದ ಹಣವನ್ನೂ ರಿಕವರಿ ಮಾಡಿಕೊಡೋದಾಗಿ ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ಹೇಳಿದ್ದಾರೆ. ಒಟ್ನಲ್ಲಿ ನಂಬಿ ಕೆಲಸ ಕೊಟ್ಟ ಮಾಲೀಕನಿಗೆ ಸಿಬ್ಬಂದಿಯೇ ಮೋಸ ಮಾಡಿದ್ದಾನೆ. ಇನ್ನಾದ್ರೂ ಡಿಜಿಟಲ್ ವ್ಯವಹಾರ ನಡೆಸುವವರು ಎಚ್ಚರವಾಗಿರಬೇಕಾಗಿದೆ. – ಸಹದೇವ ಮಾನೆ, ಟಿವಿ 9, ಬೆಳಗಾವಿ

ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ