ಡಿ.4ರಿಂದ ಡಿ.15ರವರೆಗೆ ಸುವರ್ಣಸೌಧದಲ್ಲಿ ಅಧಿವೇಶನ ನಡೆಯಲಿದೆ: ಸಚಿವ ಸತೀಶ್ ಜಾರಕಿಹೊಳಿ

ಡಿ.4ರಿಂದ ಡಿ.15ರವರೆಗೆ ಸುವರ್ಣಸೌಧದಲ್ಲಿ 10 ದಿನ ಅಧಿವೇಶನ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಅಧಿವೇಶನಕ್ಕೆ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಡಿ.4ರಿಂದ ಡಿ.15ರವರೆಗೆ ಸುವರ್ಣಸೌಧದಲ್ಲಿ ಅಧಿವೇಶನ ನಡೆಯಲಿದೆ: ಸಚಿವ ಸತೀಶ್ ಜಾರಕಿಹೊಳಿ
ಸಚಿವ ಸತೀಶ್ ಜಾರಕಿಹೊಳಿ
Edited By:

Updated on: Oct 21, 2023 | 9:37 PM

ಬೆಳಗಾವಿ, ಅಕ್ಟೋಬರ್​​ 21: ಡಿ.4ರಿಂದ ಡಿ.15ರವರೆಗೆ ಸುವರ್ಣಸೌಧದಲ್ಲಿ 10 ದಿನ ಅಧಿವೇಶನ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಅಧಿವೇಶನಕ್ಕೆ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ಈ ಬಾರಿ ಅಧಿವೇಶನ ಅದ್ದೂರಿಯಾಗಿ ಮಾಡೋಣ ಎಂದಿದ್ದಾರೆ.

ಬಿಜೆಪಿ ಶಾಸಕ ಅಭಯ ಪಾಟೀಲ್ ವಿರುದ್ಧ ಸಚಿವ ಜಾರಕಿಹೊಳಿ ವಾಗ್ದಾಳಿ 

ತೆರಿಗೆ ಏರಿಕೆ ಸಂಬಂಧ ಮೂರು ವರ್ಷಗಳಿಂದ ಪತ್ರ ವ್ಯವಹಾರ ನಡೆದಿದೆ. ಕರ ಹೆಚ್ಚಳದ ಪತ್ರದಲ್ಲಿ ತಿದ್ದುಪಡಿ ಆಗಿದೆ ಎಂಬ ವಿಚಾರಕ್ಕೆ ಘರ್ಷಣೆ ಇದು. ಭ್ರಷ್ಟಾಚಾರ, ಕಳವು ಅಲ್ಲ ದಿನಾಂಕ ಸಂಬಂಧ ಇಷ್ಟು ದೊಡ್ಡ ಗಲಾಟೆ. ಇದಕ್ಕೆಲ್ಲ ಬಿಜೆಪಿ ಶಾಸಕ ಅಭಯ್ ಪಾಟೀಲ್ ಹಿಂದೆ ಇದ್ದಾರೆ ಎಂದು ಸಚಿವ ಜಾರಕಿಹೊಳಿ ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಶಕ್ತಿ ಪ್ರದರ್ಶನ: ಬೆಳಗಾವಿಯಿಂದ ಡಿಕೆ ಶಿವಕುಮಾರ್ ನಿರ್ಗಮಿಸುತ್ತಿದ್ದಂತೆ ಜಿಲ್ಲೆಗೆ ಆಗಮಿಸಿದ ಕಾಂಗ್ರೆಸ್ ಶಾಸಕರು

ಕಮಿಷನರ್ ಅವರ ಮಾತು ಕೇಳಬೇಕು ಎಲ್ಲವು ಕಂಟ್ರೋಲ್​ನಲ್ಲಿ ಇರಬೇಕು ಅಂತಾ ಮಾಡುತ್ತಿದ್ದಾರೆ. ಇದೊಂದು ಟೈಪಿಂಗ್ ತಪ್ಪು ಅಷ್ಟೇ ಬೇರೆ ಏನೂ ಇಲ್ಲ. ಅಭಯ್ ಪಾಟೀಲ್ ಇಷ್ಟು ದೊಡ್ಡದಾಗಿ ಮಾಡುತ್ತಿದ್ದಾರೆ. ಬೆಳಗ್ಗೆಯಿಂದ ತವಡು ಕುಟ್ಟುವ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರು, ಪುರುಷರು ಎಲ್ಲಾ ಕೆಲಸ ಬಿಟ್ಟು ಕುರಿಸಿದ್ದಾರೆ. ಸಿಓಡಿ ತನಿಖೆ ಆದರೇ ಎಲ್ಲಾ ವಿಚಾರ ಬೆಳಕಿಗೆ ಬರಲಿದೆ. ಸರ್ಕಾರಕ್ಕೆ ಒಂದು ಶಿಫಾರಸ್ಸು ಮಾಡಬೇಕಿದೆ ಅಷ್ಟೇ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಿನ್ನಾಭಿಪ್ರಾಯಗಳಿರಬಹುದು ಆದರೆ ಪಕ್ಷದ ಎಲ್ಲ ನಾಯಕರ ನಡುವೆ ಸಾಮರಸ್ಯವಿದೆ: ಸತೀಶ್ ಜಾರಕಿಹೊಳಿ

ನಾವು ಏನೆ ಇದ್ದರು ಸರ್ಕಾರ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆಯಬೇಕು. ಪಾಲಿಕೆ ಆಯುಕ್ತರ ಐಎಎಸ್ ಪ್ರಮೋಷನ್ ತಡೆಯಲು ಬ್ಲ್ಯಾಕ್ ಮೇಲ್. ಕೇಂದ್ರ ಸರ್ಕಾರ, ಗೃಹ ಸಚಿವ, ಪ್ರಧಾನಿ ಪತ್ರ ಬರೆಯಲು ಆಗಲ್ಲ. ಹಿಂದೆ ಅಭಯ ಪಾಟೀಲ್ ಮಾಡಿದ ಅಕ್ರಮಗಳ ಬಗ್ಗೆಯೂ ತನಿಖೆ ಆಗಲಿ ಎಂದಿದ್ದಾರೆ.

ಎಲ್ಲಾ ಅಕ್ರಮಗಳ ಬಗ್ಗೆ ತನಿಖೆಗೆ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ

ಪೌರಕಾರ್ಮಿಕರ ನೇಮಕಾತಿಯಲ್ಲೂ ಅಕ್ರಮ ನಡೆಸಲಾಗಿದೆ. ಎಲ್ಲಾ ಅಕ್ರಮಗಳ ಬಗ್ಗೆ ತನಿಖೆಗೆ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ಜೈಕಿಸಾನ್ ಖಾಸಗಿ ತರಕಾರಿ ಮಾರುಕಟ್ಟೆಗೆ ಅನುಮತಿ ವಿಚಾರವಾಗಿ ಮಾತನಾಡಿದ್ದು, ಸನ್ಮಾನ್ಯ ಶ್ರೀ ಶ್ರೀ ಶ್ರೀ ಅಭಯ್ ಪಾಟೀಲ್​ರದ್ದು ಎಂದು ವ್ಯಂಗ್ಯವಾಡಿದ್ದಾರೆ. ವಿಶ್ವದಲ್ಲಿ ಎಲ್ಲೂ ನಡೆಯದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಪ್ರಭಾವ ಬೀರಿ ಜೈಕಿಸಾನ್ ಮಾರುಕಟ್ಟೆಗೆ ಅನುಮತಿ ಕೊಡಿಸಿದ್ದಾರೆ. ಬೇಡವೆಂದು ಪತ್ರ ಬರೆದ್ದೂ ಇವರೇ ನಂತರ ಅನುಮತಿ ಕೊಡಿಸಿದ್ದೂ ಇವ್ರೇ. ಆಯುಕ್ತರನ್ನು ಬ್ಲಾಕ್​ಮೇಲ್ ಮಾಡಿದರೆ ಬೇರೆಯವರನ್ನು ಕರೆತರುತ್ತೇವೆ. ಉತ್ತರ ಕೊಡುವ ಶಕ್ತಿಯಿಲ್ಲದೆ ಸಭೆ ಅರ್ಧಕ್ಕೆ ನಿಲ್ಲಿಸಿ ಎದ್ದುಹೋಗಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
Loading...
Unable to load recommendations.
Follow Us