AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಂಗ್ಲಾ ಹೋರಾಟದಲ್ಲಿ ನರೇಂದ್ರ ಮೋದಿ ಭಾಗವಹಿಸಿಲ್ಲ; ಬರೀ ಸುಳ್ಳು ಹೇಳಿಕೊಂಡು ಓಡಾಡ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧ ನಡೆದಾಗ ರಕ್ಷಣಾ ಸಚಿವರಾಗಿ ನಿರ್ವಹಿಸಿ ಪಾಕಿಸ್ತಾನಕ್ಕೆ ಸೋಲುಂಟು ಮಾಡಿದರು. ಬಾಂಗ್ಲಾಗೆ ಸ್ವಾತಂತ್ರ್ಯ ಸಿಗುವವರೆಗೂ ಮೋದಿ ಹೋರಾಡಿದ್ದರು ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.

ಬಾಂಗ್ಲಾ ಹೋರಾಟದಲ್ಲಿ ನರೇಂದ್ರ ಮೋದಿ ಭಾಗವಹಿಸಿಲ್ಲ; ಬರೀ ಸುಳ್ಳು ಹೇಳಿಕೊಂಡು ಓಡಾಡ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ
ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ
shruti hegde
|

Updated on:Apr 05, 2021 | 4:05 PM

Share

ಬೆಂಗಳೂರು: ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧ ನಡೆದಾಗ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿ ಪಾಕಿಸ್ತಾನಕ್ಕೆ ಸೋಲುಂಟು ಮಾಡಿದರು. ಬಾಂಗ್ಲಾಗೆ ಸ್ವಾತಂತ್ರ್ಯ ಸಿಗುವವರೆಗೂ ಮೋದಿ ಹೋರಾಡಿದ್ದರು ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿಗೆ ಕುಟುಕಿದ್ದಾರೆ. ಬಾಂಗ್ಲಾ ಸ್ವಾತಂತ್ರ್ಯಕ್ಕೆ ಜೈಲಿಗೆ ಹೋಗಿದ್ದೆ ಎಂದು ಮೋದಿ ಹೇಳುತ್ತಾರೆ. ಬಾಂಗ್ಲಾ ಹೋರಾಟದಲ್ಲಿ ನರೇಂದ್ರ ಮೋದಿ ಭಾಗವಹಿಸಿರಲಿಲ್ಲ. ದೇಶ, ವಿದೇಶದಲ್ಲಿ ಬರೀ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಪಾಪ ನರೇಂದ್ರ ಮೋದಿಯವರು ಇನ್ನೊಂದು ಹೇಳಬೇಕಿತ್ತು, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದೆ ಅನ್ಬೇಕಿತ್ತು ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶ ವಿಭಜನೆಮಾಡ್ತಿದ್ದಾರೆ. ಧರ್ಮ, ಜಾತಿ ಜಾತಿಗಳ ನಡುವೆ ದ್ವೇಷ ಮೂಡಿಸುತ್ತಿದ್ದಾರೆ. ಧರ್ಮ ಮುಂದಿಟ್ಟುಕೊಂಡೇ ಇವರು ಅಧಿಕಾರಕ್ಕೆ ಬಂದರು. ದೇಶದ ಅಭಿವೃದ್ಧಿ ಬಗ್ಗೆ ಬಿಜೆಪಿಯವರು ಎಲ್ಲೂ ಮಾತಾಡಿಲ್ಲ. ದೇಶವನ್ನು ಕೆಳಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದಾರೆ.

ಕೇರಳ, ಬಸವಕಲ್ಯಾಣದಲ್ಲಿ ಆರ್​.ಎಸ್​.ಎಸ್​ ಐಡಿಯಾಲಜಿ ಮಾಡುತ್ತಿದ್ದಾರೆ. ಆರ್​ಎಸ್​ಎಸ್​ ಐಡಿಯಾಲಜಿ ವಿಷವಿದ್ದಂತೆ. ವಿಷವನ್ನು ಎಲ್ಲಾದ್ರೂ ಟೇಸ್ಟ್ ಮಾಡಲು ಸಾಧ್ಯವಾಗುತ್ತಾ? ಒಂದು ತೊಟ್ಟು ವಿಷ ಕುಡಿದರೆ ಸಾಕು ಅವರು ಸಾಯುತ್ತಾರೆ. ಹೋಗಲಿ ಎಂದು ಒಮ್ಮೆ ಅವಕಾಶ ಕೊಟ್ಟರೆ ಎಲ್ಲ ಮುಗೀತು. ಬಿಜೆಪಿಯವರು ಸಂವಿಧಾನ ಒಪ್ಪಲ್ಲ, ಪ್ರಜಾಪ್ರಭುತ್ವ ಒಪ್ಪಲ್ಲ. ಹಿಂದೆಯೂ ಇದನ್ನ ಹೇಳಿದ್ದೆ, ಈಗಲೂ ಅದನ್ನೇ ಹೇಳುತ್ತೇನೆ. ಬಿಜೆಪಿಯವರು ದೇಶ ವಿಭಜಿಸುವ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಬಿಜೆಪಿ ಕಟ್ಟಲು ಓಡಾಡಿದವರು ಮೂಲೆ ಗುಂಪಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಬಾಂಗ್ಲಾದೇಶ ಸ್ವಾತಂತ್ರ್ಯಕ್ಕೆ ಹೋರಾಡಿ ಜೈಲಿಗೂ ಹೋಗಿದ್ದೆ: ಬಾಂಗ್ಲಾ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ಪಡೆದು 50 ವರ್ಷಗಳನ್ನು ಪೂರೈಸಿದ ಬಾಂಗ್ಲಾದೇಶಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ತಿಳಿಸಿ, ತಮ್ಮ ರಾಜಕೀಯ ಜೀವನದ ಮೊದಲ ಹೋರಾಟಗಳಲ್ಲಿ ಬಾಂಗ್ಲಾ ವಿಮೋಚನೆಯ ಹೋರಾಟವೂ ಒಂದು ಎಂದು ಮೋದಿ ಬಾಂಗ್ಲಾದೇಶದಲ್ಲಿ ಮಾರ್ಚ್ 24ರಂದು ಹೇಳಿದ್ದರು.

‘ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟ ನನ್ನ ಜೀವನದ ಪ್ರಮುಖ ಅಂಗವೂ ಹೌದು. ನನ್ನ ಜೊತೆಗಾರರು ಮತ್ತು ನಾನು ಬಾಂಗ್ಲಾ ವಿಮೋಚನೆಗಾಗಿ ಸತ್ಯಾಗ್ರಹ ಕೈಗೊಂಡಿದ್ದೆವು. ಆಗ ನಾನು 20ರ ಹರೆಯದಲ್ಲಿದ್ದೆ. ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟದ ಸತ್ಯಾಗ್ರಹಕ್ಕಾಗಿ ಜೈಲಿಗೆ ಹೋಗುವ ಅವಕಾಶವನ್ನೂ ನಾನು ಪಡೆದಿದ್ದೆ’ ಎಂದು ಮೋದಿ ಮಾತನಾಡಿದ್ದರು.

ಇದನ್ನೂ ಓದಿ: ನನ್ನ ಕಥೆ ಬಿಡಿ, ಬದುಕಿ ಬಾಳಬೇಕಿರುವವರಿಗೆ ಲಸಿಕೆ ಕೊಡಿ: ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ ಎಂದಿಗೂ ಅಹಿಂದ ಹೋರಾಟ ಮಾಡಿಲ್ಲ! ಗುಟುರು ಹಾಕಿದ ಸಿದ್ದರಾಮಯ್ಯ

(pm narendra modi Lying and wandering around says mallikarjun kharge in bangalore)

Published On - 3:54 pm, Mon, 5 April 21