ಬೆಂಗಳೂರು ಬಂದ್: ನಾಳೆ ನಡೆಯಬೇಕಿದ್ದ ಕಾನೂನು ವಿವಿ ಪರೀಕ್ಷೆಗಳು ಮುಂದೂಡಿಕೆ

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು, ಇದರ ಭಾಗವಾಗಿ ನಾಳೆ ಬೆಂಗಳೂರು ಬಂದ್​ಗೆ ಕರೆ ನೀಡಲಾಗಿದೆ. ಖಾಸಗಿ ಸಾರಿಗೆ ಒಕ್ಕೂಟಗಳು ಬಂದ್​ಗೆ ಬೆಂಬಲ ಸೂಚಿಸಿರುವ ಹಿನ್ನೆಲೆ ಸಂಚಾರದಲ್ಲಿ ಅಸ್ತವ್ಯಸ್ಥವಾಗಲಿದೆ. ಹೀಗಾಗಿ ನಾಳೆ ನಡೆಯಬೇಕಿದ್ದ ಕಾನೂನು ವಿವಿ ಪರೀಕ್ಷೆಗಳು ಮುಂದೂಡಿಕೆಯಾಗಿದೆ.

ಬೆಂಗಳೂರು ಬಂದ್: ನಾಳೆ ನಡೆಯಬೇಕಿದ್ದ ಕಾನೂನು ವಿವಿ ಪರೀಕ್ಷೆಗಳು ಮುಂದೂಡಿಕೆ
ಬೆಂಗಳೂರು ಬಂದ್ ಹಿನ್ನೆಲೆ ನಾಳೆ ನಡೆಯಬೇಕಿದ್ದ ಕಾನೂನು ವಿವಿ ಪರೀಕ್ಷೆಗಳು ಮುಂದೂಡಿಕೆ (ಸಾಂದರ್ಭಿಕ ಚಿತ್ರ)
Updated By: Rakesh Nayak Manchi

Updated on: Sep 25, 2023 | 7:09 PM

ಹುಬ್ಬಳ್ಳಿ, ಸೆ.25: ​ತಮಿಳುನಾಡಿಗೆ ಕಾವೇರಿ (Cauvery) ನೀರು ಹರಿಸುತ್ತಿರುವುದನ್ನು ಖಂಡಿಸಿ ನಾಳೆ ಬೆಂಗಳೂರು ಬಂದ್​ಗೆ (Bangalore Bandh) ಕರೆ ನೀಡಲಾಗಿದ್ದು, ಸಂಚಾರದಲ್ಲಿ ಅಸ್ತವ್ಯಸ್ಥವಾಗಲಿದೆ. ಹೀಗಾಗಿ ನಾಳೆ ನಡೆಯಬೇಕಿದ್ದ ಕಾನೂನು ವಿಶ್ವವಿದ್ಯಾನಿಲಯದ ಪರೀಕ್ಷೆಗಳು ಮುಂದೂಡಿಕೆಯಾಗಿದೆ.

ಕಾನೂನು ವಿಶ್ವವಿದ್ಯಾಲಯದ ನಾಳಿನ ಎಲ್ಲಾ ಪರೀಕ್ಷೆಗಳನ್ನು ಅಕ್ಟೋಬರ್ 8ಕ್ಕೆ ಮುಂದೂಡಿಕೆ ಮಾಡಿ ಕರ್ನಾಟಕ ರಾಜ್ಯ ಕಾನೂನು ವಿವಿ ಮೌಲ್ಯಮಾಪನ ಕುಲಸಚಿವರು ಆದೇಶ ಹೊರಡಿಸಿದ್ದಾರೆ. ಉಳಿದ ಪರೀಕ್ಷೆಗಳು ಯಥಾ ರೀತಿ ನಡೆಯಲಿವೆ.

ಇದನ್ನೂ ಓದಿ: ಬೆಂಗಳೂರು ಬಂದ್: ನಾಳೆ ಏನೇನು ಇರುತ್ತೆ? ಏನೇನು ಇರುವುದಿಲ್ಲ?

ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಸಾರಿಗೆ ಸಂಚಾರಕ್ಕೂ ಅಡಚಣೆ ಉಂಟಾಗಲಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಲಿದೆ. ಇದನ್ನು ತಪ್ಪಿಸಲು ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ. ಕಾನೂನು ವಿಶ್ವವಿದ್ಯಾಲಯ ಕುಲಪತಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪರೀಕ್ಷೆ ಮುಂದೂಡಿಕೆಗೆ ನಿರ್ಧಾರ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ