ಬಾಲಕಿಯ ಹತ್ಯೆಗೆ ಕಾರಣವಾದ ಜೀನ್ಸ್​​; ಅಜ್ಜ, ಇಬ್ಬರು ಚಿಕ್ಕಪ್ಪಂದಿರೇ ಆರೋಪಿಗಳು

ಮೃತ ಬಾಲಕಿಯ ತಂದೆ ಪಂಜಾಬ್​ನ ಲುಧಿಯಾನಾದಲ್ಲಿ ಕೆಲಸ ಮಾಡುತ್ತಿದ್ದರು. ಉಳಿದವರೆಲ್ಲ ಲಖನೌದಲ್ಲಿರುವ ಡಿಯೋರಿಯಾ ಮಹಹುದೀಹ್​​ನಲ್ಲಿರುವ ಹಳ್ಳಿಯಲ್ಲೇ ವಾಸವಾಗಿದ್ದರು. ಇವರ ಕುಟುಂಬದಲ್ಲಿ ಹೆಣ್ಣುಮಕ್ಕಳು ಜೀನ್ಸ್​ ಧರಿಸಬಾರದು ಎಂಬ ಕಟ್ಟಳೆಯನ್ನು ವಿಧಿಸಲಾಗಿತ್ತು.

ಬಾಲಕಿಯ ಹತ್ಯೆಗೆ ಕಾರಣವಾದ ಜೀನ್ಸ್​​; ಅಜ್ಜ, ಇಬ್ಬರು ಚಿಕ್ಕಪ್ಪಂದಿರೇ ಆರೋಪಿಗಳು
ಸಾಂಕೇತಿಕ ಚಿತ್ರ
Follow us
| Updated By: Lakshmi Hegde

Updated on: Jul 22, 2021 | 10:03 AM

ಲಖನೌ: ಬಾಲಕಿಯೊಬ್ಬಳನ್ನು ಆಕೆಯ ಅಜ್ಜ, ಇಬ್ಬರು ಚಿಕ್ಕಪ್ಪಂದಿರು ಸೇರಿ ಹತ್ಯೆ (Murder) ಮಾಡಿದ್ದಾರೆ. ಅದಕ್ಕೆ ಕಾರಣ ಜೀನ್ಸ್ ( Jeans)​ ವಿಚಾರದಲ್ಲಿ ಕುಟುಂಬದಲ್ಲಿ ಎದ್ದಿದ್ದ ವಿವಾದ. ಸದ್ಯ ಮೃತ ಬಾಲಕಿಯ ತಾತ ಮತ್ತು ಇಬ್ಬರು ಚಿಕ್ಕಪ್ಪಂದಿರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದದ್ದು ಲಖನೌದಲ್ಲಿ. ಮೃತ ಬಾಲಕಿಗೆ 17 ವರ್ಷ. ಕಶ್ಯ-ಪಾಟ್ನಾ ಹೆದ್ದಾರಿಯಲ್ಲಿರುವ ಪತನ್ವಾ ಸೇತುವೆಯ ಗ್ರಿಲ್‌ಗೆ ಈಕೆಯ ಶವ ಜೋತಾಡುತ್ತಿರುವುದನ್ನು ದಾರಿಹೋಕರೊಬ್ಬರು ನೋಡಿ, ಪೊಲೀಸರಿಗೆ ವಿಷಯ ತಿಳಿಸಿದಾಗಲೇ ತನಿಖೆ ಪ್ರಾರಂಭವಾಗಿದ್ದು. ಬಾಲಕಿಯನ್ನು ಹತ್ಯೆಗೈದಿದ್ದು ಆಕೆಯ ಅಜ್ಜ ಪರಮಹಂಸ ಪಾಸ್ವಾನ್​ ಮತ್ತು ಚಿಕ್ಕಪ್ಪಂದಿರಾದ ವ್ಯಾಸ್​ ಪಾಸ್ವಾನ್​ ಹಾಗೂ ಅರವಿಂದ್ ಪಾಸ್ವಾನ್​​ ಎಂಬುದು ಪಕ್ಕಾ ಆಗುತ್ತಿದ್ದಂತೆ ಅವರನ್ನು ಬಂಧಿಸಲಾಗಿದೆ.

ಮೃತ ಬಾಲಕಿಯ ತಂದೆ ಪಂಜಾಬ್​ನ ಲುಧಿಯಾನಾದಲ್ಲಿ ಕೆಲಸ ಮಾಡುತ್ತಿದ್ದರು. ಉಳಿದವರೆಲ್ಲ ಲಖನೌದಲ್ಲಿರುವ ಡಿಯೋರಿಯಾ ಮಹಹುದೀಹ್​​ನಲ್ಲಿರುವ ಹಳ್ಳಿಯಲ್ಲೇ ವಾಸವಾಗಿದ್ದರು. ಇವರ ಕುಟುಂಬದಲ್ಲಿ ಹೆಣ್ಣುಮಕ್ಕಳು ಜೀನ್ಸ್​ ಧರಿಸಬಾರದು ಎಂಬ ಕಟ್ಟಳೆಯನ್ನು ವಿಧಿಸಲಾಗಿತ್ತು. ಬಾಲಕಿ ಲುಧಿಯಾನಾಕ್ಕೆ ಹೋಗುತ್ತಿದ್ದಂತೆ, ವಯೋಸಹಜ ಆಸೆಯಿಂದ ಜೀನ್ಸ್ ಸೇರಿ, ಪಾಶ್ಚಿಮಾತ್ಯ ಉಡುಗೆಗಳನ್ನು ಧರಿಸಲು ಪ್ರಾರಂಭಿಸಿದ್ದಾಳೆ. ಕೆಲ ದಿನಗಳ ಹಿಂದೆ ಬಾಲಕಿ ತನ್ನ ತಾಯಿ ಶಕುಂತಲಾ ಅವರ ಜತೆ ಗ್ರಾಮಕ್ಕೆ ವಾಪಸ್ ಆಗಿದ್ದಳು. ಆಗಲೂ ತನ್ನ ಉಡುಗೆಯಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿರಲಿಲ್ಲ. ಅಷ್ಟೇ ಅಲ್ಲ, ತುಂಬ ಹೊತ್ತುಗಳ ಕಾಲ ಮನೆಯಿಂದ ಹೊರಗೇ ಇರುತ್ತಿದ್ದಳು. ತಾತ, ಚಿಕ್ಕಪ್ಪಂದಿರು ತುಂಬ ಸಲ ಅದನ್ನು ಆಕೆಗೆ ಹೇಳಿದ್ದರು. ಭಾರತೀಯ ಪದ್ಧತಿಯ ಉಡುಗೆಗಳನ್ನೇ ಧರಿಸಲು ಪದೇಪದೆ ಒತ್ತಾಯಿಸಿದ್ದರು. ಆದರೂ ಆಕೆ ಕ್ಯಾರೆ ಎನ್ನುತ್ತಿರಲಿಲ್ಲ.

ಹಾಗೇ ಸೋಮವಾರ ಅರವಿಂದ್​ ಬಾಲಕಿಯ ತಾಯಿ ಶಕುಂತಲಾಳ ಬಳಿ ಬಂದು, ನಿಮ್ಮ ಮಗಳು ಜೀನ್ಸ್​ ಹಾಕುವುದನ್ನು ಮತ್ತು ತುಂಬ ಹೊತ್ತು ಮನೆಯಿಂದ ಆಚೆಯೇ ಇರುವುದನ್ನು ತಪ್ಪಿಸಿ..ಅವಳಿಗೆ ನೀವೇ ಹೇಳಿ ಎಂದು ಹೇಳಿದ್ದರು. ಆದರೆ ಅಂದೂ ಕೂಡ ಬಾಲಕಿ ಎಂದಿನಂತೆ ಹೊರಹೋಗಿದ್ದಳು. ಆಕೆ ವಾಪಸ್ ಬಂದ ಕೂಡಲೇ ಮನೆಯಲ್ಲಿ ಗಲಾಟೆ ಜೋರಾಗಿತ್ತು. ಜೀನ್ಸ್ ಧರಿಸಬಾರದು ಎಂಬ ಆಜ್ಞೆಯನ್ನು ವಿರೋಧಿಸಿದ ಬಾಲಕಿ ತನ್ನ ಚಿಕ್ಕಪ್ಪ ಅರವಿಂದ್​ ಮೇಲೆ ಕೈಕೂಡ ಮಾಡಿದಳು ಎಂಬ ಆರೋಪವೂ ಕೇಳಿಬಂದಿದೆ. ನಂತರ ಅರವಿಂದ್​, ಅವರ ಪತ್ನಿ, ಸಹೋದರ ವ್ಯಾಸ್​, ತಂದೆ ಪರಮಹಂಸ್ ಪಾಸ್ವಾನ್​​ ಎಲ್ಲ ಸೇರಿ ಬಾಲಕಿಯನ್ನು ಗೋಡೆಗೆ ಜಜ್ಜಿ, ನೆಲಕ್ಕೆ ಅಪ್ಪಳಿಸಿದ್ದಾರೆ. ಇದರಿಂದ ತೀವ್ರ ರಕ್ತಸ್ರಾವ ಉಂಟಾಗಿ ಆಕೆ ಮೃತಪಟ್ಟಿದ್ದಾಳೆ. ನಂತರ ಶವವನ್ನು ಇವರೆಲ್ಲ ಸೇರಿ ಆಟೋದ ಮೇಲೆ ತೆಗೆದುಕೊಂಡು ಹೋಗಿ ಪತನ್ವಾ ಬ್ರಿಜ್​ನಿಂದ ಕೆಳಕ್ಕೆ ನೂಕಿದ್ದಾರೆ. ಆದರೆ ಆ ಹೆಣ ಪೂರ್ತಿಯಾಗಿ ಕೆಳಗೆ ಬೀಳದೆ, ಸೇತುವೆಯ ಗ್ರಿಲ್​ಗೆ ಸಿಲುಕಿಕೊಂಡಿತ್ತು. ಅದನ್ನೇ ನೋಡಿದ ದಾರಿಹೋಕರು ನಮಗೆ ತಿಳಿಸಿದರು ಎಂದು ಪೊಲೀಸ್​ ಅಧಿಕಾರಿ ಶ್ರೀಪತಿ ಮಿಶ್ರಾ ತಿಳಿಸಿದ್ದಾರೆ.

ಇದನ್ನೂ ಓದಿ: Virat Kohli: ವಾವ್: ವಿರಾಟ್ ಕೊಹ್ಲಿಯಿಂದ ನೆಟ್​ನಲ್ಲಿ ಮನಮೋಹಕ ಹೊಡೆತ: ಭರ್ಜರಿ ಅಭ್ಯಾಸ

Opposed no jeans diktat minor girl murdered in Uttar Pradesh

ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಜಿಟಿ ದೇವೇಗೌಡರ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ನೇಹಮಯಿ ಕೃಷ್ಣ
ಜಿಟಿ ದೇವೇಗೌಡರ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ನೇಹಮಯಿ ಕೃಷ್ಣ
ಗೃಹಲಕ್ಷ್ಮೀಯರಿಗೆ ದಸರಾ ಗಿಫ್ಟ್: ನವರಾತ್ರಿಗೆ ಮಹಿಳೆಯರ ಖಾತೆಗೆ ಹಣ ಜಮೆ
ಗೃಹಲಕ್ಷ್ಮೀಯರಿಗೆ ದಸರಾ ಗಿಫ್ಟ್: ನವರಾತ್ರಿಗೆ ಮಹಿಳೆಯರ ಖಾತೆಗೆ ಹಣ ಜಮೆ