Belagavi Crime: ಮೂರೂವರೆ ವರ್ಷದ ಬಾಲಕಿ ಮೇಲೆ ಅತ್ಯಾಚಾರ ಆರೋಪ; ಇಬ್ಬರ ಬಂಧನ

| Updated By: ganapathi bhat

Updated on: Jul 28, 2021 | 10:11 PM

ಘಟನೆ ಬಳಿಕ ಸಂತ್ರಸ್ತ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದೀಗ, ಸಂಬಂಧಿಕರಿಗೆ ಮಾಹಿತಿ ತಿಳಿದು ಆರೋಪಿಗಳಿಗೆ ಧರ್ಮದೇಟು ಕೊಡಲಾಗಿದೆ. ಆರೋಪಿಗಳನ್ನು ಹಿಗ್ಗಾಮುಗ್ಗಾ ಥಳಿಸಿ ಸಂಬಂಧಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ.

Belagavi Crime: ಮೂರೂವರೆ ವರ್ಷದ ಬಾಲಕಿ ಮೇಲೆ ಅತ್ಯಾಚಾರ ಆರೋಪ; ಇಬ್ಬರ ಬಂಧನ
ಸಾಂದರ್ಭಿಕ ಚಿತ್ರ
Follow us on

ಬೆಳಗಾವಿ: ಮೂರೂವರೆ ವರ್ಷದ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ಆರೋಪ ಕೇಳಿಬಂದಿದೆ. ಬೆಳಗಾವಿಯ ಕ್ಯಾಂಪ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದೆ. ಈ ದುಷ್ಕೃತ್ಯಕ್ಕೆ ಸಂಬಂಧಿಸಿ ಮುಂಬೈ ಮೂಲದ ಯುವಕ ಸೇರಿದಂತೆ ಇಬ್ಬರ ಬಂಧನವಾಗಿದೆ. ಒಂದು ವಾರದ ಹಿಂದೆ ಬೆಳಗಾವಿಯಲ್ಲಿ ದುಷ್ಕೃತ್ಯ ನಡೆದಿತ್ತು ಎಂದು ತಿಳಿದುಬಂದಿದೆ. ವಾರದ ಹಿಂದೆ ಸಂಬಂಧಿಕರ ಮನೆಗೆ ಬಂದಿದ್ದ ಯುವಕ, ನೆರೆಮನೆಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪ ಕೇಳಿಬಂದಿದೆ. ಆದರೆ, ಮರ್ಯಾದೆಗೆ ಹೆದರಿ ಮಗು ಪೋಷಕರು ದೂರು ನೀಡಿರಲಿಲ್ಲ ಎಂದು ಹೇಳಲಾಗಿದೆ.

ಘಟನೆ ಬಳಿಕ ಸಂತ್ರಸ್ತ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದೀಗ, ಸಂಬಂಧಿಕರಿಗೆ ಮಾಹಿತಿ ತಿಳಿದು ಆರೋಪಿಗಳಿಗೆ ಧರ್ಮದೇಟು ಕೊಡಲಾಗಿದೆ. ಆರೋಪಿಗಳನ್ನು ಹಿಗ್ಗಾಮುಗ್ಗಾ ಥಳಿಸಿ ಸಂಬಂಧಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೋಕ್ಸೊ ಕಾಯ್ದೆಯಡಿ ಕೇಸ್ ದಾಖಲಿಸಿ ಪ್ರಕರಣದ ತನಿಖೆ ನಡೆಸಲಾಗುವ ಬಗ್ಗೆ ಹೇಳಲಾಗಿದೆ. ಬೆಳಗಾವಿ ಕಮಿಷನರೇಟ್​ ವ್ಯಾಪ್ತಿ ಕ್ಯಾಂಪ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮಧ್ಯೆ, ಕಾಮುಕರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಬೆಳಗಾವಿಯ ಬಾಪಟ್​ಗಟ್ಟಿಯಲ್ಲಿ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದ್ದಾರೆ. ಅಂಗಡಿ ಮುಂಗಟ್ಟು ಬಂದ್ ಮಾಡಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದಾರೆ.

ಪೊಲೀಸ್ ಹೆಡ್ ಕಾನ್​ಸ್ಟೇಬಲ್​ನಿಂದ ಬಾಲಕಿಗೆ ಲೈಂಗಿಕ ಕಿರುಕುಳ
ದೂರು ನೀಡಲು ಬಂದಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಅಡಿಯಲ್ಲಿ ಇಂದು (ಜುಲೈ 28) ಮಂಗಳೂರಿನ ಪೊಲೀಸ್ ಠಾಣೆ ಹೆಡ್​ ಕಾನ್ಸ್​​ಟೇಬಲ್​ ಬಂಧಿಸಲಾಗಿರುವ ಘಟನೆ ನಡೆದಿದೆ. ಮಹಿಳಾ ಠಾಣೆಯಲ್ಲಿ ಪ್ರಕರಣ​ ದಾಖಲಿಸಿಕೊಂಡು, ಪೋಕ್ಸೊ ಕಾಯ್ದೆಯಡಿ ಹೆಡ್​​ಕಾನ್ಸ್​​ಟೇಬಲ್​ ಬಂಧನ ಮಾಡಲಾಗಿದೆ. ಮಂಗಳೂರಿನ ಕಂಕನಾಡಿ ಠಾಣೆ ಹೆಡ್​ ಕಾನ್ಸ್​​ಟೇಬಲ್​ ಸುನಿಲ್ ಎಂಬಾತನನ್ನು ಮಹಿಳಾ ಠಾಣೆಯಲ್ಲಿ ಪ್ರಕರಣ​ ದಾಖಲಿಸಿಕೊಂಡು ಬಂಧಿಸಲಾಗಿದೆ.

ಇದನ್ನೂ ಓದಿ: ಮಂಗಳೂರು: ದೂರು ನೀಡಲು ಬಂದಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ; ಪೊಲೀಸ್ ಹೆಡ್ ಕಾನ್​ಸ್ಟೇಬಲ್ ಬಂಧನ

Crime News: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ; ಆರೋಪಿಗೆ ಗಲ್ಲು ಶಿಕ್ಷೆ

(Sexual Harassment to Girl Child in Belagavi two persons Arrested)

Published On - 9:57 pm, Wed, 28 July 21