AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು: ದೂರು ನೀಡಲು ಬಂದಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ; ಪೊಲೀಸ್ ಹೆಡ್ ಕಾನ್​ಸ್ಟೇಬಲ್ ಬಂಧನ

Mangaluru News: ಒಬ್ಬಳೇ ಮನೆಗೆ ಬಾ ಎಂದು ಕರೆಯುತ್ತಿದ್ದ ಹೆಡ್​ಕಾನ್ಸ್​​ಟೇಬಲ್ ಬಗ್ಗೆ ಬಾಲಕಿ ಪೋಷಕರಿಗೆ ದೂರು ನೀಡಿದ್ದಾಳೆ. ಬಳಿಕ ಈ ಕುರಿತು ಪೊಲೀಸ್​ ಕಮಿಷನರ್​ಗೆ ಕುಟುಂಬಸ್ಥರು ದೂರು ನೀಡಿದ್ದಾರೆ. ಇದೀಗ ಕಾನ್​ಸ್ಟೇಬಲ್ ಬಂಧಿಸಲಾಗಿದೆ.

ಮಂಗಳೂರು: ದೂರು ನೀಡಲು ಬಂದಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ; ಪೊಲೀಸ್ ಹೆಡ್ ಕಾನ್​ಸ್ಟೇಬಲ್ ಬಂಧನ
ಪ್ರಾತಿನಿಧಿಕ ಚಿತ್ರ
TV9 Web
| Updated By: ganapathi bhat|

Updated on:Jul 28, 2021 | 7:37 PM

Share

ಮಂಗಳೂರು: ದೂರು ನೀಡಲು ಬಂದಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಅಡಿಯಲ್ಲಿ ಮಂಗಳೂರಿನ ಪೊಲೀಸ್ ಠಾಣೆ ಹೆಡ್​ ಕಾನ್ಸ್​​ಟೇಬಲ್​ ಬಂಧಿಸಲಾಗಿದೆ. ಮಹಿಳಾ ಠಾಣೆಯಲ್ಲಿ ಪ್ರಕರಣ​ ದಾಖಲಿಸಿಕೊಂಡು, ಪೋಕ್ಸೊ ಕಾಯ್ದೆಯಡಿ ಹೆಡ್​​ಕಾನ್ಸ್​​ಟೇಬಲ್​ ಬಂಧನ ಮಾಡಲಾಗಿದೆ. ಮಂಗಳೂರಿನ ಕಂಕನಾಡಿ ಠಾಣೆ ಹೆಡ್​ ಕಾನ್ಸ್​​ಟೇಬಲ್​ ಸುನಿಲ್ ಎಂಬಾತನನ್ನು ಮಹಿಳಾ ಠಾಣೆಯಲ್ಲಿ ಪ್ರಕರಣ​ ದಾಖಲಿಸಿಕೊಂಡು ಬಂಧಿಸಲಾಗಿದೆ.

ಜನವರಿಯಲ್ಲಿ ಪೋಷಕರೊಂದಿಗೆ 17 ವರ್ಷದ ಬಾಲಕಿ ಠಾಣೆಗೆ ಭೇಟಿ ನೀಡಿದ್ದಳು. ಆಟೋ ಚಾಲಕ ಚುಡಾಯಿಸುತ್ತಾನೆ ಎಂದು ಅವರು ದೂರು ನೀಡಿದ್ದರು. ಈ ಪ್ರಕರಣದ ತನಿಖೆಯ ಕಾರಣ ಎಂದು ಹೆಡ್​ಕಾನ್ಸ್​ಟೇಬಲ್ ಬಾಲಕಿಯ ಫೋನ್ ​ನಂಬರ್ ಪಡೆದಿದ್ದ. ಬಳಿಕ ಬಾಲಕಿಗೆ ಅಶ್ಲೀಲವಾಗಿ ಮೆಸೇಜ್ ಮಾಡ್ತಿದ್ದ ಎಂದು ತಿಳಿದುಬಂದಿದೆ.

ಒಬ್ಬಳೇ ಮನೆಗೆ ಬಾ ಎಂದು ಕರೆಯುತ್ತಿದ್ದ ಹೆಡ್​ಕಾನ್ಸ್​​ಟೇಬಲ್ ಬಗ್ಗೆ ಬಾಲಕಿ ಪೋಷಕರಿಗೆ ದೂರು ನೀಡಿದ್ದಾಳೆ. ಬಳಿಕ ಈ ಕುರಿತು ಪೊಲೀಸ್​ ಕಮಿಷನರ್​ಗೆ ಕುಟುಂಬಸ್ಥರು ದೂರು ನೀಡಿದ್ದಾರೆ. ಇದೀಗ ಕಾನ್​ಸ್ಟೇಬಲ್ ಬಂಧಿಸಲಾಗಿದೆ.

ಹನಿಟ್ರ್ಯಾಪ್​, ಕಳವು ಮಾಡಿದ್ದ ಇಬ್ಬರು ಆರೋಪಿಗಳ ಸೆರೆ ಮಂಗಳೂರಿನ ಉಳ್ಳಾಲ ಠಾಣೆಯ ಪೊಲೀಸರಿಂದ ಹನಿಟ್ರ್ಯಾಪ್​, ಕಳವು ಮಾಡಿದ್ದ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ. ಸಪ್ನಾ(23), ಅಝ್ವೀನ್(24) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲದ ಸಂತ್ರಸ್ತನ ಮನೆಯಲ್ಲೇ ಮದ್ಯ ಕುಡಿಸಿ ಕೃತ್ಯ ಎಸಗಲಾಗಿತ್ತು. ಪರಿಚಯ ಮಾಡಿಕೊಂಡು ಸಂತ್ರಸ್ತನ ಮನೆಯಲ್ಲೇ ಪಾರ್ಟಿ ಮಾಡಿದ್ದರು. ಬಳಿಕ ಮತ್ತು ಬರಿಸುವ ಔಷಧಿ ಹಾಕಿ ಪ್ರಜ್ಞೆ ತಪ್ಪಿಸಿ ಕಳವು ಮಾಡಲಾಗಿತ್ತು.

2.12 ಲಕ್ಷ ರೂಪಾಯಿ, ಉಂಗುರ ಕಳವು ಮಾಡಿದ್ದರು. ನಗ್ನ ಫೋಟೋ, ವಿಡಿಯೋ ತೋರಿಸಿ ಬ್ಲ್ಯಾಕ್​ಮೇಲ್ ಮಾಡಿದ್ದರು. ಈ ಪ್ರಕರಣದ ಇಬ್ಬರು ಆರೋಪಿಗಳನ್ನು ಈಗ ಪೊಲೀಸರು ಬಂಧಿಸಿದ್ದಾರೆ. ಓರ್ವ ಮಹಿಳೆ ಮತ್ತು ಓರ್ವ ಪುರಷನಿಂದ ಕೃತ್ಯ ನಡೆದಿದೆ. ಅವರಿಬ್ಬರನ್ನೂ ಬಂಧಿಸಲಾಗಿದೆ.

ಮಂಗಳೂರಿನ ಇನ್ ಲ್ಯಾಂಡ್ ಇಂಪಾಲ ಅಪಾರ್ಟ್ಮೆಂಟ್ ನಿವಾಸಿ ಆಝ್ವೀನ್ ಹಾಗೂ ಮಂಗಳೂರು ಹೊರವಲಯದ ಜೋಕಟ್ಟೆ ನಿವಾಸಿ ಸಫ್ನಾ ಅಲಿಯಾಸ್ ಹತೀಜಮ್ಮ ಅವರನ್ನು ಸೆರೆ ಹಿಡಿಯಲಾಗಿದೆ.

ಇದನ್ನೂ ಓದಿ: Crime News: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ; ಆರೋಪಿಗೆ ಗಲ್ಲು ಶಿಕ್ಷೆ 

ಬಾಲಕಿಯ ಹತ್ಯೆಗೆ ಕಾರಣವಾದ ಜೀನ್ಸ್​​; ಅಜ್ಜ, ಇಬ್ಬರು ಚಿಕ್ಕಪ್ಪಂದಿರೇ ಆರೋಪಿಗಳು

(Sexual Harassment on Girl in Mangaluru by Police Head Constable Arrested)

Published On - 7:35 pm, Wed, 28 July 21