ಬೆಟ್ಟ ಕುರುಬ ಜನಾಂಗಕ್ಕೆ ಎಸ್ ಟಿ ಸ್ಥಾನಮಾನ: ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ಬುಡಕಟ್ಟು ಸಚಿವರಿಗೆ ಧನ್ಯವಾದ ತಿಳಿಸಿದ ಕರ್ನಾಟಕದ ಸಂಸದರು

| Updated By: ಆಯೇಷಾ ಬಾನು

Updated on: Dec 20, 2022 | 7:06 AM

ಕೇಂದ್ರ ಸರ್ಕಾರವು ಪರಿಶಿಷ್ಟ ಪಂಗಡದ ಪಟ್ಟಿಗೆ ಬೆಟ್ಟ ಕುರುಬ ಜನಾಂಗವನ್ನು ಸೇರಿಸಿರುವುದರಿಂದ ಹಲವು ಅನುಕೂಲಗಳು ಈ ಜನಾಂಗಕ್ಕೆ ದೊರೆಯಲಿವೆ. ಇದರೊಂದಿಗೆ ಆ ಜನಾಂಗದ ಸರ್ವತೋಮುಖ ವಿಕಾಸಕ್ಕೆ ಒಂದು ಮಹತ್ವಪೂರ್ಣ ಮಾರ್ಗ ದೊರಕಿದಂತಾಗಿದೆ.

ಬೆಟ್ಟ ಕುರುಬ ಜನಾಂಗಕ್ಕೆ ಎಸ್ ಟಿ ಸ್ಥಾನಮಾನ: ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ಬುಡಕಟ್ಟು ಸಚಿವರಿಗೆ ಧನ್ಯವಾದ ತಿಳಿಸಿದ ಕರ್ನಾಟಕದ ಸಂಸದರು
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ಕರ್ನಾಟಕದ ಸಂಸದರಿಂದ ಬುಡಕಟ್ಟು ಸಚಿವ ಅರ್ಜುನ್ ಮುಂಡಾಗೆ ಭೇಟಿ
Follow us on

ಬೆಳಗಾವಿ: ಚಳಿಗಾಲದ ಸಂಸತ್ತಿನ ಅಧಿವೇಶನದಲ್ಲಿ(Belagavi Winter Session) ಇಂದು(ಡಿ.20) ಸಂವಿಧಾನದ ಪರಿಶಿಷ್ಟ ಪಂಗಡ ಕಾನೂನಿಗೆ ನಾಲ್ಕನೇ ತಿದ್ದುಪಡಿ ತರುವುದರ ಮೂಲಕ ರಾಜ್ಯದ ಬೆಟ್ಟ ಕುರುಬ ಜನಾಂಗವನ್ನು(Betta Kuruba Community) ಪರಿಶಿಷ್ಟ ಪಂಗಡ ಪಟ್ಟಿಗೆ(ST Status) ಸೇರಿಸುವ ಮಹತ್ವದ ಕಾರ್ಯ ಅನುಷ್ಠಾನವಾಗಿದೆ. ಈ ಹಿನ್ನಲೆಯಲ್ಲಿ ಕರ್ನಾಟಕದ ಸಂಸದರು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿಯವರ(Pralhad Joshi) ನೇತೃತ್ವದಲ್ಲಿ ನಿನ್ನೆ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡ‌ ಅವರನ್ನು ಭೇಟಿ ಮಾಡಿ ಧನ್ಯವಾದಗಳನ್ನು ಅರ್ಪಿಸಿದರು.

ಕಳೆದ ಹಲವು ವರ್ಷಗಳಿಂದ ಬೆಟ್ಟ ಕುರುಬ ಜನಾಂಗವು ತಮ್ಮನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದರು. ಇದನ್ನು ಗಮನಕ್ಕೆ ತೆಗೆದುಕೊಂಡ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಬೆಟ್ಟ ಕುರುಬ ಜನಾಂಗವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವ ಮೂಲಕ ಅವರ ಬೇಡಿಕೆಯನ್ನು ಪೂರೈಸಿದೆ‌.

ಇದನ್ನೂ ಓದಿ:ಬೆಂಗಳೂರಿನಲ್ಲಿನ ರಕ್ಷಣಾ ಇಲಾಖೆಯ ಜಮೀನನ್ನು ಬಿಬಿಎಂಪಿಗೆ ವರ್ಗಾಯಿಸುವಂತೆ ಸಂಸತ್ತಿನಲ್ಲಿ ಪಿ ಸಿ ಮೋಹನ್​ ಮನವಿ 

ಕೇಂದ್ರ ಸರ್ಕಾರವು ಪರಿಶಿಷ್ಟ ಪಂಗಡದ ಪಟ್ಟಿಗೆ ಬೆಟ್ಟ ಕುರುಬ ಜನಾಂಗವನ್ನು ಸೇರಿಸಿರುವುದರಿಂದ ಹಲವು ಅನುಕೂಲಗಳು ಈ ಜನಾಂಗಕ್ಕೆ ದೊರೆಯಲಿವೆ. ಇದರೊಂದಿಗೆ ಆ ಜನಾಂಗದ ಸರ್ವತೋಮುಖ ವಿಕಾಸಕ್ಕೆ ಒಂದು ಮಹತ್ವಪೂರ್ಣ ಮಾರ್ಗ ದೊರಕಿದಂತಾಗಿದೆ.

ಈ ದಿನದ ಅಧಿವೇಶನ ಕಲಾಪ ಮುಕ್ತಾಯಗೊಂಡ ನಂತರ ಕರ್ನಾಟಕದ ಸಂಸದರಾದ ಉಮೇಶ್ ಜಾಧವ್, ಎಸ್ ಮುನಿಸ್ವಾಮಿ, ದೇವೇಂದ್ರಪ್ಪ, ಅಣ್ಣಾ ಸಾಹೇಬ್ ಜೊಲ್ಲೆ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ನೇತೃತ್ವದಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡ‌ ಅವರನ್ನು ಭೇಟಿ ಮಾಡಿ ಧನ್ಯವಾದಗಳನ್ನು ಅರ್ಪಿಸಿದರು. ಬೆಟ್ಟಕುರುಬ ಜನಾಂಗವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರು ಪ್ರಮುಖ ಪಾತ್ರವಹಿಸಿದ್ದರು. ಈ ಹಿನ್ನಲೆ ಕರ್ನಾಟಕದ ಸಂಸದರು ಕೃತಜ್ಞತೆ ಅರ್ಪಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:59 am, Tue, 20 December 22