ಅಪೆಕ್ಸ್ ಬ್ಯಾಂಕ್ ಸಾಲ: ರಮೇಶ ಜಾರಕಿಹೊಳಿ ಒಬ್ಬರೆ ಅಂತ ಅಲ್ಲ, ಎಲ್ಲ ಪಕ್ಷದವರೂ ಬಾಕಿ ಉಳಿಸಿಕೊಂಡಿದ್ದಾರೆ ಎಂದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್
ಬಂಡೆಪ್ಪ ಕಾಶಂಪುರ್, ಲಕ್ಷ್ಮೀ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿ ಸೇರಿ ಹಲವರ ಹೆಸರು ಸಾಲದ ಪಟ್ಟಿಯಲ್ಲಿವೆ. ಬಾಕಿ ಉಳಿಸಿಕೊಂಡ ಎಲ್ಲರಿಗೂ ನೋಟಿಸ್ ನೀಡಲಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಚಿಕ್ಕೋಡಿ: ಅಪೆಕ್ಸ್ ಬ್ಯಾಂಕ್‌ನಲ್ಲಿ ಸಕ್ಕರೆ ಕಾರ್ಖಾನೆಗಳಿಂದ ಸಾಲ ವಿಚಾರಕ್ಕೆ ಸಂಬಂಧಿಸಿ ಬೆಳಗಾವಿ ಜಿಲ್ಲೆಯಲ್ಲಿ ರಮೇಶ್ ಜಾರಕಿಹೊಳಿ ಒಬ್ಬರೇ ಅಲ್ಲ, ಎಲ್ಲಾ ಪಕ್ಷದ 23 ಜನ ಸಾಲ ಉಳಿಸಿಕೊಂಡಿದ್ದಾರೆ ಎಂದು ಚಿಕ್ಕೋಡಿಯಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಬಂಡೆಪ್ಪ ಕಾಶಂಪುರ್, ಲಕ್ಷ್ಮೀ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿ ಸೇರಿ ಹಲವರ ಹೆಸರು ಸಾಲದ ಪಟ್ಟಿಯಲ್ಲಿವೆ. ಬಾಕಿ ಉಳಿಸಿಕೊಂಡ ಎಲ್ಲರಿಗೂ ನೋಟಿಸ್ ನೀಡಲಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಡಿಕೆ ಶಿವಕುಮಾರ್ ಬರೀ ರಮೇಶ ಜಾರಕಿಹೊಳಿ ಹೆಸರು ಮಾತ್ರ ತಗೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ.ಸೋಮಶೇಖರ್, ರಾಜಕೀಯದಲ್ಲಿ ಮುಂಚೂಣಿಯಲ್ಲಿ ಯಾರು ಇರುತ್ತಾರೆ ಅವರ ಹೆಸರು ಬರುತ್ತೆ. ಬಂಡೆಪ್ಪ ಖಾಶೆಂಪುರ್, ಲಕ್ಷ್ಮೀ ಹೆಬ್ಬಳ್ಕರ್ ಹಾಗೂ ರಮೇಶ್ ಜಾರಕಿಹೊಳಿ ಇವರ ಹೆಸರುಗಳು ಸಾಲದಲ್ಲಿವೆ. ಬಾಕಿ ಉಳಿಸಿಕೊಂಡ ಎಲ್ಲರಿಗೂ ನೋಟಿಸ್ ನೀಡಲಾಗಿದೆ. ಜಾರಕಿಹೊಳಿ ಒಬ್ಬರನ್ನೆ ಟಾರ್ಗೆಟ್ ಮಾಡಿಲ್ಲ. ಕೆಲವೊಬ್ಬರು ಬಡ್ಡಿ ಮಾತ್ರ ಕಟ್ಟುತ್ತಿದ್ದಾರೆ ಇನ್ನೂ ಕೆಲವರು ಬಡ್ಡಿಯನ್ನೂ ಕಟ್ಟಿಲ್ಲ, ಅಸಲು ಇಲ್ಲ. ಎಲ್ಲರಿಗೂ ನೋಟಿಸ್ ಕೊಟ್ಟು ಸಾಲ ಮರುಪಾವತಿ ಮಾಡಲು ಅಪೆಕ್ಸ್ ಬ್ಯಾಂಕ್ ನವರು ನಿರ್ಧಾರ ಮಾಡಿದ್ದಾರೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ರಮೇಶ್ ಜಾರಕಿಹೊಳಿ ಅಪೆಕ್ಸ್ ಬ್ಯಾಂಕ್ಗೆ 600 ಕೋಟಿ ರೂ. ಕಟ್ಟಬೇಕು -ಡಿ.ಕೆ. ಶಿವಕುಮಾರ್ ಆಕ್ರೋಶ ಬೆಳಗಾವಿ: ರಮೇಶ್ ಜಾರಕಿಹೊಳಿ ಒಡೆತನದ ಸಕ್ಕರೆ ಕಾರ್ಖಾನೆಯಲ್ಲಿ ಅವ್ಯವಹಾರ ನಡೆದಿದೆ. ಅಪೆಕ್ಸ್ ಬ್ಯಾಂಕ್ಗೆ ಮಾಜಿ ಮಂತ್ರಿ 600 ಕೋಟಿ ರೂ. ಕಟ್ಟಬೇಕು. ಅಪೆಕ್ಸ್ ಬ್ಯಾಂಕ್ ನವರು ಜಿಲ್ಲಾಧಿಕಾರಿಗೆ ಪತ್ರ ಬರೆದು 2 ವರ್ಷ ಆದರೂ ಕ್ರಮ ಕೈಗೊಂಡಿಲ್ಲ. ರೈತರಿಗೆ 50 ಕೋಟಿ ರೂಪಾಯಿ ಕೊಡಬೇಕು. ಇದನ್ನ ಕೊಡಿಸುವುದು ಜಿಲ್ಲಾಡಳಿತದ ಕರ್ತವ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಆದರೆ ಅವರನ್ನ (ರಮೇಶ್ ಜಾರಕಿಹೊಳಿ) ರಕ್ಷಣೆ ಮಾಡಿಕೊಂಡು ಸಿಎಂ ಅವರ ಬೆನ್ನಿಗೆ ನಿಂತಿದ್ದಾರೆ. ಮುಖ್ಯಮಂತ್ರಿಗೆ ಗೊತ್ತಿದ್ದರೂ ಕೂಡ ಅವರು ಏನೂ ಮಾಡಿಲ್ಲ. ಕೂಡಲೇ ಸಿಎಂ ಮತ್ತು ಸಹಕಾರಿ ಸಚಿವರು ಇದಕ್ಕೆ ಉತ್ತರ ನೀಡಲಿ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹ ಮಾಡಿದ್ದಾರೆ.
ಅಪೆಕ್ಸ್ ಬ್ಯಾಂಕ್ ನಿಂದ ಒಂದು ಖಾತೆ ಬರೆಯಿಸಿಬಿಟ್ಟು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು, ಒಂದು ಸಣ್ಣ ಸೊಸೈಟಿಯಲ್ಲಿ ಇಪ್ಪತ್ತು ಕೋಟಿ ದಿವಾಳಿ ಅಂತಾ ಹಾಕಿಕೊಂಡು ಕುಳಿತಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಬೇನಾಮಿ ಹೆಸರಲ್ಲಿ ಇಸ್ಕೊಂಡು ಈಗ ಇವರೇ ಕಾರ್ಖಾನೆ ನಡೆಸುವ ಕೆಲಸ ಆಗ್ತಿದೆ. ಕೂಡಲೇ ಮುಖ್ಯಮಂತ್ರಿ ಮತ್ತು ಸಹಕಾರಿ ಸಚಿವರು ಇದಕ್ಕೆ ಉತ್ತರ ಕೊಡಬೇಕು. ಕೇಂದ್ರ ಸಚಿವರಿಗೂ ಈ ವಿಚಾರವನ್ನ ತಿಳಿಸಬೇಕು. ಹಣ ವಸೂಲಿ ಮಾಡಿಕೊಳ್ಳಲು ಆಸ್ತಿ ಪಾಸ್ತಿ ಜಪ್ತಿ ಮಾಡಲು ವ್ಯವಸ್ಥೆ ಮಾಡಿಕೊಳ್ಳಬೇಕು. ರಕ್ಷಣೆ ಕೊಟ್ಟ ಅಧಿಕಾರಿಗಳನ್ನ ಕೂಡಲೇ ಅಮಾನತು ಮಾಡಬೇಕು. ಸೌಭಾಗ್ಯ ಲಕ್ಷ್ಮೀ ಕಾರ್ಖಾನೆಯವರೇ ಕೇಳಿಕೊಂಡಿದ್ದಾರೆ. ನಾವು ದಿವಾಳಿಯಾಗಿದ್ದೇವೆ, ಬರಬಾದ್ ಆಗಿದ್ದೇವೆ, ನಾವು ಭಿಕ್ಷುಕರಾಗಿದ್ದೇವೆ ಅಂತಾ ಅವರೇ ಹೇಳಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೆಸರು ಹೇಳದೇ ಸಾಹುಕಾರ್ ವಿರುದ್ಧ ಡಿಕೆಶಿ ತೀವ್ರ ವಾಗ್ದಾಳಿ ನಡೆಸಿದರು. ರೈತರ ಹಣ ಸಿಗಬೇಕು, ಬ್ಯಾಂಕ್ ಗೆ ಹಣ ಸಿಗಬೇಕು, ಟ್ಯಾಕ್ಸ್ ಕಟ್ಟಬೇಕು. ಮಂಗಳೂರು, ತುಮಕೂರು, ವಿಜಯಪುರ ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್ ಎಲ್ಲಾ ವಸೂಲಿ ಆಗಬೇಕು. ಮುಖ್ಯಮಂತ್ರಿಗಳು, ಸಹಕಾರಿ ಸಚಿವರು ರಕ್ಷಣೆ ಕೊಟ್ರೇ ನಮ್ಮ ಹೋರಾಟ ಎನು ಎಂಬುದನ್ನ ತಿಳಿಸುತ್ತೇವೆ ಎಂದು ಡಿಕೆಶಿ ಸವಾಲು ರೂಪದಲ್ಲಿ ಹೇಳಿದರು.
Published On - 10:26 pm, Tue, 10 May 22