ಬೆಳಗಾವಿ, ಆ.06: ಬೆಳಗಾವಿ ಜಿಲ್ಲೆಯ ಕಿತ್ತೂರು(Kittur) ತಾಲೂಕಿನ ನಿಂಗಾಪುರ ಗ್ರಾಮದ ನಿವಾಸಿಗಳು ರಬ್ಬರ್ ಟ್ಯೂಬ್ಗಳ ಮೇಲೆ ವಿದ್ಯಾರ್ಥಿಗಳು, ಮಹಿಳೆಯರು ಸಂಚಾರ ಮಾಡುತ್ತಿದ್ದರು. ಕಳೆದ 22 ವರ್ಷಗಳಿಂದ ಇಲ್ಲಿರುವ ಸುಮಾರು ಮೂವತ್ತಕ್ಕೂ ಅಧಿಕ ಕುಟುಂಬಗಳು ಪರಿತಪ್ಪಿಸುತ್ತಿದ್ದವು. ಅದರಲ್ಲೂ ಇಪ್ಪತ್ತಕ್ಕೂ ಅಧಿಕ ವಿದ್ಯಾರ್ಥಿಗಳು ದಿನ ಬೆಳಗಾದರೆ ಇದೇ ಟ್ಯೂಬ್ಗಳ ಮೇಲೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ದಾರ ಹಿಡಿದುಕೊಂಡು ಓಡಾಡುತ್ತಿದ್ದರು. ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಇಷ್ಟಿದ್ದರೂ ಅನಿವಾರ್ಯವಾಗಿ ಇವರೆಲ್ಲರೂ ಕೆರೆಯ ಹಿನ್ನೀರು ದಾಟಲು ಇದೇ ರಬ್ಬರ್ ಟ್ಯೂಬ್ಗಳ ಮೇಲೆಯೇ ಓಡಾಟ ನಡೆಸುತ್ತಿದ್ದರು. ಈ ಕುರಿತು ಟಿವಿ9 ತಂಡ ಸ್ಥಳಕ್ಕೆ ಭೇಟಿ ನೀಡಿ ಗ್ರೌಂಡ್ ರಿಪೋರ್ಟ್ ಮೂಲಕ ವಿಸ್ತೃತ ವರದಿಯನ್ನ ಬಿತ್ತಿರಿಸಿತ್ತು. ಇದನ್ನ ಗಮನಿಸಿದ ಸ್ಥಳೀಯ ಶಾಸಕ ಬಾಬಾಸಾಹೇಬ್ ಪಾಟೀಲ್ ಕೂಡಲೇ ಸ್ಥಳಕ್ಕೆ ಬಂದಿದ್ದಾರೆ.
ಟಿವಿ9, ಬೆಳಗ್ಗೆ 9 ಗಂಟೆಗೆ ಸುದ್ದಿ ಬಿತ್ತರ ಮಾಡಿದ್ದು, ಹತ್ತೂವರೆಗೆ ಶಾಸಕರು ಬಂದಿದ್ದಾರೆ. ಇತ್ತ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಸ್ಥಳೀಯ ತಹಶೀಲ್ದಾರ್ ರವೀಂದ್ರ ಹಾದಿಮನಿಗೆ ಕರೆ ಮಾಡಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡುವಂತೆ ಸೂಚಿಸುತ್ತಾರೆ. ಇದೇ ವೇಳೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ಪಿಡಿಒ ಸೇರಿ ತಹಶೀಲ್ದಾರ್ ಜೊತೆಗೆ ಸ್ಥಳಕ್ಕೆ ಬಂದ ಶಾಸಕ ಪರಿಶೀಲನೆ ನಡೆಸಿ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು. ಜೊತೆಗೆ ತುರ್ತಾಗಿ ಬೋಟ್ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಡಿಸಿ ಅವರ ಜೊತೆಗೆ ಮಾತನಾಡಿದರು. ಇತ್ತ ಎರಡು ಕೋಟಿ ವೆಚ್ಚದಲ್ಲಿ ಸೇತುವೆ ಎಸ್ಟಿಮೆಟ್ ಮಾಡಿ ಸರ್ಕಾರಕ್ಕೆ ಸಲ್ಲಿಸಿ ಸೇತುವೆ ನಿರ್ಮಾಣದ ಭರವಸೆಯನ್ನ ಶಾಸಕರು ನೀಡಿದರು.
ಇದನ್ನೂ ಓದಿ:ವರುಣ ತಂದಿಟ್ಟ ಆಪತ್ತು; ವಿದ್ಯಾರ್ಥಿಗಳಿಗೆ ಗಾಳಿ ತುಂಬಿದ ಟ್ಯೂಬೇ ದೋಣಿ, ಜೀವ ಭಯದಲ್ಲೇ ಶಾಲೆಗೆ ಹೋಗುವ ಅನಿವಾರ್ಯತೆ
ಇನ್ನು ಟಿವಿ9 ವರದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ, ಇಂದೇ ಬೋಟ್ ವ್ಯವಸ್ಥೆ ಮಾಡಲು ತಹಶೀಲ್ದಾರ್ ಅವರಿಗೆ ಡಿಸಿ ಮೊಹಮ್ಮದ್ ರೋಷನ್ ಸೂಚನೆ ನೀಡಿದರು ಅದರಂತೆ ಎಸ್ ಡಿ ಆರ್ ಎಫ್ ಜೊತೆಗೆ ಚರ್ಚೆ ಮಾಡಿದ ಡಿಸಿ ಒಂದು ಫೈಬರ್ ಬೋಟ್ ನೀಡುವಂತೆ ಕೇಳಿಕೊಂಡರು. ಅದರಂತೆ ಖುದ್ದು ಒಂದು ಎಸ್ಡಿಆರ್ಎಫ್ ತಂಡ ಕಿತ್ತೂರು ತಹಶೀಲ್ದಾರ್ ಕಚೇರಿಗೆ ಆಗಮಿಸಿ, ಅಲ್ಲಿಂದ ನಿಂಗಾಪುರ ಗ್ರಾಮಕ್ಕೆ ತೆರಳಿ ಬೋಟ್ ಓಡಾಟ ನಡೆಸಿ ಯಾವ ರೀತಿಯಾಗಿ ಬಳಕೆ ಮಾಡಬೇಕು ಅನ್ನೋದನ್ನ ಕೂಡ ತಿಳಿಸಿದರು. ಟಿವಿ9 ವರದಿ ಮಾಡಿದ ಕೇವಲ ಎಂಟು ಗಂಟೆಗೆ ಬೋಟ್ ಕೂಡ ಬಂದಿದ್ದು, ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡುವಂತೆ ಮಾಡಿದೆ. ಟಿವಿ9 ವರದಿಗೆ ಇಡೀ ಗ್ರಾಮಸ್ಥರು ಧನ್ಯವಾದ ಹೇಳಿದ್ದಾರೆ.
ಒಟ್ಟಿನಲ್ಲಿ ಹಲವಾರು ವರ್ಷಗಳಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದ ಜನರು, ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಯಾವ ಅಧಿಕಾರಿಗಳು ತಲೆ ಕೆಡಸಿಕೊಳ್ಳದ ವಿಚಾರವನ್ನ ಒಂದು ವರದಿ ಬದಲಾವಣೆ ಮಾಡಿ, ಇದೀಗ ಒಂದೇ ದಿನದಲ್ಲಿ ಬೋಟ್ ವ್ಯವಸ್ಥೆ ಆಗಿದ್ದು ಖುಷಿಯ ವಿಚಾರ. ತುರ್ತಾಗಿ ಸ್ಪಂಧಿಸಿದ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹಾಗೂ ಶಾಸಕ ಬಾಬಾಸಾಹೇಬ್ ಪಾಟೀಲ್ಗೂ ಜನ ಧನ್ಯವಾದ ಹೇಳುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:41 pm, Tue, 6 August 24