ಗೆಳತಿ ಮದುವೆಗೆ ಹೋದವಳಿಗೆ ಸಿಕ್ತು ಕೊರೊನಾ ಗಿಫ್ಟ್‌

ಬೆಳಗಾವಿ: ಮದುವೆ ಮುಂಜವಿ ಅಂತಾ ಯಾರಾದ್ರೂ ಓಡಾಡುತ್ತಿದ್ರೆ, ಕೊರೊನಾ ಟೈಮ್‌ನಲ್ಲೂದ್ರೂ ಸ್ವಲ್ಪ ಎಚ್ಚೆತ್ತುಕೊಳ್ಳೋದು ಒಳಿತು ಅನಿಸುತ್ತೆ. ಯಾಕಂದ್ರೆ ಗೆಳತಿ ಮದುವೆಗೆ ಅಂತಾ ಹೋದ ಯುವತಿ ಈಗ ಕೊರೊನಾ ಸೋಂಕು ತಗುಲಿಸಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹೌದು, ಸಂಬಂಧಿಕರು, ಸ್ನೇಹಿತರು ಅಂತಾ ಮದುವೆಗೆ ಹೋಗುವವರು ಎಚ್ಚರ ವಹಿಸೋದು ಒಳ್ಳೇದು. ಸ್ವಲ್ಪ ಯಾಮಾರಿದರೂ ಸಾಕು ಮನೆಗೇ ಬರುತ್ತೆ ಮಹಾಮಾರಿ ಕೊರೊನಾ. ಇಂಥದ್ದೆ ಘಟನೆಯೊಂದರಲ್ಲಿ ಗೆಳತಿ ಮದುವೆಗೆ ಅಂತಾ ಹೋದ ಯುವತಿಗೆ ಕೊರೊನಾ ಸೋಂಕು ತಗುಲಿದೆ. ಮದುವೆಯಲ್ಲಿ ಮರೆತರು ಸಾಮಾಜಿಕ ಅಂತರ […]

ಗೆಳತಿ ಮದುವೆಗೆ ಹೋದವಳಿಗೆ ಸಿಕ್ತು ಕೊರೊನಾ ಗಿಫ್ಟ್‌
Follow us
Guru
|

Updated on:Jun 28, 2020 | 1:45 PM

ಬೆಳಗಾವಿ: ಮದುವೆ ಮುಂಜವಿ ಅಂತಾ ಯಾರಾದ್ರೂ ಓಡಾಡುತ್ತಿದ್ರೆ, ಕೊರೊನಾ ಟೈಮ್‌ನಲ್ಲೂದ್ರೂ ಸ್ವಲ್ಪ ಎಚ್ಚೆತ್ತುಕೊಳ್ಳೋದು ಒಳಿತು ಅನಿಸುತ್ತೆ. ಯಾಕಂದ್ರೆ ಗೆಳತಿ ಮದುವೆಗೆ ಅಂತಾ ಹೋದ ಯುವತಿ ಈಗ ಕೊರೊನಾ ಸೋಂಕು ತಗುಲಿಸಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಹೌದು, ಸಂಬಂಧಿಕರು, ಸ್ನೇಹಿತರು ಅಂತಾ ಮದುವೆಗೆ ಹೋಗುವವರು ಎಚ್ಚರ ವಹಿಸೋದು ಒಳ್ಳೇದು. ಸ್ವಲ್ಪ ಯಾಮಾರಿದರೂ ಸಾಕು ಮನೆಗೇ ಬರುತ್ತೆ ಮಹಾಮಾರಿ ಕೊರೊನಾ. ಇಂಥದ್ದೆ ಘಟನೆಯೊಂದರಲ್ಲಿ ಗೆಳತಿ ಮದುವೆಗೆ ಅಂತಾ ಹೋದ ಯುವತಿಗೆ ಕೊರೊನಾ ಸೋಂಕು ತಗುಲಿದೆ.

ಮದುವೆಯಲ್ಲಿ ಮರೆತರು ಸಾಮಾಜಿಕ ಅಂತರ ಜೂನ್ 13ರಂದು ರಾಮದುರ್ಗ ತಾಲೂಕಿನ ಕಲ್ಲೂರ ಗ್ರಾಮದಲ್ಲಿ ಮದುವೆಯೊಂದು ನಡೆದಿತ್ತು. ಸಿಂಗಾರಗೊಪ್ಪ ಗ್ರಾಮದ 70ಜನರು ಈ ಮದುವೆಗೆ ಹೋಗಿದ್ದರು. ಯುವತಿಯೊಬ್ಬಳು ಕೂಡಾ ತನ್ನದೇ ಗ್ರಾಮದ ಗೆಳತಿ‌ ಮದುವೆ ಅಂತಾ ಮದುವೆಗೆ ಹೋಗಿದ್ದಳು. ಜತೆಗೆ ಈ ಮದುವೆಗೆ ನವಲಗುಂದ ತಾಲೂಕಿನ ಮೊರಬ ಗ್ರಾಮದವರು ಕೂಡಾ ಆಗಮಿಸಿದ್ದರು. ಈಗಾಗಲೇ ಕೊರೊನಾ ಸೋಂಕಿತರಿರುವ ಮೊರಬ ಗ್ರಾಮಸ್ಥರು ಮತ್ತು ಸಿಂಗಾರಗೊಪ್ಪ ಗ್ರಾಮಸ್ಥರು ಸೇರಿ ಊಟ ಮಾಡಿದ್ದರು. ಹೀಗೆ ಮದುವೆಯಲ್ಲಿ ಸಾಮಾಜಿಕ ಅಂತರ ಮರೆತು ಎಲ್ಲರೂ ಬೆರೆತಿದ್ದೇ ಈಗ ಸೋಂಕು ಹರಡಲು ಕಾರಣವಾಗಿದೆ ಎನ್ನಲಾಗ್ತಿದೆ.

ಮದುವೆಗೆ ಬಂದ ಮೊರಬ ಗ್ರಾಮಸ್ಥರಿಂದ ಹರಡಿತು ಸೋಂಕು ಹೀಗೆ ಮದುವೆಗೆ ಬಂದ ಮೊರಬ ಗ್ರಾಮಸ್ಥರಲ್ಲಿ ಈಗ ಕೊರೊನಾ ಸೋಂಕು ಇರೋದು ಈಗ ದೃಡವಾಗಿದೆ. ಹೀಗಾಗಿ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಾರೆ ಎಂದು ಸಿಂಗಾರಗೊಪ್ಪ ಗ್ರಾಮಸ್ಥರಿಗೆ ಕೊವಿಡ್ ಟೇಸ್ಟ್ ಮಾಡಲಾಗಿದೆ. ಇದರಲ್ಲಿ ಇದೀಗ ಮದುವೆಗೆ ಹೋದ ಪಿ.11248 ಯುವತಿಗೆ ಕೊರೊನಾ ಸೋಂಕು ತಗುಲಿರೋದು ಕನ್‌ಫರ್ಮ್‌ ಆಗಿದೆ. ಪರಿಣಾಮ ಈಗ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸಿಂಗಾರಗೊಪ್ಪ ಮತ್ತು ರಾಮದುರ್ಗ ತಾಲೂಕಿನ ಕಲ್ಲೂರ ಗ್ರಾಮಗಳನ್ನ ಸೀಲ್​ಡೌನ್ ಮಾಡಲಾಗಿದೆ.

Published On - 1:38 pm, Sun, 28 June 20

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ