ಬೆಳಗಾವಿ: ರಾಮದುರ್ಗದಲ್ಲಿ ಈದ್ ಮಿಲಾದ್ ಹಬ್ಬದಂದು ಹಿಂದೂ ಯುವಕರ ಮೇಲೆ ಹಲ್ಲೆಗೈದಿದ್ದ ಇಬ್ಬರು ಅಪ್ರಾಪ್ತರು ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಎರಡು ದಿನಗಳ ಹಿಂದೆ ಈದ್ ಮಿಲಾದ್ ಹಬ್ಬದಂದು ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದು ಪರಸ್ಪರ ಹೊಟೆದಾಡಿಕೊಂಡಿದ್ದರು. ಪ್ರಕರಣ ಸಂಬಂಧ ದೂರು ಪ್ರತಿ ದೂರು ದಾಖಲಾಗಿತ್ತು. ಒಟ್ಟು ಆರು ಜನರ ವಿರುದ್ಧ ರಾಮದುರ್ಗ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ಈಗ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಗೋಪಾಲ್ ಬಂಡಿವಡ್ಡರ, ರವಿ ಬಂಡಿವಡ್ಡರ, ನಂಜುಂಡಿ ಬಂಡಿವಡ್ಡರ ಎಂಬ ಯುವಕರ ಮೇಲೆ ಹಲ್ಲೆಯಾಗಿದ್ದು ಗಾಯಗೊಂಡ ಮೂವರಿಗೆ ರಾಮದುರ್ಗ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಇದನ್ನೂ ಓದಿ: ಗುಂಡೇಟು ಬಿದ್ದರೂ ಉಗ್ರರ ಜೊತೆ ಕಾದಾಡಿದ ಭಾರತೀಯ ಸೇನೆಯ ಶ್ವಾನ; ವೈರಲ್ ವಿಡಿಯೋ ಇಲ್ಲಿದೆ
ಈದ್ ಮಿಲಾದ್ ಹೆಸರಲ್ಲಿ ಶಕ್ತಿ ಪ್ರದರ್ಶನ
ತುಮಕೂರು: ನಗರದ ಬಿಜಿ ಪಾಳ್ಯ ವೃತ್ತದಲ್ಲಿ ಈದ್ ಮಿಲಾದ್ ಹಬ್ಬದ ದಿನ ಮುಸ್ಲಿಂ ಸಮುದಾಯದ ಜನ ಶಕ್ತಿ ಪ್ರದರ್ಶಿಸಿದ್ದಾರೆ. ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಸೇರಿದ ಸಾವಿರಾರು ಮುಸ್ಲಿಂ ಸಮುದಾಯದ ಜನ ಹಸಿರು ಬಾವುಟ ಹಿಡಿದು ಡಾ ರಾಜ್ ರವರ ಹುಟ್ಟಿದರೇ ಕನ್ನಡ ನಾಡಿನಲ್ಲಿ ಹುಟ್ಟಬೇಕು ಹಾಡಿಗೆ ಕುಣಿದು ಕುಪ್ಪಳಿಸಿ ಹಿಂದೂ ಮುಸ್ಲಿಂ ಬಾಯ್ ಬಾಯ್ ಅಂತಾ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ.
ಈದ್ ಮಿಲಾದ್ ಸಂಭ್ರಮಾಚರಣೆಯಲ್ಲಿ ಲಾಂಗ್ ಹಿಡಿದು ಕುಣಿದ ಯುವಕರು ಅರೆಸ್ಟ್
ಬೆಂಗಳೂರಿನ ಚಿಕ್ಕಪೇಟೆ ವಿಧಾನ ಸಭಾ ಕ್ಷೇತ್ರದ ವಾರ್ಡ್ ನಂಬರ್ 144 ಸಿದ್ದಾಪುರದಲ್ಲಿ ಈದ್ ಮಿಲಾದ್ ಹಬ್ಬದ ಮೆರವಣಿಗೆ ವೇಳೆ ಯುವಕರು ಲಾಂಗ್ ಹಿಡಿದು ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿದೆ. ಮೆರವಣಿಗೆ ವೇಳೆ ಸಂಪೂರ್ಣ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಆದ್ರೆ ಪೊಲೀಸರು ಇರದ ಸಂದರ್ಭದಲ್ಲಿ ಯುವಕರು ಡ್ಯಾನ್ಸ್ ಮಾಡಿದ್ದಾರೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಸಹೋದರ ಅಕ್ಬರುದ್ದಿನ್ ಓವೈಸಿ ಮಾಡಿದ ಭಾಷಣಕ್ಕೆ ಡಿಜೆ ಸಾಂಗ್ಸ್ ಬಳಸಿ ಯುವಕರು ಲಾಂಗ್ ಹಿಡಿದು ಸಂಭ್ರಮಿಸಿದ್ದಾರೆ. ಘಟನೆ ಸಂಬಂಧ 14 ಬಾಲಕರು ಸೇರಿದಂತೆ 19 ಜನರನ್ನ ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ