ಬೆಂಗಳೂರಿನಲ್ಲಿ ಅಕ್ರಮ ಮದ್ಯ ಮಾರಾಟ; ಆರೋಪಿ ಬಂಧನ

| Updated By: ganapathi bhat

Updated on: Apr 05, 2021 | 4:38 PM

ಆಫ್ರಿಕನ್ ಕಿಚನ್ ಹೆಸರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಾಹನ್ಸ್ ವಿಹುಂಗೆಫ್ರಿ ಕೆನಿಗೇ ಎಂಬುವವರು ಹೊರಮಾವು ಬಳಿಯ ಅಗರ ಶೆಡ್ ಬಳಿ ಮದ್ಯವನ್ನು ಸಂಗ್ರಹಿಸಿದ್ದರು.

ಬೆಂಗಳೂರಿನಲ್ಲಿ ಅಕ್ರಮ ಮದ್ಯ ಮಾರಾಟ; ಆರೋಪಿ ಬಂಧನ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಆಫ್ರಿಕನ್ ಕಿಚನ್ ಹೆಸರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಾಹನ್ಸ್ ವಿಹುಂಗೆಫ್ರಿ ಕೆನಿಗೇ ಎಂಬುವವರು ಹೊರಮಾವು ಬಳಿಯ ಅಗರ ಶೆಡ್ ಬಳಿ ಮದ್ಯವನ್ನು ಸಂಗ್ರಹಿಸಿದ್ದರು. ಹೆಣ್ಣೂರು ಠಾಣೆ ಪೊಲೀಸರ ಕಾರ್ಯಾಚರಣೆಯಿಂದ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು 103 ಲೀಟರ್ ಮದ್ಯ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಪೊಲೀಸರ ಮೇಲೆ ಕಾರು ಹತ್ತಿಸಲು ಯತ್ನಿಸಿದ ಆರೋಪಿಯನ್ನು ಹೊಯ್ಸಳ ವಾಹನಗಳನ್ನ ಅಡ್ಡಗಟ್ಟಿ ಬಂಧಿಸಿದ್ದಾರೆ.

ಶ್ರೀಗಂಧದ ಮರ ಕಳವು ಮಾಡಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬೆಂಗಳೂರಿನ ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಮಣಿ (27) ಎಂಬಾತ ಬಂದನಕ್ಕೊಳಗಾಗಿದ್ದಾನೆ. ಪೊಲೀಸರು ಕಾರ್ಯಾಚರಣೆ ವೇಳೆ ಬಂಧಿತನಿಂದ ಸುಮಾರು 3 ಲಕ್ಷ 40 ಸಾವಿರ ರೂ. ಮೌಲ್ಯದ 114 ಕೆಜಿ ತೂಕದ 12 ಶ್ರೀಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಹೊರಮಾವು ಅಗರ ಬಳಿಯ ಶನಿಮಹಾತ್ಮ ದೇವಾಲಯದ ಆವರಣದಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನು ಆರೋಪಿ ಕಡೆದಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ

ನಾಲ್ಕನೆಯದ್ದೂ ಹೆಣ್ಣು ಮಗು ಆಯಿತೆಂದು ಸ್ನೇಹಿತರಿಗೆ ಮಾರಾಟ ಮಾಡಲು ಮುಂದಾದ ತಂದೆ; ಸುಳ್ಳು ಆರೋಪ ಎಂದು ಸ್ಪಷ್ಟನೆ

ಬೆಂಗಳೂರಿನಲ್ಲಿ ಪ್ರೇಯಸಿಯನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಪ್ರಿಯತಮ.. ನಿಮ್ಹಾನ್ಸ್ ಪಾಲು

(bengaluru Hennur Police arrested a man accused of illegally selling alcohol in the name of African kitchen)