ಬೆಂಗಳೂರು ಬಂದ್: ಖಾಸಗಿ ಶಾಲೆಗಳಿಗೆ ನಾಳೆ ರಜೆ ಘೋಷಣೆ: ಜಿಲ್ಲಾಧಿಕಾರಿ ದಯಾನಂದ್​

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಸೆ.26 ರಂದು ಬೆಂಗಳೂರು ಬಂದ್​​ಗೆ ಕರೆ ನೀಡಲಾಗಿದೆ. ಹಾಗಾಗಿ ಮಕ್ಕಳ ಸುರಕ್ಷತೆ, ರಕ್ಷಣೆ ದೃಷ್ಟಿಯಿಂದ ಬೆಂಗಳೂರು ನಗರದ ಎಲ್ಲಾ ಖಾಸಗಿ ಶಾಲೆಗಳಿಗೆ ನಾಳೆ ರಜೆ ಘೋಷಿಸಿ ಜಿಲ್ಲಾಧಿಕಾರಿ ದಯಾನಂದ್ ಆದೇಶ ಹೊರಡಿಸಿದ್ದಾರೆ​. ಖಾಸಗಿ ಶಾಲೆಗಳ ಒಕ್ಕೂಟದಿಂದ ನಾಳೆ ರಜೆ ನೀಡಲಾಗಿದೆ.

ಬೆಂಗಳೂರು ಬಂದ್: ಖಾಸಗಿ ಶಾಲೆಗಳಿಗೆ ನಾಳೆ ರಜೆ ಘೋಷಣೆ: ಜಿಲ್ಲಾಧಿಕಾರಿ ದಯಾನಂದ್​
ಪ್ರಾತಿನಿಧಿಕ ಚಿತ್ರ
Follow us
Vinay Kashappanavar
| Updated By: ಗಂಗಾಧರ​ ಬ. ಸಾಬೋಜಿ

Updated on:Sep 25, 2023 | 7:01 PM

ಬೆಂಗಳೂರು, ಸೆಪ್ಟೆಂಬರ್​​ 25: ತಮಿಳುನಾಡಿಗೆ ಕಾವೇರಿ ನೀರು (Cauvery Water Dispute) ಹರಿಸುತ್ತಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಸೆ.26 ರಂದು ಬೆಂಗಳೂರು ಬಂದ್​​ಗೆ (Bengaluru Bandh) ಕರೆ ನೀಡಿವೆ. ಹಾಗಾಗಿ ಬೆಂಗಳೂರು ನಗರದ ಎಲ್ಲಾ ಖಾಸಗಿ ಶಾಲೆಗಳಿಗೆ ನಾಳೆ ರಜೆ ಘೋಷಿಸಲಾಗಿದೆ. ಮಕ್ಕಳ ಸುರಕ್ಷತೆ, ರಕ್ಷಣೆ ದೃಷ್ಟಿಯಿಂದ ರಜೆ ಘೋಷಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್ ಆದೇಶ ಹೊರಡಿಸಿದ್ದಾರೆ​.

ಖಾಸಗಿ ಶಾಲೆಗಳ ಒಕ್ಕೂಟದಿಂದ ಬೆಂಗಳೂರಿನ ಶಾಲೆಗಳಿಗೆ ನಾಳೆ ರಜೆ ನೀಡಲಾಗಿದೆ. ಈ ಕುರಿತಾಗಿ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ಎಲ್​ಕೆಜಿಯಿಂದ 10ನೇ ತರಗತಿವರೆಗಿನ ಶಾಲೆಗಳಿಗೆ ರಜೆ ನೀಡಲಾಗಿದೆ.

ಸರ್ಕಾರಿ ಕಛೇರಿ ಹಾಗೂ ಶಾಲಾ ಕಾಲೇಜುಗಳಿಗೆ ಯಾವುದೇ ರಜೆ ಇಲ್ಲ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎಂದಿನಂತೆ ಶಾಲಾ-ಕಾಲೇಜು ನಡೆಯಲಿವೆ. ಜೊತೆಗೆ ಕಛೇರಿಗಳ ನಿರ್ವಹಣೆ ಕೂಡ ನಡೆಯಲಿವೆ. ಸರ್ಕಾರಿ ಕಛೇರಿ ಹಾಗೂ ಶಾಲಾ ಕಾಲೇಜುಗಳಿಗೆ ಯಾವುದೇ ರಜೆ ಇಲ್ಲ. ಬಂದ್ ಬಿಸಿ ನೊಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಬಸ್ ಸಂಚಾರವು ಯಥಾಸ್ಥಿತಿ ಇರಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚರಿಕೆಯಾಗಿ ಪೊಲೀಸ್ ಬಂದೋಬಸ್ತ್​ ನಿಯೋಜನೆ ಮಾಡಲಾಗಿದೆ ಟಿವಿನೈನ್​ ಗೆ ಬೆಂಗಳೂರು ಗ್ರಾಮಾಂತರ ಡಿಸಿ ಶಿವಶಂಕರ್ ಹೇಳಿದ್ದಾರೆ.

ಬೆಂಗಳೂರು ಬಂದ್​ಗೆ ಖಾಸಗಿ ಸಾರಿಗೆ ಒಕ್ಕೂಟ ಬೆಂಬಲ

ಬೆಂಗಳೂರು ನಗರ ಬಂದ್​ಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಖಾಸಗಿ ಸಾರಿಗೆ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಹೇಳಿದ್ದಾರೆ. ನಮ್ಮ 37 ಸಂಘಟನೆಗಳು ನಾಳೆಯ ಬಂದ್​ನಲ್ಲಿ ಭಾಗಿಯಾಗಲಿವೆ.

ಇದನ್ನೂ ಓದಿ: ನಾಳೆ ಬೆಂಗಳೂರು ಬಂದ್: ರ‍್ಯಾಲಿ, ಮೆರವಣಿಗೆಗಿಲ್ಲ ಅವಕಾಶ: ಹೈಕೋರ್ಟ್

ಯಾವುದೇ ಕಾರಣಕ್ಕೂ ನಾಳೆ ಖಾಸಗಿ ಬಸ್​ಗಳು ರಸ್ತೆಗಿಳಿಯುವುದಿಲ್ಲ. ನ್ಯಾಷನಲ್ ಕಾಲೇಜಿನಿಂದ ಟೌನ್ ಹೌಲ್​ವರೆಗೆ ಱಲಿ ನಡೆಸುತ್ತೇವೆ. ಎರಡು ಸಾವಿರಕ್ಕೂ ಹೆಚ್ಚು ಚಾಲಕರು ಬಂದ್​ನಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಬಂದ್​ಗೆ ಬೆಂಬಲ ಸೂಚಿಸಿದ ರಾಜ್ಯ ಹೋಟೆಲ್ ಮಾಲೀಕರ ಸಂಘ

ರಾಜ್ಯ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ ಹೇಳಿಕೆ ನೀಡಿದ್ದು, ನಾಳೆ ಸಂಪೂರ್ಣವಾಗಿ ಹೋಟೆಲ್ ಬಂದ ಆಗಲಿವೆ. ನಾವು ನಾಳಿನ ಬಂದ್​ಗೆ ಬೆಂವಲ ಕೊಡುತ್ತೇವೆ ಎಂದು ಹೇಳಿದ್ದಾರೆ.

ನಾಳೆ ಟ್ರಾಫಿಕ್​​ಜಾಮ್ ಸಾಧ್ಯತೆ

ನಾಳೆ ಬೆಂಗಳೂರು ನಗರ ಬಂದ್​ ಹಿನ್ನೆಲೆ ಟ್ರಾಫಿಕ್​​ಜಾಮ್ ಸಾಧ್ಯತೆ ಇದೆ. ಬೆಂಗಳೂರು ನಗರದ ಎರಡರಿಂದ ಮೂರು ಕಡೆ ರ‍್ಯಾಲಿ ನಡೆಯಲಿವೆ. ಖಾಸಗಿ ವಾಹನಗಳ ಒಕ್ಕೂಟದಿಂದ ನ್ಯಾಷನಲ್ ಕಾಲೇಜಿನಿಂದ ಟೌನ್​ಹಾಲ್​ವರೆಗೂ ಬೃಹತ್ ರ‍್ಯಾಲಿ ನಡೆಯಲಿದ್ದು, ಟೌನ್​ಹಾಲ್​ನಿಂದ ಫ್ರೀಡಂಪಾರ್ಕ್​ವರೆಗೆ ಮತ್ತೊಂದು ರ‍್ಯಾಲಿ ನಡೆಯಲಿದೆ. ಹಾಗಾಗಿ ಈ ವೇಳೆ ಸಾಕಷ್ಟು ಟ್ರಾಫಿಕ್​ ಜಾಮ್ ಉಂಟಾಗುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:32 pm, Mon, 25 September 23