ಬೆಳಗಾವಿ, ಆಗಸ್ಟ್.01: ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆ ಆಗುತ್ತಿದ್ದು, ಸಪ್ತ ನದಿಗಳು ಹರಿಯುವ ಬೆಳಗಾವಿ (Belagavi) ಜಿಲ್ಲೆಯಲ್ಲಿ ಪ್ರವಾಹ ಎದುರಾಗಿದೆ. ಗ್ರಾಮಗಳು, ಸಾವಿರಾರು ಎಕರೆ ಜಮೀನು, ಸೇತುವೆಗಳು ಮುಳುಗಿ ಜನರ ಬದುಕು ಬೀದಿಗೆ ಬಂದಿದೆ. ಇನ್ನು ಕೃಷ್ಣಾ ನದಿಯಿಂದ 3 ಲಕ್ಷ ಕ್ಯೂಸೆಕ್ ನೀರು ಮತ್ತು ಘಟಪ್ರಭಾದಿಂದ 73 ಸಾವಿರ ಕ್ಯೂಸೆಕ್‌ಗಿಂತ ಹೆಚ್ಚು ನೀರನ್ನು ಹರಿಬಿಡುತ್ತಿರುವ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಕೃಷ್ಣಾ ಹಾಗೂ ಘಟಪ್ರಭಾ ನದಿಯ ವ್ಯಾಪ್ತಿಯಲ್ಲಿ 44ಕ್ಕೂ ಹೆಚ್ಚು ಸೇತುವೆಗಳು ಜಲಾವೃತಗೊಂಡು ರಸ್ತೆ ಸಾರಿಗೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಬೆಳಗಾವಿ ಮತ್ತು ಮಹಾರಾಷ್ಟ್ರದ ಮೀರಜ್ ನಡುವೆ ಪ್ರಯಾಣಿರ ಅನುಕೂಲಕ್ಕಾಗಿ ವಿಶೇಷ ಪ್ಯಾಸೆಂಜರ್ ರೈಲು ಓಡಾಟ ನಡೆಸಲಿದೆ.
ಭಾರಿ ಮಳೆಯಿಂದಾಗಿ ರಸ್ತೆ ಮಾರ್ಗ ಸ್ಥಗಿತಗೊಂಡಿದ್ದು ಬೆಳಗಾವಿ ಮತ್ತು ಮಹಾರಾಷ್ಟ್ರದ ಮೀರಜ್ ನಡುವೆ ಪ್ರತಿ ದಿನ ಪ್ರಯಾಣ ಬೆಳೆಸುತ್ತಿದ್ದ ಪ್ರಯಾಣಿಕರಿಗೆ ಅನುಕೂಲವಾಗಲೆಂದು ದಕ್ಷಿಣ ನೈರುತ್ಯ ರೈಲ್ವೆ ಬೆಳಗಾವಿ-ಮೀರಜ್ ನಡುವೆ ವಿಶೇಷ ಪ್ಯಾಸೆಂಜರ್ ರೈಲು ಓಡಾಟದ ಸೌಕರ್ಯ ಕಲ್ಪಿಸಿದೆ. ಆಗಸ್ಟ್ 1 ರಿಂದ 4ರ ವರೆಗೆ ಪ್ಯಾಸೆಂಜರ್ ವಿಶೇಷ ರೈಲು ಓಡಾಡಲಿದೆ.
ಇದನ್ನೂ ಓದಿ: Karnataka Rains: ಕರ್ನಾಟಕದಾದ್ಯಂತ ಆಗಸ್ಟ್ 6ರವರೆಗೆ ಭಾರಿ ಮಳೆ
📢Attention passengers:
SWR has decided to run special unreserved trains between #Belagavi and #Miraj in the wake of disruption of road connectivity in the region due to heavy rainfall.#SWRupdates pic.twitter.com/U9EbnPvfbm— South Western Railway (@SWRRLY) July 31, 2024
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ