AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು ಸುತ್ತಿನ ರಾಜಕೀಯ ಕದನಕ್ಕೆ ಸಾಕ್ಷಿ ಆಯ್ತು ಬೆಳಗಾವಿ ಪಾಲಿಟಿಕ್ಸ್​, ಕಾಂಗ್ರೆಸ್​ನಲ್ಲಿ ಕಂಪನ

ಬೆಳಗಾವಿ ಜಿಲ್ಲಾ ಕಾಂಗ್ರೆಸ್​ನಲ್ಲಿ ಎಲ್ಲವೂ‌ ಸರಿಯಲ್ಲ. ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಮುಸುಕಿನ ಗುದ್ದಾಟ ಇದೀಗ ಟಾಕ್ ಫೈಟ್​ವರೆಗೂ ಬಂದಿದೆ. ಹೆಬ್ಬಾಳ್ಕರ್ ನಿನ್ನೆ ಸಿಡಿದೆದ್ರೇ ಸಾಹುಕಾರ್ ಸತೀಶ್ ಮಾತ್ರ ಗುಂಪುಗಾರಿಕೆ ಬಗ್ಗೆ ಮಾತನಾಡಿ ತಿರುಗೇಟು ನೀಡಿದ್ದಾರೆ. ಅಷ್ಟಕ್ಕೂ ಕುಂದಾನಗರಿಯಲ್ಲಿ ಸಚಿವದ್ವಯರ ಫೈಟ್ ಹೇಗಿದೆ ಅಂತೀರಾ? ಇಲ್ಲಿದೆ ನೋಡಿ.

ಮತ್ತೊಂದು ಸುತ್ತಿನ ರಾಜಕೀಯ ಕದನಕ್ಕೆ ಸಾಕ್ಷಿ ಆಯ್ತು ಬೆಳಗಾವಿ ಪಾಲಿಟಿಕ್ಸ್​, ಕಾಂಗ್ರೆಸ್​ನಲ್ಲಿ ಕಂಪನ
ಸತೀಶ್​ ಜಾರಕಿಹೊಳಿ, ಲಕ್ಷಮೀ ಹೆಬ್ಬಾಳ್ಕರ್​
Sahadev Mane
| Edited By: |

Updated on: Oct 22, 2023 | 2:41 PM

Share

ಬೆಳಗಾವಿ, ಅ.22: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬೆಳಗಾವಿ ಬಣ ರಾಜಕಾರಣ ಮುಳ್ಳಾಗುತ್ತಾ ಎಂಬ ಪ್ರಶ್ನೆ ಮೂಡಿದ್ದು, ಬೆಳಗಾವಿ ಬೆಗುದಿ ಕೈ ಪಾಳಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಹೌದು, ಬೆಳಗಾವಿ ಜಿಲ್ಲೆಯನ್ನು ಹಿಡಿತದಲ್ಲಿಟ್ಟುಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಮಧ್ಯೆ ಕೋಲ್ಡವಾರ್ ಆರಂಭವಾಗಿದೆಯಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ನಿನ್ನೆ(ಅ.21) ಬೆಳಗಾವಿಯಿಂದ ಬೆಂಗಳೂರಿಗೆ ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಒಟ್ಟಾಗಿ ಆಗಮಿಸಿದ್ದರು. ಆ ಬಳಿಕ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇಬ್ಬರೂ ಸಚಿವರು ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವೆಲ್ಲರೂ ಒಟ್ಟಾಗಿದ್ದೇವೆ ಎಂದು ಹೇಳುತ್ತಾನೆ ಭಿನ್ನಾಭಿಪ್ರಾಯ ಹೊರ ಹಾಕಿದ್ದರು.

ಇಬ್ಬರು ಸಚಿವರು ಪರೋಕ್ಷವಾಗಿ ಒಬ್ಬರಿಗೊಬ್ಬರು ಪರಸ್ಪರ ಟಾಂಗ್ ಕೊಟ್ಟಿದ್ದಾರೆ. ಏರ್ಪೋರ್ಟ್​ನಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ‘ನನ್ನ ಮತ್ತು ಸತೀಶ್ ಜಾರಕಿಹೊಳಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವೆಲ್ಲರೂ ಒಂದಾಗಿದ್ದೇವೆ ಎಂದು ಹೇಳುತ್ತಲೇ ‘ನನ್ನ ಮೌನವೂ ಕೂಡ ವಿಕ್ನೆಸ್ ಅಲ್ಲ ಎಂದು ಸಚಿವೆ ಹೆಬ್ಬಾಳ್ಕರ್ ಪರೋಕ್ಷವಾಗಿ ಸತೀಶ್ ಜಾರಕಿಹೊಳಿಗೆ ಖಡಕ್ ಸಂದೇಶ ರವಾನಿಸಿದ್ದರು. ಅದಷ್ಟೇ ಅಲ್ಲದೇ ಮೈಸೂರು ಪ್ರವಾಸ ರದ್ದು ಕುರಿತು ಸತೀಶ್ ಜಾರಕಿಹೊಳಿ ಅವರನ್ನೇ ಕೇಳಿ ಎಂದು ಬಾಣವನ್ನ ಸತೀಶ್ ಕಡೆ ತಿರುಗಿಸಿದ್ದರು.

ಇದನ್ನೂ ಓದಿ:ಸೂಪರ್ ಸೀಡ್ ಪತ್ರ: ಬೆಳಗಾವಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗದ್ದಲ, ಅಖಾಡಕ್ಕಿಳಿದ ಸತೀಶ್ ಜಾರಕಿಹೊಳಿ

ಇನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳುತ್ತಲೇ ಅವರ ಗುಂಪು ಬೇರೆ, ನಮ್ಮ ಗುಂಪು ಬೇರೆ ಎಂದು ಹೇಳಿದ್ದರು. ಒಂದು ಪಕ್ಷ ಅಂದರೆ ಬಣಗಳು ಇರುತ್ತವೆ. ಜೆಡಿಎಸ್​ನಲ್ಲಿ ಎರಡು ಬಣ, ಬಿಜೆಪಿಯಲ್ಲಿ ಮೂರು ಬಣಗಳಿವೆ ಎಂದು ಹೇಳುವ ಮೂಲಕ ಬೆಳಗಾವಿ ಜಿಲ್ಲಾ ಕಾಂಗ್ರೆಸ್​ನಲ್ಲಿ ಬಣ ರಾಜಕಾರಣವಿದೆ ಎಂದು ಒಪ್ಪಿಕೊಂಡಿದ್ದಾರೆ. ಅತ್ತ‌ ನನ್ನ ಮೌನ ನನ್ನ ವಿಕ್ನೆಸ್ ಅಲ್ಲಾ ಎಂಬ ಹೆಬ್ಬಾಳ್ಕರ್ ಹೇಳಿಕೆಗೆ ‘ಅವರು ನಮ್ಮದು ಏನೂ ಇಲ್ಲ, ಸುತ್ತಿ ಹಾಕಿ ಯಾಕೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ತೆಗೆದುಕೊಂಡು ಹೋಗುತ್ತೀರಾ. ಲಕ್ಷ್ಮೀ ಹೆಬ್ಬಾಳ್ಕರ್ ವಿರೋಧ ಮಾಡೊದಾದ್ರೆ ಎಂಎಲ್ಸಿ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿಗೆ ವಿರೋಧ ಮಾಡುತ್ತಿರಲಿಲ್ಲ. ಈಗಲೂ ಲಕ್ಷ್ಮೀ ಹೆಬ್ಬಾಳ್ಕರ್ ಗುಂಪು, ನಮ್ಮ ಗುಂಪು ಬೇರೆ ಬೇರೆ ಇರಬಹುದು. ಚುನಾವಣೆ ಬಂದಾಗ ನಾವು ಒಂದಾಗುತ್ತೇವೆ. ನೇರವಾಗಿ ಹೆಬ್ಬಾಳ್ಕರ್ ಗುಂಪು ಬೇರೆ, ತಮ್ಮ ಗುಂಪು ಬೇರೆಯಿದೆ ಎಂದು ಹೇಳಿದರು. ಸರ್ಕಾರದಲ್ಲಿ ಎಲ್ಲವೂ ನಾವು ಹೇಳಿದ್ದು ಆಗಬೇಕು ಅಂತೇನಿಲ್ಲ. ಒಂದೊಂದು ಸಲ ಫೇಲ್ ಆಗುತ್ತೆ. ಎಲ್ಲರ ಮಾತೂ ನಾಯಕರು ಕೇಳಬೇಕಾಗುತ್ತೆ ಎಂದು ಮಾರ್ಮಿಕವಾಗಿ ತೀರುಗೇಟು ಕೊಟ್ಟಿದ್ದಾರೆ.

ಒಟ್ಟಿನಲ್ಲಿ ಡಿಕೆ ಶಿವಕುಮಾರ್​ ಬೆಳಗಾವಿ ಪ್ರವಾಸ ಬೆನ್ನಲ್ಲೇ ಮತ್ತೆ ಕಾಂಗ್ರೆಸ್ ಪಾಳಯದಲ್ಲಿ ಬಣ ರಾಜಕೀಯ ಕಿಚ್ಚು ಹೊತ್ತಿಕೊಂಡಿದೆ. ಸತೀಶ್, ಲಕ್ಷ್ಮೀ ಇಬ್ಬರೂ ನಮ್ಮ ಮೌನ ವಿಕ್ನೆಸ್ ಅಲ್ಲ ಎನ್ನುವ ಹೇಳಿಕೆ. ಮತ್ತೊಂದು ಸುತ್ತಿನ ರಾಜಕೀಯ ಕದನಕ್ಕೆ ಸಾಕ್ಷಿಯಾಗಲಿದೆ. ಒಟ್ಟಿನಲ್ಲಿ ಈವರೆಗೆ ಒಳಗೊಳಗೆ ಇದ್ದ ಕಿತ್ತಾಟ ಇದೀಗ ಬೀದಿಗೆ ಬಂದಿದ್ದು, ಮುಂದೆ ಯಾವ ತಿರುವು ಪಡೆದುಕೊಳ್ಳುತ್ತೆ, ಬೆಳಗಾವಿ ಬಂಡಾಯ ಬೇಗುದಿ ಸರ್ಕಾರದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ