Terrorists Encounter: ಅಗ್ನಿವೀರ್ ರ್ಯಾಲಿ ಮೇಲೆ ದಾಳಿಗೆ ಸಂಚು; ಕಾಶ್ಮೀರದ ಬರಾಮುಲ್ಲಾದಲ್ಲಿ ಇಬ್ಬರು ಉಗ್ರರ ಎನ್‌ಕೌಂಟರ್
ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಅಗ್ನಿವೀರ್ ನೇಮಕಾತಿ ರ್ಯಾಲಿ ಮೇಲೆ ದಾಳಿ ಮಾಡಲು ಅವರು ಪ್ಲಾನ್ ಮಾಡಿದ್ದರು. ಈ ವೇಳೆ ಬರಾಮುಲ್ಲಾದ ಗ್ರಾಮದ 2 ಮನೆಗಳು ಕೂಡ ಧ್ವಂಸವಾಗಿವೆ.
ಶ್ರೀನಗರ: ಜಮ್ಮು ಕಾಶ್ಮೀರದ ಬರಾಮುಲ್ಲಾದಲ್ಲಿ (Baramulla) ಶುಕ್ರವಾರ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಜೈಶ್-ಎ-ಮೊಹಮ್ಮದ್ (Jaish-e-Mohammed) ಸಂಘಟನೆಯ ಉಗ್ರರನ್ನು ಹತ್ಯೆ ಮಾಡಲಾಗಿದೆ. ಈ ಭಯೋತ್ಪಾದಕರು ಬರಾಮುಲ್ಲಾದಲ್ಲಿ ಅಗ್ನಿವೀರ್ (Agniveer) ಸೇನಾ ನೇಮಕಾತಿ ರ್ಯಾಲಿ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು. ಬರಾಮುಲ್ಲಾದ ಪಟ್ಟಾನ್ ಪ್ರದೇಶದ ಯಡಿಪೋರಾ ಗ್ರಾಮದಲ್ಲಿ ಈ ಎನ್‌ಕೌಂಟರ್ (Encounter) ನಡೆದಿದ್ದು, ಅವರು ಆ ಗ್ರಾಮದಲ್ಲಿ ಅಡಗಿಕೊಂಡಿದ್ದರು. ಈ ಬಗ್ಗೆ ಭದ್ರತಾ ಪಡೆಗಳಿಗೆ ಸುಳಿವು ಸಿಕ್ಕಿತ್ತು. ಎಸ್‌ಎಸ್‌ಬಿ ಮತ್ತು ಭಾರತೀಯ ಸೇನೆಯು ಶೋಧ ಕಾರ್ಯಾಚರಣೆಯನ್ನು ನಡೆಸಿದಾಗ ಸೇನೆಯ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದರು. ಆಗ ಭದ್ರತಾ ಪಡೆಗಳು ಕೂಡ ಗುಂಡಿನ ದಾಳಿಯನ್ನು ಪ್ರಾರಂಭಿಸಿದವು.
ಹತ್ಯೆಯಾದ ಇಬ್ಬರು ಉಗ್ರರನ್ನು ಕಲಾಂಪೋರಾ ಪುಲ್ವಾಮಾ ನಿವಾಸಿ ಯವರ್ ಶಾಫಿ ಭಟ್ ಮತ್ತು ಶೋಪಿಯಾನ್‌ನ ವೆಶ್ರೋ ನಿವಾಸಿ ಅಮೀರ್ ಹುಸೇನ್ ಭಟ್ ಎಂದು ಗುರುತಿಸಲಾಗಿದೆ. ಅವರು ಇತ್ತೀಚೆಗೆ ಭಯೋತ್ಪಾದನೆಗೆ ಸೇರಿದ್ದರು ಮತ್ತು ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ದಾಳಿಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ಎನ್‌ಕೌಂಟರ್: ಇಬ್ಬರು ಉಗ್ರರ ಹತ್ಯೆ, ಶಸ್ತ್ರಾಸ್ತ್ರ ವಶಕ್ಕೆ
ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಅಗ್ನಿವೀರ್ ನೇಮಕಾತಿ ರ್ಯಾಲಿ ಮೇಲೆ ದಾಳಿ ಮಾಡಲು ಅವರು ಪ್ಲಾನ್ ಮಾಡಿದ್ದರು. ಎನ್‌ಕೌಂಟರ್ ನಡೆದ ಸ್ಥಳದಿಂದ ಮೂರು ಮ್ಯಾಗಜೀನ್‌ಗಳಿರುವ AKS74U ರೈಫಲ್ ಮತ್ತು ಮ್ಯಾಗಜೀನ್‌ನೊಂದಿಗೆ ಪಿಸ್ತೂಲ್ ಸೇರಿದಂತೆ ದೋಷಾರೋಪಣೆಯ ಸಾಮಗ್ರಿಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
Two terrorists killed in an encounter with J&K Police-Indian Army in Yedipora Village, Haiderbegh, Pattan in Baramulla district. 2 AK rifles, 1 Pistol and other war-like stores recovered: PRO (Defence), Srinagar
— ANI (@ANI) September 30, 2022
ನಿನ್ನೆಯಿಂದ ಇನ್ನೂ ಎನ್‌ಕೌಂಟರ್ ಕಾರ್ಯಾಚರಣೆ ಮುಂದುವರೆಯುತ್ತಲೇ ಇದೆ. ಈ ವೇಳೆ ಬರಾಮುಲ್ಲಾದ ಗ್ರಾಮದ 2 ಮನೆಗಳು ಕೂಡ ಧ್ವಂಸವಾಗಿವೆ. ಭದ್ರತಾ ಪಡೆಗಳು ಸೆಪ್ಟೆಂಬರ್‌ನಲ್ಲಿ 9 ವಿಭಿನ್ನ ಗುಂಡಿನ ಚಕಮಕಿಗಳಲ್ಲಿ 16 ಉಗ್ರರನ್ನು ಹತ್ಯೆ ಮಾಡಿದೆ. ಈ ವರ್ಷ ವಿವಿಧ ಉಗ್ರಗಾಮಿ ವಿರೋಧಿ ಕಾರ್ಯಾಚರಣೆಗಳಲ್ಲಿ ಹತರಾದ ಉಗ್ರರ ಸಂಖ್ಯೆ 154ಕ್ಕೆ ಏರಿಕೆಯಾಗಿದೆ.