ಬೆಳಗಾವಿ: ಕೂಸು ಹುಟ್ಟುವುದಕ್ಕೂ ಮೊದಲೇ ಕುಲಾವಿ ಹೊಲಿಸೋದು ಬೇಡ. ಮೊದಲು ನಮ್ಮ ಪಕ್ಷದ 125 ಶಾಸಕರು ಆಯ್ಕೆಯಾಗಲಿ. ಸಿಎಂ ಯಾರಾಗಬೇಕೆಂದು ಶಾಸಕಾಂಗ ಸಭೆಯಲ್ಲಿ ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನ (High Command) ಮಾಡುತ್ತೆ. ಸಿಎಂ ಸ್ಥಾನಕ್ಕೆ ಈಗಲೇ ಯಾರೂ ಗುದ್ದಾಡುತ್ತಿಲ್ಲ, ಜಿದ್ದಿಗೆ ಬಿದ್ದಿಲ್ಲ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಹೇಳಿಕೆ ನೀಡಿದರು. ಮುಖ್ಯಮಂತ್ರಿ ರೇಸ್ಗಾಗಿ ಕಾಂಗ್ರೆಸ್ನಲ್ಲಿ ಒಳ ಜಗಳ ವಿಚಾರವಾಗಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಅವರು ಮಾತನಾಡಿದರು. ಸಿದ್ದರಾಮಯ್ಯನವರ ಹುಟ್ಟುಹಬ್ಬ ಎಲ್ಲರೂ ಕೂಡಿ ಮಾಡುತ್ತಿದ್ದೇವೆ. ರಾಜಕೀಯದಲ್ಲಿ 40 ವರ್ಷ ಏರಿಳಿತವನ್ನು ಅವರು ಕಂಡಿದ್ದಾರೆ. ಪರ, ವಿರೋಧ ಎಂಬುವುದಿಲ್ಲ, ಎಲ್ಲರೂ ಸೇರಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಸಿದ್ಧರಾಮಯ್ಯ ಹೇಳಿಕೆಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಮರ್ಥನೆ:
ಸಿದ್ಧರಾಮಯ್ಯ ನಾನೆ ಸಿಎಂ ಆಗುತ್ತೇನೆಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ನಾನೆ ಸಿಎಂ ಆಗ್ತೇನೆಂದು ಇಂಗಿತ ವ್ಯಕ್ತ ಪಡಿಸಿದ್ದು ನಾವೆಲ್ಲೂ ಕೇಳಿಲ್ಲವಲ್ಲ. ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಮುಂಚೆಯಿಂದನೂ ಒಂದು ಪದ್ಧತಿ ಇದೆ. ಶಾಸಕರು ಆಯ್ಕೆಯಾಗಬೇಕು, ಶಾಸಕರ ಸಭೆ, ಹೈ ಕಮಾಂಡ್ ತೀರ್ಮಾನವಾಗಬೇಕು, ಶಾಸಕರು ತೀರ್ಮಾನ ತೆಗೆದುಕೊಳ್ಳಬೇಕು. ಇಷ್ಟೆಲ್ಲ ಇದೆ, ಇನ್ನೂ ಚುನಾವಣೆಯಾಗಿಲ್ಲ. ರಿಸಲ್ಟ್ ಬಂದಿಲ್ಲ ಈಗಲೇ ಅದನ್ನ ಹೇಳಲಿಕ್ಕೆ ಆಗಲ್ಲ. ಸಿದ್ಧರಾಮಯ್ಯ ಸಾಹೇಬ್ರು ಇದನ್ನೆ ಹೇಳಿದ್ದಾರೆಂದು ಸಿದ್ಧರಾಮಯ್ಯ ಹೇಳಿಕೆಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಮರ್ಥನೆ ನೀಡಿದರು.
ಸತೀಶ್ ಜಾರಕಿಹೊಳಿ ಜೊತೆ ಲಕ್ಷ್ಮೀ ಹೆಬ್ಬಾಳ್ಕರ್ ಸೆಲ್ಫಿ:
ಕುಡಚಿ ವಿಧಾನಸಭಾ ಕೇತ್ರದ ಕಾಂಗ್ರೆಸ್ ಪಕ್ಷ ಸಂಘಟನೆಗಾಗಿ ಹಾರೂಗೇರಿಯಲ್ಲಿ ಸೈಕಲ್ ಜಾಥಾ ಆಯೋಜಿಸಲಾಗಿತ್ತು. ಹಾರೂಗೇರಿ ಪಟ್ಟಣದಲ್ಲಿ ಬೃಹತ್ ಸೈಕಲ್ ಜಾಥಾ ವೇದಿಕೆ ಕಾರ್ಯಕ್ರಮ ಕಾಂಗ್ರೆಸ್ ಪಕ್ಷದ ಬೃಹತ್ ಸೈಕಲ್ ಜಾಥಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಜೊತೆ ಲಕ್ಷ್ಮೀ ಹೆಬ್ಬಾಳ್ಕರ್ ನಾಲ್ಕೈದು ಬಾರಿ ಸೆಲ್ಫಿ ಕ್ಲಿಕ್ಕಿಸಿಕೊಂಡರು.
Published On - 10:22 am, Sun, 17 July 22