ಪ್ರವಾಹ ಬಂದಾಗ ಕಷ್ಟ ಕೇಳಲಿಲ್ಲ, ಈಗ ಮತ ಕೇಳೋಕೆ ಬಂದಿದ್ದೀರಾ?
ಬೆಳಗಾವಿ: ಮತ ಕೇಳಲು ಬಂದ ಡಿಸಿಎಂ ಲಕ್ಷ್ಮಣ ಸವದಿ ಮತ್ತು BJP ಅಭ್ಯರ್ಥಿ ಮಹೇಶ ಕುಮಟಳ್ಳಿಗೆ ನದಿ ಇಂಗಳಗಾಂವ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಕೃಷ್ಣಾ ನದಿ ಪ್ರವಾಹದಲ್ಲಿ ಇಂಗಳಗಾಂವ ಸಂಪೂರ್ಣವಾಗಿ ಮುಳುಗಿ ಹೋಗಿತ್ತು. ನಮ್ಮ ಗ್ರಾಮದಲ್ಲಿ ಪ್ರವಾಹ ಬಂದಾಗ ಕಷ್ಟ ಕೇಳದೆ, ಈಗ ಮತ ಕೇಳೋಕೆ ಬಂದಿದ್ದೀರಾ ಎಂದು ಮತದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇರೋಕೆ ಮನೆಯಿಲ್ಲ, ಸತ್ರೆ ಹೂಳೋಕೆ ಸ್ಮಶಾನವೂ ಇಲ್ಲ, ಇಲ್ಲಿ ಶೌಚಾಲಯ ಸಹ ಇಲ್ಲ, ಪ್ರವಾಹ ಬಂದು ಹೋದರೂ ಏನೂ ಮಾಡಿಲ್ಲ ಎಂದು […]
Follow us on
ಬೆಳಗಾವಿ: ಮತ ಕೇಳಲು ಬಂದ ಡಿಸಿಎಂ ಲಕ್ಷ್ಮಣ ಸವದಿ ಮತ್ತು BJP ಅಭ್ಯರ್ಥಿ ಮಹೇಶ ಕುಮಟಳ್ಳಿಗೆ ನದಿ ಇಂಗಳಗಾಂವ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಕೃಷ್ಣಾ ನದಿ ಪ್ರವಾಹದಲ್ಲಿ ಇಂಗಳಗಾಂವ ಸಂಪೂರ್ಣವಾಗಿ ಮುಳುಗಿ ಹೋಗಿತ್ತು. ನಮ್ಮ ಗ್ರಾಮದಲ್ಲಿ ಪ್ರವಾಹ ಬಂದಾಗ ಕಷ್ಟ ಕೇಳದೆ, ಈಗ ಮತ ಕೇಳೋಕೆ ಬಂದಿದ್ದೀರಾ ಎಂದು ಮತದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇರೋಕೆ ಮನೆಯಿಲ್ಲ, ಸತ್ರೆ ಹೂಳೋಕೆ ಸ್ಮಶಾನವೂ ಇಲ್ಲ, ಇಲ್ಲಿ ಶೌಚಾಲಯ ಸಹ ಇಲ್ಲ, ಪ್ರವಾಹ ಬಂದು ಹೋದರೂ ಏನೂ ಮಾಡಿಲ್ಲ ಎಂದು ಕಣ್ಣೀರು ಸುರಿಸಿದರು. ನಮಗೆ ಇರೋಕೆ ಮನೆಗಾಗಿ ಸೂಕ್ತ ಜಾಗ ಕೊಡಿಸಿ ಎಂದು ನೆರೆ ಸಂತ್ರಸ್ತರು ಕೈ ಮುಗಿದು ಕೇಳಿದ್ದಾರೆ. ಆದಕ್ಕೆ ಮತ ಕೇಳಲು ಬಂದಿದ್ದ ನಾಯಕರು ಚುನಾವಣೆ ಮುಗಿದ ಬಳಿಕ ಎಲ್ಲವೂ ಮಾಡಿ ಕೊಡುವುದಾಗಿ ಭರವಸೆ ನೀಡಿ, ಬಿಜೆಪಿಗೆ ಮತ ಹಾಕಿ ಎಂದು ಹೇಳಿ ಮುನ್ನಡೆದಿದ್ದಾರೆ.