ಚಿಕ್ಕೋಡಿ, ಅ.22: ನವರಾತ್ರಿ ಉತ್ಸವದಲ್ಲಿ ಶ್ರೀರಾಮಸೇನೆ (Srirama Sene) ಕಾರ್ಯಕರ್ತರೊಬ್ಬರು ತನ್ನ ಬೆರಳನ್ನು ತಲವಾರ್‌ನಿಂದ ಕೊಯ್ದುಕೊಂಡು ದುರ್ಗಾದೇವಿ ಮೂರ್ತಿಗೆ ತಿಲಕವಿಟ್ಟ ಘಟನೆ ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ನಡೆದಿದೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಗ್ರಾಮದ ಕಾಡಸಿದ್ದೇಶ್ವರ ದೇವಸ್ಥಾನದ ಬಳಿ ಬಸ್ತವಾಡ ಗ್ರಾಮದ ದುರ್ಗಾಮಾತಾ ಉತ್ಸವ ಕಮೀಟಿ ಪ್ರತಿಷ್ಠಾಪಿಸಿರುವ ದುರ್ಗಾದೇವಿ ಮೂರ್ತಿಗೆ ತನ್ನ ಬೆರಳು ಕೊಯ್ದುಕೊಂಡು ದೇವಿಯ ಮೂರ್ತಿಯ ಹಣೆಗೆ ರಕ್ತದ ತಿಲಕ ಹಚ್ಚಲಾಗಿದೆ.
ಇದನ್ನೂ ಓದಿ: ಬೆಳಗಾವಿ: ಕೊಲೆಗೈದು, ಕಾಣೆಯಾದ ಕಥೆ ಕಟ್ಟಿದವರು 3 ವರ್ಷದ ಬಳಿಕ ಅರೆಸ್ಟ್; ಮೂಡಲಗಿ ಪೊಲೀಸರ ಕಾರ್ಯಕ್ಕೆ ಶ್ಲಾಘನೆ
ಮತ್ತೊಂದೆಡೆ ನವರಾತ್ರಿ ಹಿನ್ನೆಲೆ ಹುಕ್ಕೇರಿ ತಾಲೂಕಿನ ವಿವಿಧೆಡೆ ‘ದುರ್ಗಾ ಮಾತಾ ದೌಡ್’ ಆಯೋಜನೆ ಮಾಡಲಾಗಿದ್ದು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕೈಯಲ್ಲಿ ತಲವಾರ್ ಹಿಡಿದು ಮೆರವಣಿಗೆ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ವಿವಿಧ ಬೀದಿಗಳಲ್ಲಿ ದುರ್ಗಾಮಾತಾ ದೌಡ್ ನಡೆಯಿತು. ಕೈಯಲ್ಲಿ ತಲವಾರ್ ಹಿಡಿದು ಯುವಕ, ಯುವತಿಯರು ದೌಡ್‌ನಲ್ಲಿ ಭಾಗಿಯಾದರು. ಅಷ್ಟೇ ಅಲ್ಲದೆ, ಪಾಕಿಸ್ತಾನದ ಧ್ವಜ ಮಾದರಿ ರಂಗೋಲಿ ಬಿಡಿಸಿ ಕಾಲಿನಿಂದ ತುಳಿದ ವಿಡಿಯೋ ಸಹ ವೈರಲ್ ಆಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:04 pm, Sun, 22 October 23