ಸೋನಿಯಾ ಗಾಂಧಿಯನ್ನು ಹೆದರಿಸಿ ಡಿಕೆ ಶಿವಕುಮಾರ್​ ಕೆಪಿಸಿಸಿ ಅಧ್ಯಕ್ಷನಾಗಿದ್ದಾನೆ; ರಮೇಶ್ ಜಾರಕಿಹೊಳಿ ಆರೋಪ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 31, 2023 | 4:16 PM

ಅವನ ವಿರುದ್ಧ ಸಾಕ್ಷಿಗಳಿದ್ದು, ತನಿಖೆಯನ್ನು ಸಿಬಿಐಗೆ ಕೊಟ್ಟರೆ ಒದಗಿಸುತ್ತೇನೆ‌. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬಗ್ಗೆ ಡಿಕೆ ಶಿವಕುಮಾರ್​ ಮಾತನಾಡಿರುವ ಆಡಿಯೋ ನನ್ನ ಬಳಿ ಇದೆ ಎಂದು ಬಿಜೆಪಿ ಶಾಸಕ ರಮೇಶ್​ ಜಾರಕಿಹೊಳಿ ಅವರು ಡಿಕೆ ಶಿವಕುಮಾರ್​ ವಿರುದ್ದ ಹೊಸ ಬಾಂಬ್ ಸಿಡಿಸಿದ್ದಾರೆ.

ಸೋನಿಯಾ ಗಾಂಧಿಯನ್ನು ಹೆದರಿಸಿ ಡಿಕೆ ಶಿವಕುಮಾರ್​ ಕೆಪಿಸಿಸಿ ಅಧ್ಯಕ್ಷನಾಗಿದ್ದಾನೆ; ರಮೇಶ್ ಜಾರಕಿಹೊಳಿ ಆರೋಪ
ರಮೇಶ್​ ಜಾರಕಿಹೊಳಿ
Follow us on

ಬೆಳಗಾವಿ, ಅ.31: ಸೋನಿಯಾ ಗಾಂಧಿಯನ್ನು ಹೆದರಿಸಿ ಡಿಕೆ ಶಿವಕುಮಾರ್(DK Shivakumar)​ ಕೆಪಿಸಿಸಿ ಅಧ್ಯಕ್ಷನಾಗಿದ್ದಾನೆ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ(Ramesh Jarakiholi) ಆರೋಪಿಸಿದ್ದಾರೆ. ಬೆಳಗಾವಿ(Belagavi)ಯಲ್ಲಿ ಮಾತನಾಡಿದ ಅವರು ‘ಅಧ್ಯಕ್ಷ ಸ್ಥಾನ ನೀಡದಿದ್ದರೆ ಇಡಿಗೆ ನಿಮ್ಮ ಹೆಸರು ಹೇಳುತ್ತೇನೆಂದು ತಿಹಾರ್​ ಜೈಲಿನಲ್ಲಿ ಸೋನಿಯಾಗೆ ಹೆದರಿಸಿ ಪಕ್ಷದ ಅಧ್ಯಕ್ಷ ಆಗಿದ್ದಾನೆ ಎಂದು ಡಿಸಿಎಂ ವಿರುದ್ಧ ಏಕವಚನದಲ್ಲಿಯೇ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.

ಡಿಕೆಶಿ, ಸಿಡಿ ಮಾಡಿ ಬ್ಲ್ಯಾಕ್ ಮೇಲ್ ಮಾಡೋದು ಮಾಡ್ತಾನೆ

ಹೌದು, ಡಿಕೆ ಶಿವಕುಮಾರ್​ ಬಹಳ ವೀಕ್ ಮನುಷ್ಯ, ಸಿಡಿ ಮಾಡಿ ಬ್ಲ್ಯಾಕ್ ಮೇಲ್ ಮಾಡುವುದು ಮಾಡುತ್ತಾನೆ. ಇಷ್ಟು ದಿನ ನಾನು ಸುಮ್ಮನಿದ್ದೆ, ಈಗ ಸೀರಿಯಸ್‌ ತೆಗೆದುಕೊಂಡಿದ್ದೇನೆ. ಸರ್ಕಾರ ನಮ್ಮ ಅರ್ಜಿ ನೆಗ್ಲೆಟ್ ಮಾಡಿದ್ರೆ, ಹೈಕೋರ್ಟ್, ಸುಪ್ರೀಂ ಕೋರ್ಟ್ ಹೋಗುತ್ತೇನೆ ಎಂದರು. ಇದೇ ವೇಳೆ ‘ಆಪರೇಷನ್ ಕಮಲ ಮಾಡುತ್ತಿಲ್ಲ, ಮಾಡುವುದಿಲ್ಲ. ಜನರನ್ನ ನಾವು ಕರೆದುಕೊಂಡು ಬರಲು ಹೇಗೆ ಸಾಧ್ಯ. ರಮೇಶ್ ಜಾರಕಿಹೊಳಿ ಆಪರೇಷನ್ ಕಮಲ ಮಾಡುತ್ತಿಲ್ಲ ಎಂದರು.

ಇದನ್ನೂ ಓದಿ:ಚುನಾವಣಾ ಪೂರ್ವದಲ್ಲಿ ಡಿಕೆ ಶಿವಕುಮಾರ್ ಕಾಲು ಹಿಡಿಯಲು ರಮೇಶ್ ಜಾರಕಿಹೊಳಿ ಬಂದಿದ್ದರು; ರವಿ ಗಣಿಗ

ಟೆರರಿಸ್ಟ್ ಲಿಂಕ್ ಮಾಡಿ ನನ್ನಾ ಅರೆಸ್ಟ್ ಮಾಡಿಸುವ ಹಂತಕ್ಕೆ ಹೋಗ್ತಾನೆ

ಅಸ್ಸಾಂ, ಗುಹಾವಟಿ ಮೂಲಕ ನನಗೆ ಕರೆ ಬರುತ್ತಿವೆ. ಟೆರರಿಸ್ಟ್ ಲಿಂಕ್ ಮಾಡಿ ನನ್ನಾ ಅರೆಸ್ಟ್ ಮಾಡಿಸುವ ಹಂತಕ್ಕೆ ಹೋಗುತ್ತಾನೆ. ಅದಕ್ಕೆ ನನ್ನ ಪೋನ್​ನಲ್ಲಿ ಇಂಟರ್ನೆಟ್ ಇಟ್ಟಿಲ್ಲ. ದುಬೈ, ಯುಎಇ ಕಡೆಯಿಂದಲೂ ಪೋನ್ ಬರುತ್ತಿವೆ. ನನಗೆ ಬಹಳ ಟಾರ್ಚರ್ ಕೊಟ್ಟಿದ್ದಾರೆ, ಬೇರೆ ಯಾರಾದರೂ ಆಗಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಅವನ ವಿರುದ್ಧ ಸಾಕ್ಷಿಗಳಿದ್ದು, ತನಿಖೆಯನ್ನು ಸಿಬಿಐಗೆ ಕೊಟ್ಟರೆ ಒದಗಿಸುತ್ತೇನೆ‌. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬಗ್ಗೆ ಡಿಕೆ ಶಿವಕುಮಾರ್​ ಮಾತನಾಡಿರುವ ಆಡಿಯೋ ನನ್ನ ಬಳಿ ಇದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಸಿಡಿ ಕೇಸ್​ನಲ್ಲಿ ಡಿಕೆ ಕಾರು ಚಾಲಕನನ್ನು ವಿಚಾರಣೆಗೆ ಒಳಪಡಿಸಿಲ್ಲ

ಹೌದು, ಸಿಡಿ ಕೇಸ್​ನಲ್ಲಿ ಕಾರು ಚಾಲಕ ಪರಶಿವಮೂರ್ತಿಯನ್ನು ಏಕೆ ವಿಚಾರಣೆಗೆ ಒಳಪಡಿಸಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಯಾಕೆ ವಿಚಾರಣೆ ಮಾಡಲಿಲ್ಲ. ನನ್ನ ಮಾತಿನಿಂದ ಭಾರತೀಯ ಜನತಾ ಪಕ್ಷಕ್ಕೆ ಮುಜುಗರ ಆಗೋದು ಬೇಡ, ಪರೋಕ್ಷವಾಗಿ ಬಿಜೆಪಿ ನಾಯಕರು ಸಿಡಿ ಕೇಸ್​ನಲ್ಲಿ ಇದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು. ನಾಲ್ಕು ವರ್ಷಗಳಿಂದ ಅಪಮಾನ ಸಹಿಸಿಕೊಂಡಿದ್ದೇನೆ. ರಾಜಕಾರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್​ ಅಂತ್ಯವಾದ್ರೆ ಒಳ್ಳೆಯದು, ಡಿ.ಕೆ.ಶಿವಕುಮಾರ್ ಸಿಡಿ ಫ್ಯಾಕ್ಟರಿ ಬಂದ್ ಆಗಬೇಕಂದ್ರೆ CBIಗೆ ವಹಿಸಬೇಕು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:10 pm, Tue, 31 October 23