AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರತ್​​ಹಳ್ಳಿ ಲಾಡ್ಜ್​​ನಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯ ಶವಪತ್ತೆ; ಸಿಡಿಲು ಬಡಿದು ಓರ್ವ ಮಹಿಳೆ ಸಾವು, 7 ಜನರಿಗೆ ಗಾಯ

ನಗರದ ಮಾರತ್​​ಹಳ್ಳಿ ಲಾಡ್ಜ್​​ನಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯ ಶವಪತ್ತೆಯಾಗಿದೆ. ರಾಜಗೋಪಾಲ್(24)  ಎಂಬುವವರ ಶವಪತ್ತೆಯಾಗಿದೆ.

ಮಾರತ್​​ಹಳ್ಳಿ ಲಾಡ್ಜ್​​ನಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯ ಶವಪತ್ತೆ; ಸಿಡಿಲು ಬಡಿದು ಓರ್ವ ಮಹಿಳೆ ಸಾವು, 7 ಜನರಿಗೆ ಗಾಯ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on:Jun 07, 2022 | 10:09 PM

ಬೆಂಗಳೂರು: ನಗರದ ಮಾರತ್​​ಹಳ್ಳಿ ಲಾಡ್ಜ್​​ನಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯ ಶವಪತ್ತೆಯಾಗಿದೆ. ರಾಜಗೋಪಾಲ್(24)  ಎಂಬುವವರ ಶವಪತ್ತೆಯಾಗಿದೆ. ರಾಜಗೋಪಾಲ್ ಜೂನ್ 4ರಂದು ರೂಮ್​ ಬುಕ್​ ಮಾಡಿದ್ದರು. ರಾಜಗೋಪಾಲ್ ಜತೆ ಮತ್ತೊಬ್ಬ ವ್ಯಕ್ತಿ ರೂಂ ಪಡೆದುಕೊಂಡಿದ್ದನು. ಎರಡು ದಿನವಾದರೂ ರೂಮ್ ರಿನೀವಲ್ ಮಾಡಿರಲಿಲ್ಲ.  ಲಾಡ್ಜ್ ಸಿಬ್ಬಂದಿ ಪರಿಶೀಲಿಸಲು ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ರಾಜಗೋಪಾಲ್ ಜೊತೆಗೆ ರೂಮ್ ಪಡೆದಿದ್ದ ವ್ಯಕ್ತಿ ಪರಾರಿಯಾಗಿದ್ದಾನೆ. ಮಾರತ್​ಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.ಮರಣೋತ್ತರ ಪರೀಕ್ಷೆಗಾಗಿ ರಾಜಗೋಪಾಲ ಮೃತದೇಹ ಸಿ ವಿ ರಾಮನ್ ಆಸ್ಪತ್ರೆಗೆ ರವಾನಿಸಲಾಗಿದೆ.  ತಮಿಳುನಾಡಿನ ಚೈನ್ನೈ ನಲ್ಲಿರುವ ರಾಜಗೋಪಾಲ ಪೋಷಕರಿಗೆ ಪೊಲೀಸರ ಮಾಹಿತಿ ನೀಡಿದ್ದು, ಪೋಷಕರ ಬರುವಿಕೆಗಾಗಿ ಮಾರತ್ ಹಳ್ಳಿ ಪೊಲೀಸರು ಕಾಯುತ್ತಿದ್ದಾರೆ.

ಇದನ್ನು ಓದಿ: ಸಿದ್ದರಾಮಯ್ಯ ದೇಶ ಒಡೆದ ಜಿನ್ನಾ ಹೆಸರು ಹೇಳಿದರೂ ಆಶ್ಚರ್ಯ ಪಡಬೇಡಿ: ಸಿ.ಟಿ ರವಿ ವಾಗ್ದಾಳಿ

ಸಿಡಿಲು ಬಡಿದು ಓರ್ವ ಮಹಿಳೆ ಸಾವು, 7 ಜನರಿಗೆ ಗಾಯ

ಹಾವೇರಿ: ಸಿಡಿಲು ಬಡಿದು ಓರ್ವ ಮಹಿಳೆ ಸಾವನ್ನಪ್ಪಿದ್ದು, 7 ಜನರಿಗೆ ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಹೊರವಲಯದಲ್ಲಿ ನಡೆದಿದೆ. ಸಿಡಿಲು ಬಡಿದು ಕವಿತಾ ಮೂಲಿಮನಿ(30) ಮರಣ ಹೊಂದಿದ್ದಾರೆ. ರತ್ನಾ 35 ವರ್ಷ, ಮಾರುತಿ 45 ವರ್ಷ, ಶಶಿಕಲಾ 35 ವರ್ಷ, ರವೀಂದ್ರಪ್ಪ 65 ವರ್ಷ, ಸುಧಾ 60 ವರ್ಷ, ಸಾಕಮ್ಮ 45 ವರ್ಷ ಮತ್ತು ಜುಬೇದಾಬಾನು 32 ವರ್ಷ ಗಾಯಾಗೊಂಡಿದ್ದು, ಅವರನ್ನು ದಾವಣಗೆರೆ ಮತ್ತು ಹಾವೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡೆದಿದೆ. ರಟ್ಟೀಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನು ಓದಿ: ‘ವಿಕ್ರಮ್’ ಯಶಸ್ಸನ್ನು ವಿಭಿನ್ನವಾಗಿ ಸಂಭ್ರಮಿಸಿದ ಅಮುಲ್

ಬೊಲೆರೊ ಡಿಕ್ಕಿಯಾಗಿ ಬೈಕ್​​ನಲ್ಲಿ ತೆರಳುತ್ತಿದ್ದ ಇಬ್ಬರ ಸಾವು

ಕೋಲಾರ: ಬೊಲೆರೊ ಡಿಕ್ಕಿಯಾಗಿ ಬೈಕ್​​ನಲ್ಲಿ ತೆರಳುತ್ತಿದ್ದ ಇಬ್ಬರ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸೋಮಯಾಜಲಪಲ್ಲಿ ಗ್ರಾಮದ ಬಳಿ  ನಡೆದಿದೆ.  ಅಪಘಾತದಲ್ಲಿ ವೇಣಮ್ಮ(50), ರೆಡ್ಡಪ್ಪ(55) ಮರಣ ಹೊಂದಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಶಿವಮೊಗ್ಗ ನಗರದಲ್ಲಿ ಬಟ್ಟೆ ವ್ಯಾಪಾರಿಗೆ ಚಾಕು ಇರಿತ

ಶಿವಮೊಗ್ಗ: ಶಿವಮೊಗ್ಗ ನಗರದ ಗಾಂಧಿ ಬಜಾರ್​​ನಲ್ಲಿರುವ ಬಟ್ಟೆ ಮಾರ್ಕೆಟ್​ನ ಬಟ್ಟೆ ವ್ಯಾಪಾರಿಗೆ ಚಾಕು ಇರಿದಿರುವ ಘಟನೆ ನಡೆದಿದೆ. ಹಳೇ ವೈಷಮ್ಯ ಹಿನ್ನೆಲೆ ಬಟ್ಟೆ ವ್ಯಾಪಾರಿ ಸೆಂಥಿಲ್​​ಗೆ  ಆರೋಪಿ  ಸಂತು ಅಲಿಯಾಸ್ ಜೋಗಿ ಚಾಕು  ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಸೆಂಥಿಲ್​ಗೆ ನಗರದ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸೆಂಥಿಲ್​​ಗೆ ಎದೆ ಮತ್ತು ಪೃಷ್ಠ ಭಾಗಕ್ಕೆ ಚಾಕು ಇರದಿದ್ದಾರೆ. ಕೊಲೆ ಯತ್ನ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿರುವ ಶಂಕೆ ವ್ಯಕ್ತವಾಗಿದೆ. ದೊಡ್ಡಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸಂತುಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 8:33 pm, Tue, 7 June 22