Belagavi News: ಖಾನಾಪುರದಲ್ಲಿ ಪ್ರಾರ್ಥನೆ ವೇಳೆ ಕುಸಿದ ಶಾಲಾ ಕೊಠಡಿಯ ಮೇಲ್ಛಾವಣಿ, ಗೋಡೆ
ಪಶ್ವಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರ ಪರಿಣಾಮ ಬೆಳಗಾವಿ ಮೇಲೂ ಬೀರುತ್ತಿದೆ. ಖಾನಾಪುರ ತಾಲೂಕಿನ ಬ್ಯಾಡರಟ್ಟಿಯಲ್ಲಿ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡುತ್ತಿದ್ದಾಗ ಶಾಲೆಯ ಕೊಠಡಿ ಮತ್ತು ಮೇಲ್ಛಾವಣಿ ಕುಸಿತಗೊಂಡ ಘಟನೆ ನಡೆದಿದೆ.
ಬೆಳಗಾವಿ, ಜುಲೈ 28: ಪಶ್ವಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಮುಂದುವರಿದಿದ್ದು, ಇದರ ಪರಿಣಾಮ ಬೆಳಗಾವಿ (Belagavi) ಜಿಲ್ಲೆಯ ಮೇಲೂ ಬೀರುತ್ತಿದೆ. ನಿರಂತರ ಮಳೆಗೆ ಮನೆಗಳು ಕುಸಿಯುತ್ತಿವೆ. ಇದೀಗ, ಪ್ರಾರ್ಥನೆ ವೇಳೆ ಶಾಲಾ ಕೊಠಡಿಯ ಮೇಲ್ಛಾವಣಿ ಮತ್ತು ಗೋಡೆ ಕುಸಿದ ಘಟನೆ ಖಾನಾಪುರ ತಾಲೂಕಿನ ಬ್ಯಾಡರಟ್ಟಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯಲ್ಲಿ ಇಂದು ಎಂದಿನಂತೆ ಶಾಲೆಗಳು ಆರಂಭವಾಗಿದೆ. ಅದರಂತೆ, ಬ್ಯಾಡರಟ್ಟಿಯಲ್ಲಿನ ಶಾಲೆಯಲ್ಲಿ ವಿದ್ಯಾರ್ಥಿಗಳು ಹೊರಭಾಗದಲ್ಲಿ ಪ್ರಾರ್ಥನೆ ಮಾಡುತ್ತಿದ್ದರು. ಈ ವೇಳೆ ತರಗತಿಯೊಂದರ ಮೇಲ್ಛಾವಣಿ ಮತ್ತು ಗೋಡೆ ಕುಸಿತಗೊಂಡಿದೆ. ಅದೃಷ್ಟವಶಾತ್ 20 ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: Chikkodi Hospital Leaking: ಬೆಳಗ್ಗೆಯಿಂದ ಭಾರೀ ಮಳೆ, ಸೋರುತ್ತಿದೆ ನೋಡಿ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ!
ಶಾಲಾ ಕೊಠಡಿಗಳು ಶಿಥಿಲಗೊಂಡಿರುವ ಹಿನ್ನೆಲೆ ಹೊಸ ಕಟ್ಟಡ ನಿರ್ಮಿಸಿ ಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಆದರೆ ಡಿಡಿಪಿಐ ಬಸವರಾಜ ನಾಲತವಾಡ ಅವರು ಈವರೆಗೂ ಮನವಿಗೆ ಸ್ಪಂದಿಸದೆ ಬೇಜವಾಬ್ದಾರಿತನ ತೋರಿದ್ದಾರೆ. ಇಂದು ಗೋಡೆ ಮತ್ತು ಮೇಲ್ಛಾವಣಿ ಕುಸಿತಗೊಂಡಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕಲು ಆರಂಭಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:40 pm, Fri, 28 July 23