ಮೋದಿ ಒಬ್ಬೊಬ್ಬರ ತಲೆ ಮೇಲೆ 1.75 ಲಕ್ಷ ಸಾಲ ಇಟ್ಟಿದ್ದಾರೆ: ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

| Updated By: ವಿವೇಕ ಬಿರಾದಾರ

Updated on: Jun 07, 2022 | 9:07 PM

ಬಿಜೆಪಿ ಸರ್ಕಾರದಿಂದ ಸಂವಿಧಾನದ ರಕ್ಷಣೆ ಆಗುತ್ತಿದೆಯಾ? ದೇಶದಲ್ಲಿ ಯಾವ ರೀತಿ ರಾಜಕಾರಣ ನಡೀತಿದೆ ನೋಡಿದ್ದೀರಿ?  ನಮ್ಮ ಆಡಳಿತ ಹಾಗೂ ಇವರ ಆಡಳಿತ ಹೋಲಿಸಿ ನೋಡಿ. ಈ ದೇಶದ ಆಡಳಿತ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ನೋಡಿ.  ದೇಶದ ಆರ್ಥಿಕತೆ, ನಿರುದ್ಯೋಗ ಯಾವ ರೀತಿ ನಡೆಯುತ್ತಿದೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮೋದಿ ಒಬ್ಬೊಬ್ಬರ ತಲೆ ಮೇಲೆ 1.75 ಲಕ್ಷ ಸಾಲ ಇಟ್ಟಿದ್ದಾರೆ: ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಸಿದ್ದರಾಮಯ್ಯ
Follow us on

ಬೆಳಗಾವಿ: ಬಿಜೆಪಿ (BJP) ಸರ್ಕಾರದಿಂದ ಸಂವಿಧಾನದ ರಕ್ಷಣೆ ಆಗುತ್ತಿದೆಯಾ? ದೇಶದಲ್ಲಿ ಯಾವ ರೀತಿ ರಾಜಕಾರಣ ನಡೀತಿದೆ ನೋಡಿದ್ದೀರಿ?  ನಮ್ಮ ಆಡಳಿತ ಹಾಗೂ ಇವರ ಆಡಳಿತ ಹೋಲಿಸಿ ನೋಡಿ. ಈ ದೇಶದ ಆಡಳಿತ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ನೋಡಿ.  ದೇಶದ ಆರ್ಥಿಕತೆ, ನಿರುದ್ಯೋಗ ಯಾವ ರೀತಿ ನಡೆಯುತ್ತಿದೆ? ಎಂದು ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಹಿನ್ನಲೆ ಬೆಳಗಾವಿಯ (Belagavi) ಮರಾಠ ಮಂಡಲ ಪ್ರಚಾರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದಾರಾಮಯ್ಯ (Siddaramaiah) ಪ್ರಶ್ನಿಸಿದ್ದಾರೆ. ಮೋದಿ (Modi) ಒಬ್ಬೊಬ್ಬರ ತಲೆ ಮೇಲೆ 1.75 ಲಕ್ಷ ಸಾಲ ಇಟ್ಟಿದ್ದಾರೆ. ಮೋದಿ ಸರ್ಕಾರ ಜನರನ್ನ ಸಾಲದ ಸುಳಿಗೆ ಸಿಲುಕಿಸಿದೆ. ಪೆಟ್ರೋಲ್, ಡೀಸೆಲ್​ ಬೆಲೆ ಏರಿಕೆಗೆ ಯಾರು ಜವಾಬ್ದಾರರು‌? ಬಿಜೆಪಿ ಸರ್ಕಾರ ಜನರ ಬದುಕು ಇಷ್ಟು ದುಸ್ತರ ಮಾಡಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದಿಂದ 4ಲಕ್ಷ 16ಸಾವಿರ ಕೋಟಿ ಅನುದಾನ ಬಂದಿದೆ ಅಂತಾ ದೊಡ್ಡ ಜಾಹೀರಾತು ನೀಡಿದ್ದಾರೆ. ಕರ್ನಾಟಕದಿಂದ ಕೇಂದ್ರಕ್ಕೆ 19ಲಕ್ಷ ಕೋಟಿ ತೆರಿಗೆ ಹೋಗಿದೆ. 16ಲಕ್ಷ ಕೋಟಿ ಅವರೇ ಇಟ್ಟುಕೊಂಡು ನರೇಂದ್ರ ಮೋದಿ ಕೊಟ್ಟಿದೀನಿ ಕೊಟ್ಟಿದೀನಿ ಅಂತಿದ್ದಾರೆ‌. ಈ ದೇಶದ ಜನರನ್ನ ಮೋದಿ ಸರ್ಕಾರ ಸಾಲದ ಸುಳಿಗೆ ಸಿಲುಕಿಸಿದೆ. ನಾನು ಸುಳ್ಳು ಹೇಳ್ತಿದೀನಿ ಅಂದ್ರೇ ನೀವು ಪರಿಶೀಲನೆ ಮಾಡಿ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಗೆ ಯಾರು ಜವಾಬ್ದಾರರು‌ ಕಾಂಗ್ರೆಸ್ ಪಕ್ಷನಾ? ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಆಗಿದೆ ಅಂತಾರೆ. ಆದರೆ ಅದು ಸುಳ್ಳು, ನಮ್ಮ ಸರ್ಕಾರ ಇದ್ದಾಗಿನಿಗಿಂತ ಈಗ ಕಚ್ಚಾ ತೈಲ ಬೆಲೆ ಕಡಿಮೆ ಇದೆ. ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚು ಮಾಡಿದ್ದು ಮನಮೋಹನ್ ಸಿಂಗ್ ಅವರಾ? ಸೋನಿಯಾ ಗಾಂಧಿ ಮಾಡಿದ್ದಾರಾ?  ಅವನ್ಯಾವನೋ ಅರುಣ್ ಶಹಾಪುರ್ ಅಂತಿದ್ದಾನಲಾ ಮುಖ ತೋರ್ಸಿದ್ದಾನಾ? ಒಂದು ಬಾರಿಯಾದರು ವಿಧಾನ ಮಂಡಲದಲ್ಲಿ ಪ್ರಶ್ನೆ ಮಾಡಿದ್ದಾರಾ? ಬಿಜೆಪಿಯವರು ಬಂದ ಮೇಲೆ ಎನೂ ಮಾಡಿದ್ದಾರೆ ಹೇಳಲಿ ಎಂದು ಜನರಿಗೆ ಪ್ರಶ್ನಿಸಿದ್ದಾರೆ.

ಇದನ್ನು ಓದಿ: ಬಸವಣ್ಣ ಕುರಿತ ಪಠ್ಯ 10 ದಿನಗಳಲ್ಲಿ ಬದಲಿಸಬೇಕು: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಾಕೀತು

ಪಠ್ಯದಲ್ಲಿ ಉದ್ದೇಶ ಪೂರ್ವಕವಾಗಿ ಅನೇಕ ತಪ್ಪು ಮಾಡಿದ್ದಾರೆ. ಸಂವಿಧಾನ ಬರೆದು ಕೊಟ್ಟವರು ಯಾರು? ಸಂವಿಧಾನ ಶಿಲ್ಪಿ ಅನ್ನೋದನ್ನೇ ತೆಗೆದು ಹಾಕಿದರೆ ಹೇಗೆ ಡಾ.ಬಿ.ಆರ್.ಅಂಬೇಡ್ಕರ್ ಚರಿತ್ರೆಯ ಅಗತ್ಯತೆ ಇದೆ. ಕುವೆಂಪು ಫೋಟೋ ತೆಗೆದು ಹಾಕಿದ್ರೆ ಅಪಮಾನ ಅಲ್ಲವೆ ನಾರಾಯಣಗುರು, ಬಸವಣ್ಣರ ಬಗ್ಗೆ ಅಪಮಾನ ಮಾಡಿದ್ದಾರೆ. ಪಠ್ಯ ಪುಸ್ತಕವನ್ನ ಕೇಸರೀಕರಣ ಮಾಡಲು ಹೊರಟಿದ್ದಾರೆ.  ಇತಿಹಾಸ ತಿರುಚುವ ಕೆಲಸ ಮಾಡಬಾರದು. ಸಿಎಂ, ಶಿಕ್ಷಣ ಸಚಿವರು ತಪ್ಪು ತಿದ್ದುತ್ತೇವೆ ಅಂದಿದ್ದಾರೆ ಎಂದು ಹೇಳಿದರು.

ಸುಳ್ಳು ನಿಜಾನಾ, ಹೇಳಿದ್ದಾರೋ ಇಲ್ವೋ? ಅಂದ ಮೇಲೆ ನಾವೇಲ್ಲಿ ರಾಜಕೀಯ ಮಾಡುತ್ತಿದ್ದೇವೆ ರೀ. ಅಂಬೇಡ್ಕರ್ ಸಂವಿಧಾನ ಶಿಲ್ಪಿ ಅನ್ನೋದು ತಗೆದುಹಾಕೋದು. ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾದವರು ಯಾರು ಮಿಸ್ಟರ್ ಅಂಬೇಡ್ಕರ್.  ಅದನ್ನೇ ತಗೆದು ಹಾಕಿದರೆ ಹೇಗೆ? ಅದನ್ನು ಮಕ್ಕಳಿಗೆ ಹೇಳದೆ ಇದ್ದರೆ ಹೇಗೆ? ಎಲ್ಲೆಡೆಯಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ವಿಸರ್ಜನೆ ಮಾಡಿದರು.  ಸಮಿತಿ ವಿಸರ್ಜನೆ ಮಾಡಿ, ಪಠ್ಯ ಮುಂದುವರೆಸಿದರೆ ಹೇಗೆ? ಆ ವ್ಯಕ್ತಿ ರಚಿಸಿದಂತಹ ಪಠ್ಯಪುಸ್ತಕ ತಗೆದು ಹಾಕಿ ಬಿಡಿ. ಈ ವರ್ಷ ಹಳೆಯದ‌ನ್ನು ಓದಿಸಿ ಮುಂದಿನ ವರ್ಷ ಬೇಕಾದರೆ ಬೇರೆ ಮಾಡಿ. ವೈಚಾರಿಕ, ವೈಜ್ಞಾನಿಕ ಮನೋಭಾವ ಇರೋ ವ್ಯಕ್ತಿಯನ್ನು ನೇಮಕ ಮಾಡಬೇಕು.  ನಮ್ಮವರನ್ನೇ ಮಾಡಬೇಕು ಅಂತೇನಿಲ್ಲ ಯಾವುದೇ ಪಕ್ಷದ ಸಿದ್ಧಾಂತಕ್ಕೆ ಒಪ್ಪದಂತವರನ್ನು ಮಾಡಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

ಇದನ್ನು ಓದಿ: ಮಾರತ್​​ಹಳ್ಳಿ ಲಾಡ್ಜ್​​ನಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯ ಶವಪತ್ತೆ; ಸಿಡಿಲು ಬಡಿದು ಓರ್ವ ಮಹಿಳೆ ಸಾವು, 7 ಜನರಿಗೆ ಗಾಯ

ದೇಶ, ರಾಜ್ಯವನ್ನು ಉಳಿಸುವುದು ಮತದಾರರ ಕೈಯಲ್ಲಿದೆ. ಸಿಎಂ ಬೊಮ್ಮಾಯಿ ಏನೂ ಕಡಿದು ಕಟ್ಟೆ ಹಾಕಿದ್ದಾರೆಂದು ಹೇಳಲಿ. ಸಮಸ್ಯೆಗಳನ್ನ ಮುಚ್ಚಿಕೊಳ್ಳಲು ಧಾರ್ಮಿಕ ವಿಚಾರಗಳನ್ನ ತರುತ್ತಾರೆ. ಮೋದಿ ಪ್ರಧಾನಿಯಾದ ಬಳಿಕ ದೇಶ 20 ವರ್ಷ ಹಿಂದಕ್ಕೆ ಹೋಗಿದೆ. ರಾಜ್ಯ 10 ವರ್ಷ ಹಿಂದಕ್ಕೆ ಹೋಗಿದೆ ಅನ್ನೋ ಮಾಹಿತಿ ಇದೆ.  ನಾನು ಕೊಡುವ ಅಂಕಿ ಅಂಶಗಳು ತಪ್ಪಿದ್ದರೆ ಚರ್ಚೆಗೆ ಬರಲಿ. ಒಂದೇ ವೇದಿಕೆಯಲ್ಲಿ ಇಬ್ಬರು ಸೇರಿ ಚರ್ಚೆ ಮಾಡೋಣ. ಚರ್ಚೆ ಮಾಡಲು ಬನ್ನಿ ಅಂದರೆ ಇವರು ಯಾರು ಬರುತ್ತಿಲ್ಲ. ಇಂತವರಿಗೆ ವೋಟ್ ಹಾಕಿದರೆ ದೇಶ ಹಾಳಾಗುತ್ತೆ.  ಸಂವಿಧಾನದ ಆಶಯಗಳನ್ನ ಈಡೇರಿಸುವ ಶಕ್ತಿ ಕಾಂಗ್ರೆಸ್‌ಗೆ ಇದೆ.  ಸಂವಿಧಾನದ ಆಶಯಗಳಿಗೆ ವಿರೋಧ ಇದ್ದವರು ದೇಶದ್ರೋಹಿಗಳು ಪರೋಕ್ಷವಾಗಿ ಬಿಜೆಪಿಯವರನ್ನು ದೇಶದ್ರೋಹಿ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 9:06 pm, Tue, 7 June 22