ಶೇ.50ರಷ್ಟು ರಿಯಾಯಿತಿ ಮೇಲೆ ಟ್ರಾಫಿಕ್ ಫೈನ್ ಕಟ್ಟುವ ಅಂತಿಮ ದಿನಾಂಕ 15 ದಿನ ವಿಸ್ತರಣೆಗೆ ನಿರ್ಧಾರ

ವಾಹನ ಸವಾರರ ಬೇಡಿಕೆ, ಟ್ರಾಫಿಕ್‌ ಕಮಿಷನರ್ ಮನವಿ ಹಿನ್ನಲೆ ಟ್ರಾಫಿಕ್ ಫೈನ್ ಕಟ್ಟಲು ನೀಡಿದ್ದ ಗಡುವಿನ ದಿನಾಂಕವನ್ನು ಮತ್ತೆ 15 ದಿನಗಳ ಕಾಲ ವಿಸ್ತರಿಸಲು ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆ ನಿರ್ಧರಿಸಿದೆ. ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಶೇ.50ರಷ್ಟು ರಿಯಾಯಿತಿ ಮೇಲೆ ಟ್ರಾಫಿಕ್ ಫೈನ್ ಕಟ್ಟುವ ಅಂತಿಮ ದಿನಾಂಕ 15 ದಿನ ವಿಸ್ತರಣೆಗೆ ನಿರ್ಧಾರ
ಸಾಂದರ್ಭಿಕ ಚಿತ್ರ
Edited By:

Updated on: Feb 14, 2023 | 9:35 PM

ಬೆಂಗಳೂರು: ವಾಹನ ಸವಾರರ ಬೇಡಿಕೆ, ಟ್ರಾಫಿಕ್‌ ಕಮಿಷನರ್ ಮನವಿ ಹಿನ್ನಲೆ ರಿಯಾಯಿತಿ ಮೇಲೆ ಟ್ರಾಫಿಕ್ ಫೈನ್ (50 percent off on traffic fine) ಕಟ್ಟಲು ನೀಡಿದ್ದ ಗಡುವನ್ನು ಮತ್ತೆ 15 ದಿನಗಳ ಕಾಲ ವಿಸ್ತರಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಟ್ರಾಫಿಕ್ ದಂಡವನ್ನು ರಿಯಾಯಿತಿ ಮೇಲೆ ಪಾವತಿಸುವ ದಿನಾಂಕ ಫೆಬ್ರವರಿ 11ರಂದು ಮುಕ್ತಾಯವಾಗಿದೆ. ಅದಾಗ್ಯೂ, ಅನೇಕ ಸವಾರರು ದಂಡ ಪಾವತಿಸಲು ಬಾಕಿಯಾಗಿದ್ದು, ರಿಯಾಯಿತಿ ಆಫರ್ ದಿನಾಂಕ ವಿಸ್ತರಿಸುವಂತೆ ಮನವಿ ಮಾಡಿದ್ದರು. ಈ ನಿಟ್ಟಿನಲ್ಲಿ ಇಂದು ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಸಂಚಾರಿ ದಂಡ ಪಾವತಿ ಅವಧಿ 15 ದಿನಕ್ಕೆ ವಿಸ್ತರಿಸುವ ಪ್ರಸ್ತಾವನೆ ಮುಂದಿಡಲಾಯಿತು.

ಅಧಿಸೂಚನೆ ದಿನದಿಂದ 15ದಿನ ರಿಯಾಯಿತಿ ಮೇಲೆ ದಂಡ ಪಾವತಿಸಲು ಸಮಯಾವಕಾಶ ನೀಡುವ ಬಗ್ಗೆ ಉನ್ನತ ಮಟ್ಟದ ಸಭೆಯಲ್ಲಿ ನಿರ್ಣಯ ಕೈಗೊಂಡು ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಮುಂದಿಡಲು ನಿರ್ಧರಿಸಲಾಯಿತು. ಪೊಲೀಸ್, ಸಾರಿಗೆ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾ.ಬಿ.ವೀರಪ್ಪ ನೇತೃತ್ವದಲ್ಲಿ ಈ ಸಭೆ ನಡೆಯಿತು. ಸದ್ಯ ಸರ್ಕಾರದ ನಿರ್ಧಾರಕ್ಕೆ ಪೊಲೀಸ್ ಇಲಾಖೆ ಕಾಯುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:45 pm, Tue, 14 February 23