ಬೆಳಗಾವಿ: ರಾಜ್ಯದಲ್ಲಿ ಸದ್ಯ ಎರಡು ಧರ್ಮಗಳ ನಡುವೆ ಸಂಘರ್ಷ ನಡೆಯುತ್ತಿದೆ. ಹಿಜಾಬ್ನಿಂದ (Hijab) ಆರಂಭವಾದ ಗಲಾಟೆ ಆಜಾನ್ ವರೆಗೂ ಬಂದು ನಿಂತಿದೆ. ಹೀಗಿರುವಾಗ ಕಿಡಿಗೇಡಿಗಳು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಸತ್ತಿಗೇರಿ ಮಡ್ಡಿಯಲ್ಲಿ ಮಸೀದಿ (Masjid) ಮೈಕ್ ಹತ್ತಿರ ಕೇಸರಿ ಧ್ವಜ ಕಟ್ಟಿದ್ದಾರೆ. ಮಂಗಳವಾರ ತಡರಾತ್ರಿ ನಡೆದ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ರಾತ್ರಿ ಹೊತ್ತಿಗೆ ಮಸೀದಿ ಮೇಲೆ ಕೇಸರಿ ಧ್ವಜ ಕಟ್ಟಿದ್ದಾರೆ. ಹಿಂದೂ-ಮುಸ್ಲಿಂ ಮುಖಂಡರ ಸಮ್ಮುಖದಲ್ಲಿ ಗ್ರಾಮಸ್ಥರು ಧ್ವಜವನ್ನು ಇಳಿಸಿದ್ದಾರೆ. ಗ್ರಾಮದಲ್ಲಿ ಸದ್ಯ ವಾತಾವರಣ ಶಾಂತವಿದ್ದು, ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.
ಈ ಗ್ರಾಮದಲ್ಲಿ ಎಲ್ಲ ಸಮುದಾಯವರು ಸೇರಿ ಒಟ್ಟು 645 ಜನರು ವಾಸವಿದ್ದಾರೆ. ಈ ಕೃತ್ಯ ಎಸಗಿರುವುದು ಯಾರು? ಎಂದು ಪೊಲೀಸರು ರ್ಶೋಧಕಾರ್ಯ ನಡೆಸುತ್ತಿದ್ದಾರೆ.
ಚೋಟಾ ಪಾಕಿಸ್ತಾನ್ ಎಂದ ವ್ಯಕ್ತಿ:
ಮೈಸೂರಿನಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ರಂಜಾನ್ ದಿನದಂದು ನಂಜನಗೂಡು ತಾಲೂಕಿನ ಕೌಲಂದೆ ಗ್ರಾಮದಲ್ಲಿ ಮುಸ್ಲಿಂ ಬಾಂಧವರು ಒಂದೆಡೆ ಸೇರಿದ್ದರು. ನಮಾಜ್ ಮುಗಿಸಿ ಒಂದು ಕಡೆ ಸೇರಿದ್ದರು. ಈ ವೇಳೆ ವ್ಯಕ್ತಿಯೊಬ್ಬ ವಿಡಿಯೋ ಮಾಡಿದ್ದಾನೆ. ದೃಶ್ಯ ಸೆರೆಹಿಡಿಯುವಾಗ ಆ ವ್ಯಕ್ತಿ ಕೌಲಂದೆ ಗ್ರಾಮ ಚೋಟಾ ಪಾಕಿಸ್ತಾನ್ ಎಂದು ಹೇಳಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಜಾನ್ ಬ್ಯಾನ್ಗೆ ಹಿಂದೂ ಮುಖಂಡರು ಪಟ್ಟು ಹಿಡಿದಿದ್ದಾರೆ. ಆಜಾನ್ ನಿಷೇಧಿಸದಿದ್ದರೆ ದೇವಸ್ಥಾನಗಳಲ್ಲಿ ಸುಪ್ರಭಾತ ಹಾಕಲಾಗುತ್ತದೆ ಎಂದು ಹೇಳಿದ್ದರು. ನೀಡಿದ ಗಡಿ ಮೀರಿದಾಗ ರಾಜ್ಯದಲ್ಲಿ ಸುಪ್ರಭಾತ ಮೊಳಗಿತ್ತು. ಸುಪ್ರಭಾತ ಅಭಿಯಾನ ನಡೆಸಿ ಟಿವಿ9 ಜೊತೆ ಮಾತನಾಡಿದ ಪ್ರಮೋದ್ ಮುತಾಲಿಕ್, ಸುಪ್ರಭಾತ ಅಭಿಯಾನ ಅತ್ಯಂತ ಯಶಸ್ವಿಯಾಗಿದೆ. ಮಸೀದಿ ಮೇಲಿನ ಮೈಕ್ ತೆರವಿಗೆ ನೀಡಿದ್ದ ಗಡುವು ಮುಗಿದಿದೆ. ಗಡುವು ಮುಗಿದರೂ ರಾಜ್ಯ ಸರ್ಕಾರ ಮೈಕ್ ತೆರವುಗೊಳಿಸಿಲ್ಲ. ಆಜಾನ್ ನಿಲ್ಲಿಸಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ
ಮಂಡ್ಯ: ವಿದೇಶಕ್ಕೆ ತೆರಳಿದ ಮುಸ್ಕಾನ್; ಮದೀನಾದಿಂದ ಸೆಲ್ಫಿ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿನಿ ತಂದೆ
ಪಿಎಸ್ಐ ಹಗರಣದಲ್ಲಿ ಭಾಗಿಯಾಗಿದ್ದ ಆರೋಪಿ ಅಣ್ಣ ಹಾಸನದಲ್ಲಿ ಆತ್ಮಹತ್ಯೆ!
Published On - 12:22 pm, Wed, 11 May 22