ಗುಂಡೇಟು ಬಿದ್ದರೂ ಉಗ್ರರ ಜೊತೆ ಕಾದಾಡಿದ ಭಾರತೀಯ ಸೇನೆಯ ಶ್ವಾನ; ವೈರಲ್ ವಿಡಿಯೋ ಇಲ್ಲಿದೆ

ತನ್ನ ಮೈಮೇಲೆ ಗುಂಡಿನ ದಾಳಿ ನಡೆಸಿದ್ದರೂ ಹೆದರದ ಆ ನಾಯಿ ತನ್ನ ಕಾರ್ಯವನ್ನು ಮುಂದುವರೆಸಿತು. ಅಷ್ಟೇ ಅಲ್ಲದೆ ಇಬ್ಬರು ಭಯೋತ್ಪಾದಕರ ಹತ್ಯೆಗೂ ಕಾರಣವಾಯಿತು.

ಗುಂಡೇಟು ಬಿದ್ದರೂ ಉಗ್ರರ ಜೊತೆ ಕಾದಾಡಿದ ಭಾರತೀಯ ಸೇನೆಯ ಶ್ವಾನ; ವೈರಲ್ ವಿಡಿಯೋ ಇಲ್ಲಿದೆ
ಭಾರತೀಯ ಸೇನೆಯ ನಾಯಿ ಜೂಮ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Oct 11, 2022 | 12:03 PM

ಅನಂತ್​ನಾಗ್: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ (Anantnag) ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ಭಯೋತ್ಪಾದಕರ ನಡುವಿನ ಎನ್‌ಕೌಂಟರ್‌ನಲ್ಲಿ (Encounter) ಭಾರತೀಯ ಸೇನೆಯ ನಾಯಿಯೊಂದು ಸೋಮವಾರ ತೀವ್ರವಾಗಿ ಗಾಯಗೊಂಡಿದೆ. ಭಾನುವಾರ ತಡರಾತ್ರಿ ದಕ್ಷಿಣ ಕಾಶ್ಮೀರ ಜಿಲ್ಲೆಯ ತಂಗ್ಪಾವಾ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ ಬಂದ ನಂತರ ಎನ್​ಕೌಂಟರ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು.

ಉಗ್ರರು ಅಡಗಿರುವ ಮನೆಯಿಂದ ಆ ಉಗ್ರರನ್ನು ಹೊರಗೆ ಕರೆತರುವ ಕೆಲಸವನ್ನು ಜೂಮ್ ಎಂಬ ಭಾರತೀಯ ಸೇನೆಯ ನಾಯಿಗೆ ವಹಿಸಲಾಗಿತ್ತು. ಆ ನಾಯಿ ಮನೆಯೊಳಗೆ ಹೋಗಿ ಉಗ್ರರ ಮೇಲೆ ದಾಳಿ ಮಾಡಿತ್ತು. ಈ ಕಾರ್ಯಾಚರಣೆಯ ಸಮಯದಲ್ಲಿ ಆ ನಾಯಿಯ ಮೇಲೆ 2 ಬಾರಿ ಗುಂಡಿನ ದಾಳಿ ನಡೆಸಿದ್ದರಿಂದ ನಾಯಿಗೆ ಗಂಭೀರವಾದ ಗಾಯಗಳಾಗಿವೆ.

ತನ್ನ ಮೈಮೇಲೆ ಗುಂಡಿನ ದಾಳಿ ನಡೆಸಿದ್ದರೂ ಹೆದರದ ಆ ನಾಯಿ ತನ್ನ ಕಾರ್ಯವನ್ನು ಮುಂದುವರೆಸಿತು. ಅಷ್ಟೇ ಅಲ್ಲದೆ ಇಬ್ಬರು ಭಯೋತ್ಪಾದಕರ ಹತ್ಯೆಗೂ ಕಾರಣವಾಯಿತು. ಜೂಮ್ ಎಂಬ ಆ ನಾಯಿಯನ್ನು ತಕ್ಷಣ ಸೇನೆಯ ಪಶುವೈದ್ಯಕೀಯ ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿ ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಸೇನೆಯ ಚಿನಾರ್ ಕಾರ್ಪ್ಸ್ ವಿಭಾಗವು ಎನ್​ಕೌಂಟರ್ ಕಾರ್ಯಾಚರಣೆಯಲ್ಲಿ ತನ್ನ ಶ್ವಾನ ಪಡೆಯ ಕೊಡುಗೆಯನ್ನು ಗೌರವಿಸಲು ಬ್ರೇವ್‌ಹಾರ್ಟ್‌ನಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ: Terrorists Encounter: ಕಾಶ್ಮೀರದ ಶೋಪಿಯಾನ್​ನಲ್ಲಿ ಸರಣಿ ಎನ್​ಕೌಂಟರ್; ಭದ್ರತಾ ಪಡೆಯಿಂದ ನಾಲ್ವರು ಉಗ್ರರ ಹತ್ಯೆ

ದಕ್ಷಿಣ ಕಾಶ್ಮೀರದಲ್ಲಿ ಜೂಮ್ ಅನೇಕ ಸಕ್ರಿಯ ಕಾರ್ಯಾಚರಣೆಗಳ ಭಾಗವಾಗಿದೆ ಎಂದು ಸೇನಾ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. “ಜೂಮ್ ಬಹಳ ಅತ್ಯುತ್ತಮ ತರಬೇತಿ ಪಡೆದ, ಉಗ್ರ ಮತ್ತು ಬದ್ಧತೆ ಹೊಂದಿರುವ ಶ್ವಾನ. ಭಯೋತ್ಪಾದಕರನ್ನು ಪತ್ತೆಹಚ್ಚಲು ಮತ್ತು ಕೆಳಗುರುಳಿಸಲು ಅವರಿಗೆ ತರಬೇತಿ ನೀಡಲಾಗಿದೆ,” ಎಂದು ಅಧಿಕಾರಿ ಹೇಳಿದ್ದಾರೆ.

ಆ ಎನ್‌ಕೌಂಟರ್‌ನಲ್ಲಿ ಇಬ್ಬರು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಹತರಾಗಿದ್ದಾರೆ ಮತ್ತು ಅನೇಕ ಸೈನಿಕರು ಗಾಯಗೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಳಿಗಿರಿರಂಗನ ಬನದಲ್ಲಿ ಜಾಂಬವಂತನ ಕಾದಾಟ, ವಿಡಿಯೋ ನೋಡಿ
ಬಿಳಿಗಿರಿರಂಗನ ಬನದಲ್ಲಿ ಜಾಂಬವಂತನ ಕಾದಾಟ, ವಿಡಿಯೋ ನೋಡಿ
ಬಿಗ್ ಬಾಸ್ ಶೋನಿಂದ ಸಿಕ್ಕ ಸಂಭಾವನೆ ಬಗ್ಗೆ ನನಗೆ ಬೇಸರ ಇಲ್ಲ: ಭವ್ಯಾ ಗೌಡ
ಬಿಗ್ ಬಾಸ್ ಶೋನಿಂದ ಸಿಕ್ಕ ಸಂಭಾವನೆ ಬಗ್ಗೆ ನನಗೆ ಬೇಸರ ಇಲ್ಲ: ಭವ್ಯಾ ಗೌಡ
ನನ್ನನ್ನು ಹುದ್ದೆಯಿಂದ ಸರಿಸಬೇಕೆನ್ನುವವರಿಗೆ ಒಳ್ಳೆಯದಾಗಲಿ: ವಿಜಯೇಂದ್ರ
ನನ್ನನ್ನು ಹುದ್ದೆಯಿಂದ ಸರಿಸಬೇಕೆನ್ನುವವರಿಗೆ ಒಳ್ಳೆಯದಾಗಲಿ: ವಿಜಯೇಂದ್ರ
ಪಕ್ಷದ ವಿದ್ಯಮಾನಗಳು ಶಿವಕುಮಾರ್​ರನ್ನು ದೆಹಲಿಗೆ ಹೋಗುವಂತೆ ಮಾಡಿದವೇ?
ಪಕ್ಷದ ವಿದ್ಯಮಾನಗಳು ಶಿವಕುಮಾರ್​ರನ್ನು ದೆಹಲಿಗೆ ಹೋಗುವಂತೆ ಮಾಡಿದವೇ?
ಬೆಳ್ಳಿ ಪರದೆ ಮೇಲೆ ‘ತ್ರಿವ್ಯ’ ಜೋಡಿ, ಭವ್ಯಾ ಗೌಡ ಹೇಳಿದ್ದೇನು?
ಬೆಳ್ಳಿ ಪರದೆ ಮೇಲೆ ‘ತ್ರಿವ್ಯ’ ಜೋಡಿ, ಭವ್ಯಾ ಗೌಡ ಹೇಳಿದ್ದೇನು?
ಸಂಪಾದನೆ ಎಷ್ಟೇ ಇರಲಿ ಉಳಿತಾಯ ಮಾಡಲೇಬೇಕು: ಭವ್ಯಾ ಗೌಡ
ಸಂಪಾದನೆ ಎಷ್ಟೇ ಇರಲಿ ಉಳಿತಾಯ ಮಾಡಲೇಬೇಕು: ಭವ್ಯಾ ಗೌಡ
ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!