Belagavi News: ಗ್ರಾ.ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಹೈಡ್ರಾಮ; ಗಲಾಟೆ ಮಧ್ಯೆಯೂ ಬಿಜೆಪಿಗೆ ಒಲಿದ ಪಟ್ಟ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಹೈ ಡ್ರಾಮವೇ ನಡೆದು ಹೋಗಿದ್ದು, ಎರಡು ಬಣಗಳ ನಡುವೆ ಗಲಾಟೆಯಾಗಿದೆ.

Belagavi News: ಗ್ರಾ.ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಹೈಡ್ರಾಮ; ಗಲಾಟೆ ಮಧ್ಯೆಯೂ ಬಿಜೆಪಿಗೆ ಒಲಿದ ಪಟ್ಟ
ಗ್ರಾಮ ಪಂಚಾಯತಿ ಚುನಾವಣೆ ಗಲಾಟೆ
Follow us
ಮಹಾಂತೇಶ ಕುರಬೇಟ, ಟಿವಿ9 ಚಿಕ್ಕೋಡಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 01, 2023 | 11:51 AM

ಬೆಳಗಾವಿ, ಆ.1: ಜಿಲ್ಲೆಯ ರಾಯಬಾಗ(Raybag)ತಾಲೂಕಿನ ನಿಡಗುಂದಿ ಗ್ರಾಮ ಪಂಚಾಯತಿ(Nidagundi Grama Panchayt) ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಹೈ ಡ್ರಾಮವೇ ನಡೆದು ಹೋಗಿದೆ. ಹೌದು ರಾಯಬಾಗ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಪುತ್ರ ಅರುಣ್ ಐಹೊಳೆ ಹಾಗೂ ಅರುಣ್ ಟಕ್ಕನ್ನವರ್ ಬಣದ ನಡುವೆ ವಾಗ್ವಾದ ನಡೆದಿದೆ. ಅರುಣ್ ಕೆಲ ಸದಸ್ಯರನ್ನು ಕರೆತರುತ್ತಿದ್ದ ಕಾರನ್ನು ತಡೆಯಲು ಕೆಲವರು ಯತ್ನಿಸಿದ್ದು, ಉದ್ರಿಕ್ತರನ್ನ ತಡೆಯಲು ರಾಯಬಾಗ ಸಿಪಿಐ ಹೆಚ್.ಡಿ.ಮುಲ್ಲಾ ಹರಸಾಹಸ ಪಟ್ಟಿದ್ದಾರೆ. ಈ ನಡುವೆ ಕೊನೆಗೂ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸುಶೀಲಾ ಐಹೊಳೆ ಎಂಬುವವರು ಆಯ್ಕೆಯಾದರೆ, ಇತ್ತ ಉಪಾಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ರೇಷ್ಮಾ ಮುಲ್ಲಾ ಆಯ್ಕೆಯಾಗಿದ್ದಾರೆ.

ಇನ್ನು ಜುಲೈ 20 ರಂದು ಹಾಸನ ಜಿಲ್ಲೆಯ ಹಳೇಬೀಡು ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ವಿಜಯೋತ್ಸವದ ವೇಳೆ ಬಿಜೆಪಿ ಹಾಗೂ ಜೆಡಿಎಸ್​ ಬೆಂಬಲಿತರ ನಡುವೆ ಗಲಾಟೆ ನಡೆದಿತ್ತು. ಈ ಸಂದರ್ಭದಲ್ಲಿ ಓರ್ವ ಸದಸ್ಯನಿಗೆ ಗಾಯಗಳಾಗಿದ್ದು, ಸ್ಥಳದಲ್ಲೇ ಕುಸಿದು ಬಿದ್ದಿದ್ದ. 20 ಸದಸ್ಯರ ಸಂಖ್ಯಾಬಲ ಇರುವ ಈ ಪಂಚಾಯತಿಯಲ್ಲಿ ಅಧ್ಯಕ್ಷರ ಹೆಸರು ಘೋಷಣೆ ಬಳಿಕ ಸದಸ್ಯರ ನಡುವೆ ಗಲಾಟೆ ಏರ್ಪಟ್ಟಿತ್ತು. ಬಳಿಕ ಹಳೇಬೀಡು ಪೊಲೀಸ್​ ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿತ್ತು.

ಇದನ್ನೂ ಓದಿ:ಧಾರವಾಡ: ಗ್ರಾಮ ಪಂಚಾಯತಿ ಚುನಾವಣೆ ಮುಗಿಯಿತು.. ಇನ್ನು ಅಧ್ಯಕ್ಷ ಗಾದಿಗೆ ಸರ್ಕಸ್!

ರಸ್ತೆ ಸರಿಪಡಿಸುವಂತೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಪ್ರತಿಭಟನೆ

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಗದ್ಯಾಳ-ಅಡಿಹುಡಿ ಗ್ರಾಮದ ರಸ್ತೆ ದುರಸ್ತಿಗೆ ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಹೌದು, ಮಳೆಯಾದರೆ ರಸ್ತೆಗಳು ಹಳ್ಳದಂತಾಗುವ ಸ್ಥಿತಿ ಇದ್ದು, ಈ ಹಿನ್ನಲೆ ರಸ್ತೆಗೆ ಮುಳ್ಳು ಹಚ್ಚಿ, ರಸ್ತೆ ತಡೆಯಲಾಗಿದೆ. ವಿಷಯ ತಿಳಿದು ಸಾವಳಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಹಾಗೂ ಸ್ಥಳೀಯರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ